ದಾವಣಗೆರೆ:ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಕೈಗಾರಿಕೆಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ತಮ್ಮ ಸರ್ಕಾರದ ವಿರುದ್ಧ ಹಿರಿಯ ಕಾಂಗ್ರೆಸ್(Congress)ಶಾಸಕ ಡಾ.ಶಾಮನೂರು ಶಿವಶಂಕರಪ್ಪ(Shamanuru Shivashankarappa)ಕಿಡಿಕಾರಿದ್ದಾರೆ.
ಇದನ್ನೂ ಓದಿ:‘ಗೃಹಜ್ಯೋತಿ ಯೋಜನೆ’ ಪಡೆಯಲು ನೋಂದಣಿ ದಿನಾಂಕ ಪ್ರಕಟ; ಯಾವಾಗ ಪ್ರಾರಂಭ? ಇಲ್ಲಿದೆ ಮಾಹಿತಿ
ರಾಜ್ಯ ಸರ್ಕಾರ ಘೋಷಿಸಿದ ಉಚಿತ ವಿದ್ಯುತ್ ಯೋಜನೆ(Free Elecrticity Scheme)ಸೇರಿದಂತೆ ಇತರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, “ವಿದ್ಯುತ್ ದರ ಏರಿಕೆಯಿಂದ ಕೃಷಿ ಆಧರಿತ ಅಕ್ಕಿ ಗಿರಣಿಗಳಿಂದ ಹಿಡಿದು ಎಲ್ಲ ರೀತಿಯ ಕೈಗಾರಿಕಾ ಘಟಕಗಳಿಗೆ ತೀವ್ರ ಹೊಡೆತ ಬೀಳಲಿದೆ” ಎಂದು ಹೇಳಿದರು.
“ಗ್ಯಾರಂಟಿ ಯೋಜನೆಯಡಿ ಘೋಷಿಸಿದಂತೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿರುವುದಕ್ಕೆ ಅತೀವ ಸಂತಸವಿದೆ. ಇದನ್ನು ಮುಂದುವರಿಸಬೇಕು. ಆದರೆ ವಿದ್ಯುತ್ ದರ ಹೆಚ್ಚಿಸಿ ಕೈಗಾರಿಕೆಗಳಿಗೆ ಬರೆ ಎಳೆಯಬಾರದು. ಕೆಎಸ್​ಆರ್‌ಟಿಸಿ ಬಿಜೆಪಿ ಸರ್ಕಾರ ಇದ್ದಾಗಲೇ ಬೆಲೆ ಏರಿಕೆಗೆ ಪ್ರಸ್ತಾವ ಸಲ್ಲಿಸಿತ್ತು ನಿಜ. ಆದ್ರೆ, ಈಗ ನಮ್ಮವರು ಈ ಪ್ರಸ್ತಾವವನ್ನು ತಿರಸ್ಕರಿಸಬೇಕಿತ್ತು” ಎಂದು ಹೇಳಿದರು.
ಇದನ್ನೂ ಓದಿ:‘ಇನ್ಮುಂದೆ ಈ ಶೋಕಾಚರಣೆ ಬಿಜೆಪಿಗೆ ನಿರಂತರವಾಗಿರಲಿದೆ’; ಕಾಂಗ್ರೆಸ್ ಹೀಗೆ ಹೇಳಲು ಕಾರಣವೇನು?
“ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತದೆ. ಒಂದು ಕೈಯಲ್ಲಿ ಸೌಲಭ್ಯ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಡಂತೆ ಆಗಬಾರದು. ಗ್ಯಾರಂಟಿ ಯೋಜನೆಗಳ ಜಾರಿಗೆ ಷರತ್ತುಗಳನ್ನು ವಿಧಿಸಬಾರದು. ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಗುರುತಿನ ಚೀಟಿ ಕೇಳಬಾರದು. ಸೀರೆ ಉಟ್ಟುಕೊಂಡು ಬಂದರೆ ಮಹಿಳೆಯರು ಎಂದು ಗೊತ್ತಾಗುತ್ತದೆ. ಅದಕ್ಕೇಕೆ ಷರತ್ತು ಹಾಕಬೇಕು” ಎಂದು ರಾಜ್ಯ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು.
‘ನಾನು- ಬಸವರಾಜ ಬೊಮ್ಮಾಯಿ ಬೀಗರು’: ಶಾಮನೂರು ಶಿವಶಂಕರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
