ದಾವಣಗೆರೆ:ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯ ಹೊರ ವಲಯದಲ್ಲಿರುವ ರೆಸಾರ್ಟ್​​​ನಲ್ಲಿ ಭೇಟಿ ಮಾಡಿದ್ದಾರೆ. ಈ ಕುರಿತಾಗಿ ಕೆಲವು ಊಹಾಪೋಹಗಳು ಹರಿದಾಡುತ್ತಿವೆ.
ರಾಜಕೀಯ ಚರ್ಚೆ ನಡೆದಿದೆ ಆ ಬಗ್ಗೆ ನಾನು ಚರ್ಚೆ ಮಾಡಲ್ಲ:
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಬೊಮ್ಮಾಯಿ ನಾವು ಬೀಗರು. ಚುನಾವಣೆ ಆದ ನಂತರ ಅವರನ್ನ ಭೇಟಿ ಆಗಿರಲಿಲ್ಲ. ಅವರು ಶಾಸಕರಾಗಿ ಆಯ್ಕೆಯಾದರು ನಾನು ಆದೆ. ಚುನಾವಣೆ ಆದ ನಂತರ ಭೇಟಿ ಆದೇವು ಹೀಗೆ ಸಂಬಂಧ ಮುಂದುವರೆಯಲಿ ಎಂದು ಮಾತನಾಡಿದ್ದೇವೆ ಅಷ್ಟೆ. ರಾಜಕೀಯ ಚರ್ಚೆ ನಡೆದಿದೆ ಆ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದಿದ್ದಾರೆ.
ಪ್ರತಾಪ್ ಸಿಂಹ ಬಗ್ಗೆ ವ್ಯಂಗ್ಯ ಮಾಡಿದ ಶಾಮನೂರು ಶಿವಶಂಕರಪ್ಪ, ಪ್ರತಾಪ್ ಸಿಂಹ ಬಾಯಿ ಬಂದ ಹಾಗೆ ಮತನಾಡ್ತಾನೆ ಅವನ ಬಗ್ಗೆ ನಂಗೆ ಗೊತ್ತಿಲ್ವಾ? ಜಾತಿ ಜನಗಣತಿ ಬಿಡುಗಡೆ ವಿಚಾರವಾಗಿ ಲಿಂಗಾಯತ ಮಹಾಸಭಾಸ ಸಭೆ ಕರೆದು ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿದ ನಂತರ ಬಿಡುಗಡೆ ಮಾಡಬೇಕಾ? ಬೇಡವಾ? ಅನ್ನೋ ಬಗ್ಗೆ ಚರ್ಚೆ ಮಾಡುತ್ತೇವೆ ಎಮದು ತಿಳಿಸಿದ್ದಾರೆ.
ತಮ್ಮದೇ ಸರ್ಕಾರದ ಬಗ್ಗೆ ಕಿಡಿ:
ಗ್ಯಾರಂಟಿ ಯೋಜನೆಯನ್ನ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು. KERC ಅವರು ಬಿಜೆಪಿ ಸರ್ಕಾರದಲ್ಲಿದ್ದಾಗಲೇ ಬೆಲೆ ಏರಿಸಲು ಪ್ರಸ್ತಾವ‌ನೆ ಸಲ್ಲಿಸಿದ್ದರು. ಆದರೆ ಬಿಜೆಪಿಯವರು ವಿದ್ಯುತ್ ದರ ಹೆಚ್ಚಿಸಲು ಸಹಿ ಮಾಡಿರಲಿಲ್ಲ. ಇವರು ಏನು ಮಾಡಿದ್ದಾರೋ ನನಗೆ ಗೊತ್ತಿಲ್ಲ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊಡೆತು ಬೀಳುತ್ತದೆ. ದರ ಏರಿಕೆ ಮಾಡೋದು ಖಂಡಿಷನ್ ಹಾಕೋದು ಮಾಡಬಾರದು ಎಂದು ತಮ್ಮದೇ ಸರ್ಕಾರದ ಬಗ್ಗೆ ಕಿಡಿ ಕಾರಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ.
ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ‌ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು…
— Basavaraj S Bommai (@BSBommai)June 14, 2023
ಸಿರೇ ಉಟ್ಕೊಂಡು ಬಂದ್ರೆ ಹೆಂಗಸರು ಅಂತ ಗೊತ್ತಾಗುತ್ತೆ:
ಬಸ್​​ನಲ್ಲಿ ಓಡಾಡೋ ಮಹಿಳೆಯರಿಗೆ ಯಾವುದೇ ರೀತಿ ಗುರುತಿನ ಚೀಟಿ ಕೇಳಬಾರದು. ಅವರು ಸಿರೇ ಉಟ್ಕೊಂಡು ಬಂದ್ರೇನೆ ಗೊತ್ತಾಗುತ್ತೆ ಅವರು ಹೆಂಗಸರು ಅಂತ. ಈ ರೀತಿ ಖಂಡಿಷಸ್​​ಗಳನ್ನು ಹಾಕಬಾರದು. ನಾನು ಕಾಂಗ್ರೆಸ್ ಶಾಸಕನಾಗಿಯೇ ಹೇಳುತಿದ್ದೇನೆ ಅಂತ ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ಮಾಡಿದ್ದಾರೆ.
ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು:
ಕಾಂಗ್ರೆಸ್ ಹಿರಿಯ ನಾಯಕನ ಜೊತೆ ಭೇಟಿ ಮಾತುಕತೆ ಇಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು. ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕೀಯ ವಿಚಾರಗಳೇನು ಇಲ್ಲ, ಇದೊಂದು ಸೌಹಾರ್ದಯುತ ಭೇಟಿಯಷ್ಟೆ ಎಂದಿದ್ದಾರೆ.
ಕಲುಷಿತ ನೀರು ಕುಡಿದು 18 ಮೇಕೆಗಳು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 3 =
Remember me
