ಬೆಂಗಳೂರು:ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅವಹೇಳನ ಮಾಡಿರುವ ವಿಡಿಯೋವನ್ನು ಜಾಲತಾಣ ದಲ್ಲಿ ಹರಿಬಿಡಲಾಗಿದ್ದು, ಮಹಾರಾಷ್ಟ್ರ ಮೂಲದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟರಾಜ್ ಸಾಗರನಹಳ್ಳಿ ಎಂಬುವರು ನೀಡಿದ ದೂರಿನ ಮೇರೆಗೆ, ಸೊಲ್ಲಾಪುರ ಮೂಲದ ಅವಿನಾಶ್ ಭೋಸ್ಕರ್ ಎಂಬಾತನ ವಿರá-ದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದೂರಿನಲ್ಲಿ ಏನಿದೆ?: ಬಸವವಾದಿ ತತ್ವದ ಅನುಯಾಯಿಗಳ ಅಂತ್ಯವನ್ನು ನೋಡಬೇಡಿ. ಇತ್ತೀಚೆಗೆ ನಿಮ್ಮ ನಾಟಕಗಳು ಹೆಚ್ಚಾಗಿವೆ. ವೀರಶೈವ ಮತ್ತು ವೈದಿಕ ಸಮುದಾಯ ನಿಮಗೆ ಕೊನೇ ಎಚ್ಚರಿಕೆ ನೀಡುತ್ತಿದೆ. ಬಸವಣ್ಣನಿಗೆ ಪೂಜೆ ಮಾಡುವವರು ಮಾತ್ರ ಲಿಂಗಾಯತರೇ? ನಾವು ಮರಾಠಿ ಲಿಂಗಾಯತರು.
ಬಸವಣ್ಣನ ಭಕ್ತಿ ಏನು ಎಂಬುದನ್ನು ಮಹಾರಾಷ್ಟ್ರಕ್ಕೆ ಬಂದರೆ ತೋರಿಸುತ್ತೇವೆ. ‘ಕರ್ನಾಟಕದ ಲಿಂಗಾಯತ ಸಹೋದರರೇ ನೀವು ಸುಮ್ಮನೆ ಇದ್ದರೆ ನಾವು ಲಿಂಗಾಯತರು ಎಂದು ಹೇಳುವವರೇ ಇಲ್ಲದಂತಾಗುತ್ತಾರೆ’ ಎಂದು ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಹೇಳುತ್ತಾ ಅವಹೇಳನಕಾರಿಯಾಗಿ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಕಲಿ ಖಾತೆ ತೆರೆದು ವಿಡಿಯೋ ಹರಿಬಿಟ್ಟಿದ್ದಾರೆ. ಈ ರೀತಿ ಉದ್ದೇಶಪೂರ್ವಕವಾಗಿ ಲಿಂಗಾಯತ, ವೀರಶೈವ ಧರ್ಮ ಪ್ರಮುಖರ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಿ, ಗುಂಪು ಸಂಘರ್ಷ ಉದ್ಭವಿಸುವಂತೆ ಸಂಚು ರೂಪಿಸಿದ್ದಾರೆ. ಅಲ್ಲದೆ, ಧರ್ಮದ ಬಗ್ಗೆ ಪ್ರಚೋದನಾತ್ಮಕವಾಗಿ ಮಾತನಾಡಿದ್ದಲ್ಲದೇ ಕರ್ನಾಟಕ- ಮಹಾರಾಷ್ಟ್ರದ ಸಾಮರಸ್ಯ ಕದಡಲು ಯತ್ನಿಸಿದ್ದಾರೆ. ಕೃತ್ಯ ಎಸಗಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಪಿಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಸಿವಿನಿಂದ ಕಂಗೆಟ್ಟು ಸತ್ತ ನಾಯಿಯ ಮಾಂಸವನ್ನೇ ತಿಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
