ಕೋಲಾರ:ಇಂದು ‘ನೋಡಿ ಸ್ವಾಮಿ ನಾವಿರೋದು ಹೀಗೆ..’ ಎಂಬ ಹಾಡಿನ ಮೂಲಕ ಮನೆಮಾತಾಗಿದ್ದ ನಟ ಶಂಕರ್​​​ ನಾಗ್​​​​ ಹುಟ್ಟುಹಬ್ಬ. ಕರಾಟೆ ಕಿಂಗ್ ಶಂಕರ್ ನಾಗ್ ಹುಟ್ಟು‌ ಹಬ್ಬವನ್ನು ಕೋಲಾರ ಜಿಲ್ಲೆಯ ಹಲವೆಡೆ ಅಭಿಮಾನಿಗಳು ಆಚರಿಸಿದರು.
ಕರ್ನಾಟಕದಾದ್ಯಂತ ಸಂಚರಿಸುವ ಹಲವು ಆಟೋಗಳ ಮೇಲೆ ಇಂದಿಗೂ ನಗುಮೊಗದ ಶಂಕರ್​​ ನಾಗ್​​​​ ಚಿತ್ರವನ್ನು ಕಾಣಬಹುದು. ಆ ಮಟ್ಟಿಗೆ ಶಂಕರ್​​​ ತಮ್ಮ ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ಇವತ್ತು ಮಾಲೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಶಂಕರ್ ನಾಗ್ ಬರ್ತಡೇಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕರುನಾಡು ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಶಂಕರ್ ನಾಗ್ ಪುತ್ಥಳಿ ಸ್ಥಾಪಿಸಿ, ಪುಷ್ಪಾರ್ಚನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಇನ್ನಿಬ್ಬರು ಜನಪ್ರಿಯ ನಟರನ್ನು ಶಂಕರ್​​​ ನಾಗ್​​​ ಅಭಿಮಾನಿ ಬಳಗ ಸ್ಮರಿಸಿಕೊಂಡಿತು. ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್​​​ ಪುತ್ಥಳಿಯನ್ನೂ ಕೂಡ ಸ್ಥಾಪಿಸಲಾಯಿತು. ನಂತರ ಮೂವರು ಜನಪ್ರಿಯ ನಟರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಅಭಿಮಾನ ಮೆರೆದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine − 7 =
Remember me
