ಸಿದ್ಧರಾಮನ ರಾಜಸಿಕ ಅಹಂಕಾರ ಅಡಗಿ ಸಾತ್ವಿಕಾಹಂಕಾರವು ಮೊಳೆಯಿತು. ತನ್ನ ಮುಂದೆ ನಿಂತಿರುವವನು ಸಾಕ್ಷಾತ್ ಈಶ್ವರನೆಂದೇ ಅವನು ಭಾವಿಸಿದನು. ಸಿದ್ಧರಾಮನಿಗೆ ಅಲ್ಲಮನ ಪೂರ್ವಾಪರಗಳು ತಿಳಿದಿರಲಿಲ್ಲ. ಅಲ್ಲಮನು ಸಿದ್ಧರಾಮನನ್ನು ಸಂತವಿಸಿದನು. ಸಾಮಾನ್ಯ ಜಂಗಮವೇಷದಿಂದ ಬಂದ ಅಲ್ಲಮನನ್ನು ಸಾಮಾನ್ಯ ವ್ಯಕ್ತಿಯೆಂದೇ ಸಿದ್ಧರಾಮ ಭಾವಿಸಿದ್ದನು. ಪಕ್ಷಪಾತದಿಂದ ಕೆಲವರು ಈತ ಉತ್ತಮ, ಈತ ಅಧಮ ಎಂದು ಭಾವಿಸುತ್ತಾರೆ. ಇದು ಸಾಮಾನ್ಯ ತಿಳಿವಳಿಕೆಯಿಂದ ಸಂಭವಿಸುತ್ತದೆ. ಪ್ರತಿಯೊಬ್ಬರನ್ನು ಸಮಭಾವದಿಂದ ಗ್ರಹಿಸಲು ಪಕ್ಷಪಾತ ಬುದ್ಧಿಯು ಬಿಡುವುದಿಲ್ಲ. ಸರ್ವಸಮಭಾವವನ್ನು ನಮ್ಮಲ್ಲಿ ತುಂಬಿಕೊಳ್ಳುವುದು ಅಷ್ಟು ಸುಲಭವಲ್ಲ! ಇದು ನಮ್ಮಲ್ಲಿ ಮೊಳೆದೋರಬೇಕಾದರೆ ಗುರುವಿನ ಅನುಗ್ರಹ ನಮಗೆ ಬೇಕೇಬೇಕು. ಅಂಥ ಗುರುವಿಗಾಗಿ ಸಿದ್ಧರಾಮನು ಕಾಯುತ್ತಿದ್ದ. ಇದು ಕಾಲಲಬ್ಧಿಯಿಂದಾಗಿ ಸಾಧ್ಯವಾಯಿತು. ಸಿದ್ಧರಾಮ-ಅಲ್ಲಮರ ಈ ಭೇಟಿ ಶಿವಪದವು ಕರುಣಿಸಿದ್ದೆಂದು ತೋರುತ್ತದೆ. ಶಿವಕಾಲದ ಮಹಿಮೆ ದೊಡ್ಡದು!
ಸಿದ್ಧರಾಮನು ಅಲ್ಲಮನ ಸಾನ್ನಿಧ್ಯಕ್ಕೆ ಬಂದೊಡನೆ ಅವನಲ್ಲಿ ಸರ್ವಸಮತಾಭಾವವು ಬೆಳೆಯತೊಡಗಿತು. ಆಗ ಸಿದ್ಧರಾಮನ ಮನಃಸ್ಥಿತಿ ಹೇಗಿತ್ತೆಂದು ಚಾಮರಸ ಹೀಗೆ ತಿಳಿಸುತ್ತಾನೆ:
ಎನಗೆ ನಿಮ್ಮಯ ದರ್ಶನ ಸ್ಪ/ರ್ಶನವೆ ಸರ್ವಸಮಾಧಿಯೆನಗಾ/ಮನುಮುನಿ ತ್ರಿದಶಗಳಿದಿರೇ ದೇವಾ ಕೇಳಿನ್ನು/ಮನವೊಲಿದು ನೀವಿನ್ನು ಮಲ್ಲಿಕಾ/ರ್ಜುನನ ನೋಡಲು ಬಿಜಯ ಮಾಡುವುದೆನುತ ತನ್ನಯ ಮಠಕೆ ಕರೆದನು ರಾಮನಲ್ಲಮನ (ಪ್ರ.ಲೀ. 13-44)
ನನಗೆ ನಿಮ್ಮ ದರ್ಶನ-ಸ್ಪರ್ಶನಗಳೇ ಸರ್ವಸಮಾಧಿ ಎನಿಸುತ್ತವೆ. ನೀವು ನನ್ನ ಮೇಲೆ ಕೃಪೆ ತೋರಿಸಿದ್ದೀರಿ ಅಷ್ಟು ಸಾಕು. ಇನ್ನು ನೀವು ಮಲ್ಲಿಕಾರ್ಜುನನನ್ನು ಕಾಣಲು ಮಠಕ್ಕೆ ಬರಬೇಕು ಎಂದು ಸಿದ್ಧರಾಮನು ಹಲುಬಿದನು. ಅಲ್ಲಮನಿಗೆ ಅವನ ಮಾತನ್ನು ಕೇಳಿ ನಗೆ ಉಕ್ಕಿತು. ನಿಜವಾದ ಶಿವಯೋಗಿಯನ್ನು ಕಂಡಾಗ ಎರಡು ಬಗೆಯ ಶಿವಭಾವಗಳು ಅಂಕುರಿಸತೊಡಗುತ್ತವೆ! ಮೊದಲನೆಯದು ದರ್ಶನ; ಎರಡನೆಯದು ಸ್ಪರ್ಶನ. ಇದೇ ನಿಜವಾದ ಸಮಾಧಿಸ್ಥಿತಿ. ಈ ಯೌಗಿಕಭಾವ ಸಿದ್ಧರಾಮನಿಗೆ ಗೋಚರಿಸಿದೆ. ಅಲ್ಲಮನ ಪ್ರಭಾಪೂರ್ಣತೆ ಸಾಮಾನ್ಯವಾದುದಲ್ಲ. ಆ ಪ್ರಭಾಪೂರ್ಣತೆಯಲ್ಲಿ ಸಿದ್ಧರಾಮ ಕರಗಿಹೋಗಿದ್ದಾನೆ. ಆದರೆ, ಇನ್ನೂ ಅವನಲ್ಲಿ ಕಿಂಚಿತ್ ಸ್ವಾರ್ಥಭಾವ ಅಡಗಿದೆ. ಮಲ್ಲಿಕಾರ್ಜುನನನ್ನು ಕಾಣಲು ಮಠಕ್ಕೆ ಬರಬೇಕೆಂದು ಕೇಳುತ್ತಿದ್ದಾನೆ!
ಅಲ್ಲಮನು ಸಿದ್ಧರಾಮನ ಮಾತನ್ನು ಕೇಳಿ ಬೆರಗಾದನು. ಆಗ ಅಲ್ಲಮನು ‘‘ಶಿವತ್ವವು ಎಲ್ಲಾ ಕಡೆ ಉಂಟು. ಮನೆಯೇನು? ಮಠವೇನು? ಅಡವಿಯೇನು? ಊರೇನು? . ಶರಣರು ನುಡಿದುದೇ ಶಿವತತ್ತ್ವ. ಅವರು ನಂಬಿ ನಡೆದುದೇ ಶಿವಾಗಮ, ಅವರು ತುಳಿದ ಹಾದಿಯೇ ಶಿವಮಾರ್ಗ ಎಂದು ಮನವರಿಕೆ ಮಾಡಿಕೊಟ್ಟನು. ಯಾವುದೇ ತತ್ತ್ವವನ್ನು ಸುಖಾಸುಮ್ಮನೆ ಎಲ್ಲರಿಗೂ ಹೇಳಲು ಬರುವುದಿಲ್ಲ. ಈ ತತ್ತ್ವವನ್ನು ಆಲಿಸುವವನಿಗೆ ಮನಸ್ಸು ಪರಿಪಕ್ವಗೊಂಡಿರಬೇಕು. ಕೇವಲ ಬದ್ಧಜೀವಿಗಳಿಗೆ ಶಿವಯೋಗವನ್ನು ಬಿತ್ತಲಾಗದು. ಶಿವತ್ವವನ್ನು ಮನವರಿಕೆ ಮಾಡಿಕೊಳ್ಳಬೇಕಾದರೆ, ನಾವು ಎಲ್ಲವನ್ನು ಪರಿತ್ಯಾಗ ಮಾಡಬೇಕು. ಅದು ಆಗದೆ ತ್ಯಾಗಕ್ಕೆ ಬೆಲೆ ಇರುವುದಿಲ್ಲ’. ಇಷ್ಟು ಹೇಳಿದ ಅಲ್ಲಮ ಸಿದ್ಧರಾಮನನ್ನು ದೃಷ್ಟಿಸಿದ. ಆಗ ಸಿದ್ಧರಾಮನು ತನ್ನ ತಲೆಯನ್ನು ಅಲ್ಲಮನ ಪಾದದಲ್ಲಿಟ್ಟು ಕಂಬನಿಯನ್ನು ಸುರಿಸಿದನು. ಅಲ್ಲಮನು ಸಿದ್ಧರಾಮನನ್ನು ಹಿಡಿದೆತ್ತಿ ತನ್ನ ಹತ್ತಿರ ಕರೆದುಕೊಂಡು ಕೈಹಿಡಿದು ಕುಳ್ಳಿರಿಸಿಕೊಂಡನು. ಹೆತ್ತ ತಂದೆ ಯಾವ ರೀತಿಯಲ್ಲಿ ಮಗನನ್ನು ಸಮಾಧಾನಪಡಿಸುವನೋ ಅದೇ ರೀತಿ ಅಲ್ಲಮನು ಸಿದ್ಧರಾಮನನ್ನು ಸಂತವಿಸಿದನು. ಆನಂತರ ಲೋಕತತ್ವದ ಸೂಕ್ಷ್ಮತೆಗಳನ್ನು ತಿಳಿಸಿಕೊಟ್ಟನು.
ಈ ಜಗತ್ತಿನಲ್ಲಿ ಎಂಬತ್ತುನಾಲ್ಕು ಲಕ್ಷ ಜೀವಿಗಳಿದ್ದಾರೆ. ಈ ಜೀವಿಗಳಲ್ಲಿ ಮಾನವ ಜಾತಿಯು ಎಲ್ಲಾ ಕರ್ಮಗಳಿಗೂ ಮೂಲ. ಶಿವತ್ವವನ್ನು ಬಯಸುವ ಸಾಧಕರು ತಮ್ಮಇಂದ್ರಿಯಗಳನ್ನು ಬಂಧಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ, ಮನಸ್ಸನ್ನು ಮೊದಲು ನಿಗ್ರಹಿಸಿಕೊಳ್ಳಬೇಕು. ಇದೊಂದೇ ಸಾಧಕರಿಗೆ ಇರುವ ದಾರಿ. ಸಾಧಕರು ಶಬ್ದ, ರೂಪ, ಸ್ಪರ್ಶ, ರಸ ಮತ್ತು ಗಂಧಗಳಿಗೆ ವ್ಯಾಮೋಹಿತರಾಗ ಕೂಡದು. ಇವು ಅಡ್ಡಹಾದಿಗೆ ಕರೆದುಕೊಂಡು ಹೋಗುತ್ತವೆ. ಸಿದ್ಧರಾಮನು ಕೀರ್ತಿಕಾಮನೆಗಳಿಗೆ ಬಲಿಯಾಗಿದ್ದಾನೆ. ಅದರಿಂದ ಹೊರಬರಬೇಕೆಂದು ಅಲ್ಲಮ ಹಿತವಾಗಿ ತಿಳಿಸಿಕೊಟ್ಟ. ಸಾಮಾನ್ಯರು ಇಂದ್ರಿಯಚಾಪಲ್ಯಕ್ಕೆ ಒಳಗಾಗುವುದೇನೋ ನಿಜ. ಆದರೆ, ಶಿವಮಾರ್ಗದಲ್ಲಿ ನಡೆಯುವವರು ಸಾಮಾನ್ಯರಂತೆ ನಡೆಯಲಾದೀತೆ? ಕೀರ್ತಿಯ ಬೆನ್ನು ಹತ್ತಿದರೆ ಇದರಿಂದ ಬಂದ ಫಲವೇನು? ಹೀಗಾಗಿ, ಕೀರ್ತಿಗೆ ವಿಮುಖನಾಗಿ ಮನಸ್ಸನ್ನು ನಿಗ್ರಹಿಸಿಕೊಂಡರೆ ಶಿವತ್ವದ ಪಥವು ದೊರಕುವುದು! ಇದು ಅಲ್ಲಮನ ಲೋಕತತ್ತ್ವದ ವಿವರಣೆ!
ಸಿದ್ಧರಾಮನು ಅಲ್ಲಮನ ಮಾತುಗಳನ್ನು ಕೇಳುತ್ತ ನತಮಸ್ತಕನಾದನು. ಅಲ್ಲಮನ ಲೋಕತತ್ವ ಕುರಿತ ವಿಶ್ಲೇಷಣೆ ಅವನಲ್ಲಿ ತುಸುತುಸುವೇ ತುಂಬಿಕೊಂಡಿತು. ಆಗ ಸಿದ್ಧರಾಮನು ತನ್ನಲ್ಲಿ ಉಂಟಾದ ಸಂದೇಹವನ್ನು ಅಲ್ಲಮನಲ್ಲಿ ನಿವೇದಿಸಿಕೊಂಡನು!
ಏಕಕಾಲದಲ್ಲಿ ಫೇಸ್​ಬುಕ್, ಇನ್​ಸ್ಟಾಗ್ರಾಂ ಸರ್ವರ್​ ಡೌನ್

ಕರಿಮಣಿ ಮಾಲೀಕ ಯಾರೆಂದು ರಿವೀಲ್​ ಮಾಡಿದ ದೀಪಿಕಾ ದಾಸ್; ಸೀಕ್ರೆಟ್​ ಮದುವೆಗೆ ಕಾರಣ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
