| ಅರವಿಂದ ಅಕ್ಲಾಪುರ ಶಿವಮೊಗ್ಗ
ಶರಾವತಿ ಕಣಿವೆಯಲ್ಲಿ 2000 ಮೆಗಾವಾಟ್ ವಿದ್ಯುತ್ ಯೋಜನೆ ಕಾರ್ಯಗತವಾಗುವುದೇ ಎಂಬ ಪ್ರಶ್ನೆಗೆ ಈ ವರ್ಷದ ಅಂತ್ಯದಲ್ಲಿ ಉತ್ತರ ಸಿಗಲಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ (ಶರಾವತಿ ಭೂಗರ್ಭ ವಿದ್ಯುತ್ ಯೋಜನೆ) ಅನುಷ್ಠಾನಕ್ಕೆ ಈಗ ಗುರುತಿಸಿರುವ ಭೂಮಿ ಸೂಕ್ತವೇ ಎಂಬುದು ಮೂರು ತಿಂಗಳಲ್ಲಿ ಸ್ಪಷ್ಟವಾಗಲಿದೆ.
ನೀರು ಸಂಗ್ರಹ ಟ್ಯಾಂಕ್ (ಸರ್ಜ್ ಟ್ಯಾಂಕ್) ಹಾಗೂ ವಿದ್ಯುತ್ ಉತ್ಪಾ ದನಾ ಘಟಕ (ಪವರ್ ಸ್ಟೇಷನ್) ನಿರ್ವ ಣಕ್ಕೆ ಗುರುತಿಸಿರುವ ಸ್ಥಳದಲ್ಲಿ ಮಣ್ಣಿನ ರಚನೆ ಅಧ್ಯಯನಕ್ಕೆ ಕೈಗೊಂಡಿರುವ ಡ್ರಿಲ್ಲಿಂಗ್ ಮುಕ್ತಾಯ ಹಂತದಲ್ಲಿದೆ.
ಡ್ರಿಲ್ಲಿಂಗ್ ಏಕೆ? ಹೇಗೆ?:ಭೂಗರ್ಭ ವಿದ್ಯುತ್ ಯೋಜನೆ ಸಂಪೂರ್ಣವಾಗಿ ಭೂಮಿಯೊಳಗೇ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಸುರಂಗ ಕೊರೆಯಬೇಕು. ಹೀಗಾಗಿ ಭೂಮಿಯ ಮಣ್ಣಿನ ರಚನೆ ತಿಳಿಯುವುದು ಅವಶ್ಯಕ. ಪವರ್ ಪ್ರಾಜೆಕ್ಟ್ ನಿರ್ವಿುಸಬೇಕಿರುವ ಸ್ಥಳ ನೆಲದ ಮಟ್ಟದಿಂದ 1,400 ಅಡಿಗಳಷ್ಟು ಒಳಗಿರುತ್ತದೆ. ಬಂಡೆಕಲ್ಲು ಇದ್ದರೆ ಸುರಂಗ ಮಾರ್ಗ ಕುಸಿಯುವುದಿಲ್ಲ. ಹೀಗಾಗಿ ಡ್ರಿಲ್ಲಿಂಗ್ ಕಾರ್ಯ ನಡೆಸಲಾಗುತ್ತಿದೆ. ನೀರು ಸಂಗ್ರಹ ಟ್ಯಾಂಕ್ ಸ್ಥಳದಲ್ಲಿ 86 ಮೀಟರ್ ಹಾಗೂ ಪವರ್ ಸ್ಟೇಷನ್ ಜಾಗದಲ್ಲಿ 500 ಮೀಟರ್ ಆಳದ ಮಣ್ಣನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ನಿತ್ಯ ಗರಿಷ್ಠ 6 ಮೀಟರ್ ಡ್ರಿಲ್ಲಿಂಗ್ ಮಾಡಬಹುದು. ಆದರೆ ಯಂತ್ರ ಕೈಕೊಟ್ಟರೆ, ಅಥವಾ ಹೆಚ್ಚು ಮಳೆ ಬಂದರೆ ಎರಡು ಮೀಟರ್ ಮಾತ್ರ ಡಿಲ್ಲಿಂಗ್ ಮಾಡಲು ಸಾಧ್ಯವಾಗುತ್ತಿತ್ತು. ಹೀಗಾಗಿ ಡ್ರಿಲ್ಲಿಂಗ್ ಕಾರ್ಯ ವಿಳಂಬವಾಯಿತು ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ಹರಿಯಾಣ ಗುರುಗ್ರಾಮದ ವ್ಯಾಪ್​ಕೋಸ್ ಲಿಮಿಟೆಡ್ ಕಂಪನಿ ಹಾಗೂ ಅರಿಹಂತ್ ಡ್ರಿಲ್ಲಿಂಗ್ಸ್ ಜಂಟಿಯಾಗಿ ಈಗ ಕೆಲಸ ಮಾಡುತ್ತಿವೆ.
ನಿಗದಿತ ಆಳದಿಂದ ಸಂಗ್ರಹ ಮಾಡಿದ ಮಣ್ಣನ್ನು ಭಾರತೀಯ ಭೂ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗುತ್ತದೆ. ವಿಜ್ಞಾನಿಗಳು ಮಣ್ಣಿನ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ.ಇದನ್ನೂ ಓದಿ:ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!
ಏನಿದು ಯೋಜನೆ?:‘ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್’ ಹೆಸರಿನಲ್ಲಿ ಕೆಪಿಸಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಗೇರುಸೊಪ್ಪ ಹಿನ್ನೀರಿನಿಂದ ತಲಕಳಲೆ ಡ್ಯಾಂಗೆ ಪೈಪ್ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಅಲ್ಲಿಂದ ಹಿರೇಹೆನ್ನಿ ಬಳಿ ಪವರ್ ಸ್ಟೇಷನ್​ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಬಳಿಕ ಈ ನೀರು ಮತ್ತೆ ಗೇರುಸೊಪ್ಪ ತಲುಪಲಿದೆ.
ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವುದೇ ಅಪರೂಪವಾಗಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಮರುಬಳಕೆ ಮಾಡುವುದರೊಂದಿಗೆ ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳುವುದಕ್ಕೆ ಈ ಯೋಜನೆ ಅನುಕೂಲವಾಗಲಿದೆ ಎಂಬುದು ಕೆಪಿಸಿ ಅಧಿಕಾರಿಗಳ ಅಭಿಪ್ರಾಯ.
ಒಂದು ವೇಳೆ ಈ ಯೋಜನೆ ಸಂಪೂರ್ಣ ಕಾರ್ಯಗತವಾದರೆ ರಾಜ್ಯದ ಎರಡನೇ ಭೂಗರ್ಭ ಯೋಜನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಪ್ರಸ್ತುತ ವಾರಾಹಿ ಜಲವಿದ್ಯುತ್ ಯೋಜನೆ ಮೂಲಕ ನಾಲ್ಕು ಘಟಕಗಳಲ್ಲಿ 460 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದೀಗ ಎರಡನೇ ಭೂಗರ್ಭ ಯೋಜನೆಯಾಗಿ ‘ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್’ ರೂಪಿಸಲಾಗಿದೆ.ಇದನ್ನೂ ಓದಿ:ಕರೊನಾ ವೈರಸ್ ಗಾಳಿಯಲ್ಲಿ ಹರಡುತ್ತಾ, ಹೌದಾದರೆ ಹೇಗೆ? – ಶುರುವಾಗಿದೆ ಅಧ್ಯಯನ
‘ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್’ ಹೆಸರಿನಲ್ಲಿ ಎರಡು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ 2017ರಲ್ಲಿ 4,800 ಕೋಟಿ ರೂ. ಅಂದಾಜಿಸಲಾಗಿತ್ತು. ಐದು ವರ್ಷಗಳಲ್ಲಿ ಈ ಯೋಜನೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ 2022ಕ್ಕೆ ಇದು ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಇಲ್ಲ. ಹೀಗಾಗಿ ಯೋಜನಾ ವೆಚ್ಚ ಹೆಚ್ಚುವುದು ಬಹುತೇಕ ನಿಶ್ಚಿತ. ರಾಜ್ಯದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಎಸ್​ವಿಪಿ (ಶರಾವತಿ ಕಣಿವೆ ಪ್ರಾಜೆಕ್ಟ್) ಸಾಲಿಗೆ ಹೊಸ ಯೋಜನೆಯನ್ನು ಸೇರ್ಪಡೆ ಮಾಡಲು ಕೆಪಿಸಿ ಮುಂದಾಗಿದೆ.
ಸೆ.30ರಂದು ಈ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 16 =
Remember me
