ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ನನ್ನ ಮೇಲೆ ಸೈಬರ್​ ದಾಳಿ ತೀವ್ರವಾಗಿದೆ ಎಂದು ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ಅವರು ಗಂಭೀರ ಆರೋಪ ಮಾಡಿದ್ದಾರೆ.
ನಯನಾ ಅವರು ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ. ಚಿಕ್ಕಮಗಳೂರಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕಿ. ತನ್ನ ಖಾಸಗಿ ಜೀವನದ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವ ಮೂಲಕ ನನ್ನ ಮೇಲೆ ಸೈಬರ್​ ದಾಳಿ ನಡೆಸಲಾಗುತ್ತಿದೆ ಎಂದು ಆರೋಪ ಮಾಡಿರುವ ನಯನಾ, ಈ ವಿಚಾರದಲ್ಲಿ ತಮ್ಮ ದೃಢ ನಿಲುವು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:‘ಗ್ಯಾರಂಟಿ’ ಎಫೆಕ್ಟ್: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ!
ಚುನಾವಣೆಯಲ್ಲಿ ನನ್ನ ವಿರುದ್ಧ ಸೋತವರು ಭ್ರಮನಿರಸನಗೊಂಡು ಸೈಬರ್ ದಾಳಿ ಮಾಡಿಸುತ್ತಿದ್ದಾರೆ ಎಂದು ನಯನಾ ಪ್ರತಿಕ್ರಿಯಿಸಿದ್ದಾರೆ. ಇಂತ ದುಷ್ಕೃತ್ಯಗಳಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ ಎಂದಿರುವ ನಯನಾ, ಈ ಮೂರ್ಖರಿಗೆ ರಾಜಕೀಯ ಜೀವನ ಮತ್ತು ಖಾಸಗಿ ಜೀವನದ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
43 ವರ್ಷದ ನಯನಾ ಅವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡು ವಿರೋಧಿಗಳ ಸೈಬರ್​ ದಾಳಿಗೆ ಪ್ರತ್ಯುತ್ತರ ನೀಡಿದ್ದಾರೆ. ರಾಜಕಾರಣಿಯಾದ ಮಾತ್ರಕ್ಕೆ ಸಾಮಾನ್ಯವಾಗಿ ಇರಬಾರದಾ? ಮುಖವಾಡ ಹಾಕಿಕೊಂಡು ಯಾಕೆ ಜೀವನ ಮಾಡಬೇಕು? ರಾಜಕಾರಣಿಗಳು ಅಂದರೆ ಅವರು ಕೂಡ ಬೇರೆಯವರ ರೀತಿಯಲ್ಲಿ ಸಾಮಾನ್ಯರು. ನಾನು ಕೆಲವೊಮ್ಮೆ ಗೋವಾಗೆ ಹೋಗುತ್ತೇನೆ. ಅಲ್ಲಿ ಸೀರೆ ಉಟ್ಟಿಕೊಳ್ಳಲು ಆಗುತ್ತಾ? ಎನ್ನುವ ಮೂಲಕ ಖಡಕ್​ ಆಗಿ ತಿರುಗೇಟು ನೀಡಿದ್ದಾರೆ.
ನಯನಾ ಅವರ ವಿಡಿಯೋಗೆ ಸಾಕಷ್ಟು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಮೇಡಂ, ನೀವು ನಿಮ್ಮ ಕಾರ್ಯ ಮುಂದುವರೆಸಿ, ಯಾವುದಕ್ಕೂ ತೆಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಿಮ್ಮಿಂದ ಸಮಾಜ ಸೇವೆ ಮುಂದುವರಿಯಲಿ. ನೀವು ಮಾಡುವ ಅಭಿವೃದ್ಧಿ ಕೆಲಸಗಳೇ ವಿರೋಧಿಗಳಿಗೆ ಉತ್ತರ ಎಂದು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾರು​ ಖರೀದಿಸಿದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ಕುಟುಂಬ; ಇದೇ ನಿಜವಾದ ಪ್ರತಿಫಲ ಎಂದ ಆನಂದ್​ ಮಹೀಂದ್ರಾ
ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ.ಹೌದು… ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು.pic.twitter.com/04RJWUFeoH
— Nayana Jhawar /Nayana Motamma (@NayanaJhawar)May 20, 2023

ಅಂದಹಾಗೆ ನಯನಾ ಅವರು ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ದೀಪಕ್​ ದೊಡ್ಡಯ್ಯ ವಿರುದ್ಧ ಗೆಲುವು ದಾಖಲಿಸಿ, ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸೌಧದ ಪ್ರವೇಶಿಸಿದ್ದಾರೆ.(ಏಜೆನ್ಸೀಸ್​)
ಬಸ್ಸಿನಲ್ಲಿ ಮಹಿಳೆಯರಿಬ್ಬರ ಮಧ್ಯೆ ಕುಳಿತು ಕಾಮಚೇಷ್ಟೆ: ವಿಡಿಯೋ ಹರಿಬಿಟ್ಟು ಘಟನೆ ವಿವರಿಸಿದ ನಟಿ

ತಂದೆಯ ಎದುರೇ ಬಸ್ಸಿನಲ್ಲಿ ಅನುಭವಿಸಿದ ಕರಾಳ ಘಟನೆಯನ್ನು ವಿವರಿಸಿದ ನಟಿ ಆಂಡ್ರಿಯಾ ಜರೆಮಿಯ!

ಮದುವೆಯ ಬಂಧ ಆಗದಿರಲಿ ಆರ್ಥಿಕ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 1 =
Remember me
