ಬೆಂಗಳೂರು:ಜನವರಿ 27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿರುವ ಶಶಿಕಲಾ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಉಂಟಾಗಿದೆ. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಬುಧವಾರ ಬೆಳಗ್ಗೆಯೇ ವಿಶೇಷ ವೈದ್ಯರ ತಂಡ ಜೈಲಿಗೆ ತೆರಳಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಗುಟ್ಕಾ ಉಗುಳಲು ಹೋದವನಿಗೆ ಟ್ರ್ಯಾಕ್ಟರ್​ ರೂಪದಲ್ಲಿ ಎದುರಾದ ಜವರಾಯ!
ಶಶಿಕಲಾಗೆ ಉಸಿರಾಟದಲ್ಲಿ ತೊಂದರೆ ಉಂಟಾಗಿರುವುದಾಗಿ ತಿಳಿಸಲಾಗಿದೆ. ವೈದ್ಯೆ ಉಮಾ ಒಳಗೊಂಡಿರುವ ನಾಲ್ಕು ಜನರ ವೈದ್ಯರ ತಂಡ ಶಶಿಕಲಾಗೆ ಚಿಕಿತ್ಸೆ ನೀಡಲು ಪರಪ್ಪನ ಅಗ್ರಹಾರಕ್ಕೆ ತೆರಳಿದೆ. ತೀವ್ರ ಉಸಿರಾಟದ ತೊಂದರೆ ಆಗಿರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತು ಜೈಲಿನ ಅಧಿಕಾರಿಗಳ ಸಭೆ ನಡೆಸಿದ್ದು, ಸಭೆಯ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ಜೋ ಬೈಡೆನ್​ ಭಾಷಣಕ್ಕೆ ಕ್ಷಣಗಣನೆ… ಈ ಭಾರತೀಯನಿಗೆ ಸಿಗಲಿದೆ ಶ್ರೇಯಸ್ಸು…
ತಮಿಳುನಾಡು ಮಾಜಿ ಸಿಎಂ ದಿ ಜಯಲಲಿತಾ ಅಪ್ತೆ ಶಶಿಕಲಾ ಕಳೆದ ನಾಲ್ಕು ವರ್ಷದಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಗಿರುವ ಶಶಿಕಲಾ ಅವರು ಜನವರಿ 27ರಂದು ಬಿಡುಗಡೆಯಾಗಲಿದ್ದಾರೆ ಎಂದು ಪರಪ್ಪನ ಅಗ್ರಹಾರದ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಿನಿಮಾ ಸ್ಟೈಲ್​ನಲ್ಲಿ ಚಿನ್ನಮ್ಮ ಸ್ವಾಗತಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಪರಪ್ಪನ ಅಗ್ರಹಾರದಿಂದ ಮೆರವಣಿಗೆಯಲ್ಲಿ ಕರೆದೊಯ್ಯುಲು ಸಿದ್ಧತೆ ನಡೆಸಿದ್ದರು. ಐದು ಸಾವಿರ ಕಾರುಗಳ ಮೆರವಣಿಗೆಯಲ್ಲಿ ಕರೆದೊಯ್ಯಲು ಫ್ಲಾನ್ ಮಾಡಲಾಗಿತ್ತು. ಆದರೆ ಭದ್ರತೆಯ ಕಾರಣದಿಂದಾಗಿ ಯಾವುದೇ ಮೆರವಣಿಗೆ ಅವಕಾಶ ನೀಡಿಲ್ಲ. ಪರಪ್ಪನ ಅಗ್ರಹಾರದಿಂದ ಅತ್ತಿಬೆಲೆ ಗಡಿ ವರೆಗೂ ಅವಕಾಶ ನೀಡದಿರಲು ಕರ್ನಾಟಕ ಪೊಲೀಸರು ತೀರ್ಮಾನ ತೆಗೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)
ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
