ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್​ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಉಸಿರಾಟ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ಹೈಸ್ಕೂಲ್​ ಪಾಸಾದವರಿಗೂ ಇಲ್ಲಿದೆ ಉದ್ಯೋಗ: ಬುಕ್​ ಟ್ರಸ್ಟ್​ನಲ್ಲಿವೆ ಅವಕಾಶ
ಮಂಗಳವಾರ ರಾತ್ರಿಯಿಂದಲೇ ಶಶಿಕಲಾಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ವೈದ್ಯೆ ಉಮಾ ಅವರನ್ನು ಒಳಗೊಂದ ನಾಲ್ವರು ವೈದ್ಯರ ತಂಡ ಬುಧವಾರ ಬೆಳಗ್ಗೆಯೇ ಪರಪ್ಪನ ಅಗ್ರಹಾರಕ್ಕೆ ತೆರಳಿದ್ದು ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಉಸಿರಾಟ ತೊಂದರೆ ತೀವ್ರವಾದ ಹಿನ್ನೆಲೆಯಲ್ಲಿ, ಜೈಲಿನ ಅಧಿಕಾರಿಗಳು ಸಭೆ ನಡೆಸಿ, ನಂತರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. “ಉಸಿರಾಟ ತೊಂದರೆಯಿಂದಾಗಿ ಶಶಿಕಲಾ ಅವರನ್ನು ಇಲ್ಲಿಗೆ ಕರೆ ತರಲಾಗಿದೆ. ಇಜಿಸಿ ಸೇರಿ ಕೆಲ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ” ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ.ಮನೋಜ್ ಕುಮಾರ್ ತಿಳಿಸಿದ್ದಾರೆ.
ಶಶಿಕಲಾ ಅವರು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ನಮಗೆ ಸಂದೇಶ ಬಂದಿದೆ. ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಅವರ ಸ್ಥತಿ ಸ್ಥಿರವಾಗಿದೆ ಎಂದು ನಮಗೆ ತಿಳಿಸಲಾಗಿದೆ ಎಂದು ಶಶಿಕಲಾ ಅವರ ಸಲಹೆಗಾರ ಎನ್ ರಾಜಾ ಸೆಂಥೂರ್ ಪಾಂಡಿಯನ್ ತಿಳಿಸಿದ್ದಾರೆ.
ಇದನ್ನೂ ಓದಿ:ನೂರಾರು ಜನರ ಎದುರಲ್ಲೇ ಮಹಿಳಾ ಪೊಲೀಸ್​ ಮೇಲೆ ಶಾಸಕಿ ಸೌಮ್ಯರೆಡ್ಡಿ ದಬ್ಬಾಳಿಕೆ! ಹಲ್ಲೆಯ ದೃಶ್ಯ ವೈರಲ್​
ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶಶಿಕಲಾ ಇದೇ ತಿಂಗಳ 27ನೇ ತಾರೀಖಿನಂದು ಬಿಡುಗಡೆಯಾಗಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ. (ಏಜೆನ್ಸೀಸ್​)
ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − one =
Remember me
