ಮಂಗಳೂರು:ಕರೊನಾ ಮಹಾಮಾರಿ ದಾಂಗುಡಿ ಇಟ್ಟ ಮೇಲೆ ಅದರಷ್ಟೇ ಸುದ್ದಿಯಾಗಿದ್ದು, ಮೊಬೈಲ್​, ಫೋನ್​ಗಳಲ್ಲಿ ಬರುತ್ತಿದ್ದ ಕರೊನಾ ಕಾಲರ್​ ಟ್ಯೂನ್​.
ಯಾರಿಗಾದರೂ ಫೋನ್​ ಮಾಡಿದರೆ, ಅವರ ಫೋನ್​ ರಿಂಗಾಗಲು ಈ ಕಾಲರ್​ ಟ್ಯೂನ್​ ಮುಗಿಯವ ತನಕ ಕಾಯಲೇಬೇಕಿತ್ತು. ಪ್ರತಿಸಲ ಫೋನ್​ ಮಾಡಿದಾಗಲೂ ಇದನ್ನು ಕೇಳಿಕೇಳಿ ಅನೇಕ ಜನ ಬೇಸತ್ತು ಹೋಗಿದ್ದೂ ಉಂಟು.
ಇದನ್ನೂ ಓದಿ:ಕಂಪ್ಲಿಯಲ್ಲಿ ಅನಗತ್ಯ ಸಂಚಾರ ಮಾಡುತ್ತಿದ್ದ ಬೈಕ್ ಸವಾರರಿಗೆ ದಂಡ
ಹಾಗೇ, ಕರೊನಾ ಕಾಲರ್​ ಟ್ಯೂನ್​​ನಲ್ಲಿ ಕನ್ನಡದಲ್ಲಿ ಮೂಡಿಬರುತ್ತಿದ್ದ ಧ್ವನಿ ಯಾರದ್ದಿರಬಹುದು ಎಂಬ ಕುತೂಹಲವೂ ಅದೆಷ್ಟೋ ಜನರಲ್ಲಿ ಹುಟ್ಟಿರಬಹುದು. ಅದಕ್ಕೆ ಉತ್ತರ ಈಗ ಸಿಕ್ಕಿದೆ…
ಕಾಲರ್​ ಟ್ಯೂನ್​ಗೆ ಕನ್ನಡದ ಧ್ವನಿ ಕೊಟ್ಟಿದ್ದು ಮಂಗಳೂರಿನ ಬಹುಮುಖ ಪ್ರತಿಭೆ ಡಾರೆಲ್​ ಜೆಸಿಕಾ ಫರ್ನಾಂಡೀಸ್​ ಎಂಬುವರು. ಪ್ರಸ್ತುತ ದೆಹಲಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರು ಮಂಗಳೂರಿನ ಪಡೀಲ್​ ನಿವಾಸಿಯಾಗಿರುವ ದಿ ವೆಲೆರಿಯನ್​ ಫರ್ನಾಂಡೀಸ್​ ಮತ್ತು ಲವಿನಾ ಫರ್ನಾಂಡೀಸ್ ಅವರ ಪುತ್ರಿ.
ಇದನ್ನೂ ಓದಿ:ಫ್ಲಾಪ್​ ಹೀರೋಯಿನ್​ ಐಶ್ವರ್ಯಾ ರೈಗೆ ಪುನರ್ಜನ್ಮ ನೀಡಿದ್ದು ಈ ಸಿನಿಮಾ!
ಜಗತ್ತಿಗೇ ಬಾಧಿಸಿದ ಕರೊನಾ ವೈರಸ್ ಬಗ್ಗೆ ಅರಿವು ಮೂಡಿಸುವಲ್ಲಿ ಕರಾವಳಿಯ ಯುವತಿಯ ಪಾತ್ರವೂ ಇದೆ ಎನ್ನುವುದು ವಿಶೇಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
