ಶಿವಮೊಗ್ಗ:ಶಿವಮೊಗ್ಗ ಹೊರವಲಯದ ಸೂಳೆಬೈಲಿನಲ್ಲಿ ಅಕ್ರಮವಾಗಿ ತೆರೆದಿದ್ದ ಕಸಾಯಿ ಖಾನೆಯಲ್ಲಿ 7 ಹಸುಗಳ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ 5.30ಕ್ಕೆ ತುಂಗಾನಗರ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ದಾಳಿ ಮಾಡಿದ್ದು, ಅಷ್ಟರಲ್ಲಿ 7 ಹಸುಗಳ ಮಾರಣಹೋಮ ನಡೆದಿತ್ತು.
ಸೂಳೆಬೈಲಿನ ಅಜೀಜ್ ಎಂಬುವರ ಮನೆ ಹಿಂಭಾಗದ ಶೆಡ್​ನಲ್ಲಿ ಮಾಂಸಕ್ಕಾಗಿ ಗೋವುಗಳನ್ನ ಹತ್ಯೆ ಮಾಡಲಾಗಿದೆ. ಅಕ್ರಮ ಕಸಾಯಿ ಖಾನೆಯಲ್ಲಿದ್ದ ಉಳಿದ 10 ಹಸುಗಳನ್ನ ಪೊಲೀಸರು ರಕ್ಷಣೆ ಮಾಡಿ ಗೋಶಾಲೆಗೆ ಪೊಲೀಸರು ಸ್ಥಳಾಂತರ ಮಾಡಿದ್ದಾರೆ.
ದಾಳಿ ಬೆನ್ನಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ. ಅಜೀಜ್, ಬಾಬು, ಅಬ್ದುಲ್ ಸತ್ತರ್ ಹಾಗೂ ಇತರ ಮೂವರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.
ಮಾಜಿ ಸಿಎಂ ಸಿದ್ದು ಕ್ಷೇತ್ರ ಗೊಂದಲಕ್ಕೆ ತೆರೆ ಎಳೆದ ಮನೆ ದೇವರು ಚಿಕ್ಕಮ್ಮತಾಯಿ! ಮತ್ತಷ್ಟು ಕುತೂಹಲ ಮೂಡಿಸಿದ ದೇವರ ನುಡಿ

5 ವರ್ಷದ ಮಗುವಿನ ಪ್ರಾಣ ಉಳಿಸಿಕೊಳ್ಳಲು ನೆರವಾಗಿ… ಮದ್ದೂರು ಮೂಲದ ದಂಪತಿ ಮನವಿ

ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 × five =
Remember me
