ಶಿವಮೊಗ್ಗ:ನಗರದ ಹೊರವಲಯದ ಪುಟ್ಟಪ್ಪನ ಕ್ಯಾಂಪ್ ಬಳಿ ಗುರುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ತುಂಗಾನದಿಗೆ ಈಜಾಡಲು ತೆರಳಿದ್ದ ಯುವಕ ನೀರು ಪಾಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸೂಳೆಬೈಲ್‌ನ ಅಬ್ದುಲ್ ರಿಹಾನ್ (18) ನೀರು ಪಾಲಾಗಿದ್ದು, ಈತ ಗುರುವಾರ ಮಧ್ಯಾಹ್ನ ನಾಲ್ವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಈ ವೇಳೆ ಆಳ ಅರಿಯದೇ ನೀರಿಗೆ ಇಳಿದಿದ್ದು ದಡ ಸೇರಲಾಗದೇ ಮುಳುಗಿದ್ದಾನೆ.
ರಿಹಾನ್ ನೀರಿನಲ್ಲಿ ಮುಳುಗಿದಂತೆ ತಮಾಷೆ ಮಾಡುತ್ತಿದ್ದಾನೆಂದು ಭಾವಿಸಿದ ಸ್ನೇಹಿತರು ಸುಮ್ಮನಾಗಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ಆತ ನೀರಿನಲ್ಲಿ ಮುಳುಗಿದ್ದು ಮೇಲೇ ಬರಲೇ ಇಲ್ಲ. ಇದರಿಂದ ಆತಂಕಗೊಂಡ ಸ್ನೇಹಿತರು ರಿಹಾನ್‌ನ ಕುಟುಂಬದವರಿಗೆ ಮಾಹಿತಿ ನೀಡಿದ್ದರು.
ಕುಟುಂಬದವರು ತುಂಗಾನಗರ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿ ಶೋಧ ಕಾರ್ಯಚರಣೆ ಕೈಗೊಂಡಿದ್ದು ಶುಕ್ರವಾರ ಸಂಜೆವರೆಗೂ ಯುವಕ ಇನ್ನೂ ಪತ್ತೆಯಾಗಿಲ್ಲ. ಉಂಬ್ಳೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ರಿಹಾನ್ ಓದಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಗೊಂಡಿದ್ದ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೇಟಿಂಗ್ ಆ್ಯಪ್ ಬೆಡಗಿಗಾಗಿ ಕೋಟಿ ಕೊಟ್ಟು ಕೈ ಸುಟ್ಟುಕೊಂಡ ಬ್ಯಾಂಕ್ ಮ್ಯಾನೇಜರ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
