ಶಿವಮೊಗ್ಗ:ಹೊಸ ವರ್ಷಾಚರಣೆ ವೇಳೆ ಶನಿವಾರ ರಾತ್ರಿ ವಿದ್ಯಾನಗರದಲ್ಲಿ ಅವಘಡವೊಂದು ಸಂಭವಿಸಿದೆ. ರಾತ್ರಿ 12ಕ್ಕೆ ಸರಿಯಾಗಿ ಹ್ಯಾಪಿ ನ್ಯೂ ಇಯರ್​ ಎನ್ನುತ್ತಾ ಗಾಳಿಯಲ್ಲಿ ಗುಂಡು ಹಾರಿದ ಕ್ಷಣಾರ್ಧದಲ್ಲೇ ಯಾರೂ ಊಹಿಸಿರದ ದುರಂತ ಸಂಭವಿಸಿದೆ. ವ್ಯಕ್ತಿಯೊಬ್ಬರ ಮಾಡಿದ ಏರ್ ಫೈರಿಂಗ್ ಯುವಕನಿಗೆ ತಗುಲಿ ಗಾಯಗೊಂಡಿದ್ದು, ಅತ್ತ ಏರ್ ಫೈರಿಂಗ್ ಮಾಡಿದ ಮನೆಯ ಮಾಲೀಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿದ್ಯಾನಗರದ 4ನೇ ತಿರುವಿನಲ್ಲಿ ಗೋಪಾಲ ಗ್ಲಾಸ್ ಹೌಸ್​ನ ಮಾಲೀಕ ಮಂಜುನಾಥ ಓಲೇಕಾರ್ ಮೃತರು. ಪಾರ್ಟಿಯಲ್ಲಿದ್ದ ಸ್ಥಳೀಯ ವಿನಯ್ ಎಂಬಾತ ಗಾಯಗೊಂಡಿದ್ದಾರೆ.
ತಡರಾತ್ರಿ ಮಂಜುನಾಥ ಅವರ ಮನೆಯಲ್ಲಿ ನವ ಸಂವತ್ಸರವನ್ನು ಅದ್ದೂರಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಮಂಜುನಾಥ ಅವರು ಮನೆಯಲ್ಲಿದ್ದ ಏರ್ ಗನ್ ತಂದು -ಫೈರ್ ಮಾಡಿ ಸಂಭ್ರಮಿಸಲು ಮುಂದಾಗಿದ್ದರು. ಈ ವೇಳೆ ಮಿಸ್‌ ಫೈರ್ ಆಗಿ ವಿನಯ್​ಗೆ ತಗುಲಿದೆ. ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಚಾತುರ್ಯದಿಂದ ಸಂಭವಿಸಿದ ಘಟನೆಯಿಂದ ಘಾಸಿಗೊಂಡ ಮಂಜುನಾಥ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂ ಇಯರ್​ ಪಾರ್ಟಿ ಮುಗಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದ ಬೆಂಗಳೂರಿನ ಯುವಕ ಮಾರ್ಗದಲ್ಲೇ ದುರ್ಮರಣ!

ಗೋವಾಕ್ಕೆ ಹೋಗಿ ಮೋಜು-ಮಸ್ತಿ ಮಾಡೋಣ… ಪ್ರೇಯಸಿಯ ಆಸೆ ಈಡೇರಿಸಲು ಅಣ್ಣನ ಮನೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ತಮ್ಮ!

ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ: ಕುಡಿದ ಅಮಲಲ್ಲಿ ತೇಲಾಡಿದ ಕೆಲ ಯುವಕ-ಯುವತಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
