ಶಿವಮೊಗ್ಗ:ಅಪ್ರಾಪ್ತೆ ಮೇಲಿನ ಗ್ಯಾಂಗ್​ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮನೋಜ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸುತ್ತಿಲ್ಲ. ಅಪ್ರಾಪ್ತೆಯನ್ನು ಕಾರಿನಲ್ಲಿ ಕರೆದೊಯ್ದು ನಾಲ್ವರು ಅತ್ಯಾಚಾರ ಎಸಗಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತ ತಾಯಿಯ ಆರೈಕೆಯಲ್ಲಿದ್ದ ಅಪ್ರಾಪ್ತೆ ಮೇಲೆ ಆಸ್ಪತ್ರೆಯ ವಾರ್ಡ್ ಬಾಯ್ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿತ್ತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಮಹಿಳೆಯೊಬ್ಬರು ಕರೊನಾ ಸೋಂಕಿನಿಂದಾಗಿ ಮೆಗ್ಗಾನ್ ಕರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೈಕೆಗೆಂದು ಅವರ 16 ವರ್ಷದ ಮಗಳೂ ವಾರ್ಡ್ ಹೊರಗೆ ಇರುತ್ತಿದ್ದಳು. ಮೂರ್ನಾಲ್ಕು ದಿನಗಳಿಂದ ಆಕೆಗೆ ಊಟ, ತಿಂಡಿ ತಂದುಕೊಟ್ಟು ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ ಎಂಬಾತ ಸ್ನೇಹ ಗಳಿಸಿದ್ದ. ಕಳೆದ ಮೂರು ದಿನಗಳಿಂದ ಶಿವಮೊಗ್ಗ ಸೆಕ್ಷನ್ 144 ಇರುವುದರಿಂದ ಎಲ್ಲೂ ಊಟ, ತಿಂಡಿ ಸರಿಯಾಗಿ ಸಿಗುತ್ತಿರಲಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡ ಮನೋಜ್​ ಶನಿವಾರ ರಾತ್ರಿ ಬಾಲಕಿಗೆ ಹೊರಗೆ ಕರೆದುಕೊಂಡು ಹೋಗಿ ಊಟ ಕೊಡಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಬಾಲಕಿ ಹೊರಬರಲು ಒಪ್ಪಿದ್ದಾಳೆ.
ಇದನ್ನೂ ಓದಿ:ಫೋಟೋದಲ್ಲಿ ಮಕ್ಕಳ ಚಿತ್ರ ಬದಲಿಗೆ 666 ನಂ. ಗೋಚರ: ಅರ್ಥ ತಿಳಿದ ತಾಯಿಯ ಎದೆಯಲ್ಲಿ ಢವಢವ!
ಇದಕ್ಕೂ ಮುನ್ನ ಮನೋಜ್​ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದ. ಆಸ್ಪತ್ರೆ ಹೊರಗೆ ಕಾರು ನಿಲ್ಲಿಸಿಕೊಂಡಿರುವಂತೆ ತನ್ನ ಸ್ನೇಹಿತರಾದ ಪ್ರಜ್ವಲ್ ಹಾಗೂ ವಿನಯ್ ಅವರಿಗೆ ತಿಳಿಸಿದ್ದ. ಪೂರ್ವ ಯೋಜನೆಯಂತೆ ಮನೋಜ ಬಾಲಕಿಯನ್ನು ಕರೆದುಕೊಂಡು ಕಾರಿನತ್ತ ಬಂದಿದ್ದ. ಕಾರಿನಲ್ಲಿ ಮನೋಜ, ಪ್ರಜ್ವಲ್, ವಿನಯ್ ಜತೆಗೆ ಇನ್ನೂ ಒಬ್ಬ ಇದ್ದ ಎನ್ನಲಾಗುತ್ತಿದೆ. ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಮೊದಲು ಮನೋಜ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ ಮೂವರು ಸ್ನೇಹಿತರೂ ನಿರಂತರವಾಗಿ ಅತ್ಯಾಚಾರ ಎಸಗಿದ್ದರು.
ಬಳಿಕ ಆಕೆಯನ್ನು ಆಸ್ಪತ್ರೆಗೆ ತಂದು ಬಿಟ್ಟಿದ್ದರು. ಆಘಾತಕ್ಕೆ ಒಳಗಾಗಿದ್ದ ಬಾಲಕಿ ತನ್ನ ತಾಯಿ ಬಳಿ ನಡೆದಿರುವ ಘಟನೆಯನ್ನು ವಿವರಿಸಿದ್ದಾಳೆ. ವಿಷಯ ಮೆಗ್ಗಾನ್ ಆಸ್ಪತ್ರೆ ಸಖಿ ಕೇಂದ್ರದ ಸಿಬ್ಬಂದಿಗೆ ತಿಳಿದ ಬಳಿಕ ಬಾಲಕಿಯನ್ನು ದಾಖಲಿಸಿಕೊಂಡು ಪರೀಕ್ಷೆ ನಡೆಸಿದರು. ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಶಿವಮೊಗ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಭೀಕರ ಗ್ಯಾಂಗ್​ರೇಪ್​: ನಿರ್ಭಯಾ, ಅರುಣಾ ಶಾನುಭಾಗ್​ ಪ್ರಕರಣ ಹೋಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
