ಶಿವಮೊಗ್ಗ:ಪಕ್ಷ, ಸಂಘಟನೆ ಮೂಲಕ ಬಿ.ವೈ.ವಿಜಯೇಂದ್ರ ಬೆಳೆದಿದ್ದು ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಉತ್ತರಾಧಿಕಾರಿ ಆಗುವ ಎಲ್ಲ ಅವಕಾಶಗಳಿವೆ. ಆದರೆ ಅದನ್ನು ಪಕ್ಷ ಯೋಚಿಸಿದರೆ ಸೂಕ್ತವೆನಿಸುತ್ತದೆ ಎಂದು ಎಂಎಲ್‌ಸಿ ಆಯನೂರು ಮಂಜುನಾಥ ಹೇಳಿದರು.ಬೇರೆಯವರು(ಕಾಂಗ್ರೆಸ್) ಅವರ ಮಕ್ಕಳನ್ನು ತಂದು ಅಧಿಕಾರಕ್ಕೆ ಕೂರಿಸಿದರು. ಆದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಆ ಕೆಲಸ ಮಾಡಲಿಲ್ಲ. ಸಂಘಟನೆ ಮೂಲಕ ವಿಜಯೇಂದ್ರ ಬೆಳೆದಿದ್ದು ಉತ್ತರಾಧಿಕಾರಿ ಅವಕಾಶವನ್ನು ಪಕ್ಷ ಕೊಟ್ಟರೆ ವಿರೋಧವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯದಲ್ಲಿ ವಿಜಯೇಂದ್ರ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಹೆಚ್ಚಾಗಿ ಸೆಳೆಯುತ್ತಿದ್ದಾರೆ. ಹೊಸ ನಾಯಕತ್ವದಿಂದ ಸಂಘಟನೆಗೆ ಜೀವಂತಿಕೆ ಬರುತ್ತಿದೆ. ಆದರೆ ವಿಜಯೇಂದ್ರ ಒಬ್ಬರೇ ಇರುವುದಿಲ್ಲ, ಎಲ್ಲರೂ ಜತೆಗಿರುತ್ತಾರೆ. ಅವರೆಲ್ಲರ ಸಹಕಾರದ ನಡುವೆ ವಿಜಯೇಂದ್ರ ಎದ್ದು ಕಾಣಿಸುತ್ತಿದ್ದಾರೆ ಎಂದು ಹೇಳಿದರು.ಶಿರಾ ಮತ್ತು ಆರ್‌ಆರ್ ನಗರ ಉಪ ಚುನಾವಣೆಗಳನ್ನು ಗೆಲ್ಲುವ ಮೂಲಕ ಪಕ್ಷ ಹೊಸ ಬೇರು ಹಳೆ ಚಿಗುರಿನ ಸಂಮಿಶ್ರಣವಾಗಿದೆ. ಈ ಗೆಲುವು ಒಬ್ಬರ ಸಾಧನೆಯಲ್ಲ. ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೊಸ ನಾಯಕತ್ವ ಉಗಮದಿಂದ ಪಕ್ಷದ ಸಂಘಟನೆಯಲ್ಲಿ ಜೀವಂತಿಕೆ ವೃದ್ಧಿಸುತ್ತದೆ ಎಂದರು.ಪಕ್ಷದಲ್ಲಿ ಅತ್ಯಂತ ಹಿರಿಯರಿದ್ದಾರೆ. ತಳಮಟ್ಟದಲ್ಲಿ ಸಂಘಟನೆಯೂ ಇದೆ. ಸೈನ್ಯ ತುಂಬಾ ಚೆನ್ನಾಗಿದ್ದು ಅದರ ನೇತೃತ್ವವನ್ನು ಹೊಸ ದಳಪತಿ ವಹಿಸಿದ್ದಾರೆ. ಕೆಲವರಿಗೆ ಭಾಗ್ಯ ರೇಖೆ ಇರುತ್ತದೆ. ಹೋದ ಕಡೆ ಗೆಲುವು ಸಿಗುತ್ತದೆ. ಅಂತಹ ಒಂದು ಭಾಗ್ಯರೇಖೆ ವಿಜಯೇಂದ್ರ ಅವರಿಗಿದೆ ಎಂದರು.ಕುರುಕ್ಷೇತ್ರದಲ್ಲಿ ಗೆಲುವು ಮುಖ್ಯವಾಗಿತ್ತು. ಹಿಂದಿನ ಕುರುಕ್ಷೇತ್ರದಲ್ಲಿ ಘಟಾನುಘಟಿಗಳೇ ಇದ್ದರು. ಆದರೆ ಯುದ್ಧ ಗೆಲ್ಲಲು ಪಟ್ಟ ಕಟ್ಟಿದ್ದು ಅತ್ಯಂತ ಕಿರಿಯ ಶ್ರೀ ಕೃಷ್ಣನಿಗೆ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಬಿಜೆಪಿಯಲ್ಲಿಯೂ ಸಮರ್ಥರಾದ ಭೀಮ, ಅರ್ಜುನ  ಇದ್ದರೂ ಅತ್ಯಂತ ಕಿರಿಯ(ವಿಜಯೇಂದ್ರ)ನನ್ನು ಮುಂದೆ ಬಿಟ್ಟಿದ್ದೇವೆ. ಯುದ್ಧವನ್ನು ಎಲ್ಲರೂ ಸಮಾನವಾಗಿ ಎದುರಿಸುತ್ತಿದ್ದೇವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
