ಬೆಂಗಳೂರು:ರಾಜ್ಯದಲ್ಲಿ ಉಪ ಚುನಾವಣೆ ಸಮರ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಮೂರು ಪಕ್ಷಕ್ಕೂ ಈ ಚುನಾವಣೆಯಲ್ಲಿನ ಗೆಲುವು ಪ್ರತಿಷ್ಠೆಯಾಗಿದ್ದು, ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿವೆ. ಈ ನಡುವೆ ಕಾಂಗ್ರೆಸ್​ ಇಟರ್ನಲ್​ ರಿಪೋರ್ಟ್​ಗೆ ರಾಜ್ಯದ ಕೈ ನಾಯಕರು ಶಾಕ್ ಆಗಿದ್ದಾರೆ.
ಎರಡು ಕೇತ್ರದ ಉಭಯ ಚುನಾವಣೆಗಳಲ್ಲಿ ಕಾಂಗ್ರೆಸ್​ ಪಾಲಿಗೆ ಒಂದು ಪ್ಲಸ್, ಒಂದು ಮೈನಸ್ ಆಗಲಿದೆ ಎಂದು ಪಕ್ಷದ ಇಂಟರ್ನಲ್​ ವರದಿ ಹೇಳಿದೆ. ಶಿರಾದಲ್ಲಿ ಕಾಂಗ್ರೆಸ್​ಗೆ ಪ್ಲಸ್, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್​ಗೆ ಮೈನಸ್ ಇದೆ!
ಆರ್​ ಆರ್​ ನಗರ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕರ್ತರ ಕೊರತೆಯೇ ಕಾಂಗ್ರೆಸ್​ಗೆ ಹಿನ್ನಡೆ ಆಗಲಿದೆ. ಮುನಿರತ್ನ ಹಿಂದೆಯೇ ಬಿಜೆಪಿಯತ್ತ ಸ್ಥಳೀಯ ಕಾಂಗ್ರೆಸ್ ಮುಖಂಡರು ಮುಖಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಗುರುವಾರ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಎರಡೂ ಕ್ಷೇತ್ರದಲ್ಲೂ ಗೆಲುವು ನಮ್ಮದೆ’ ಎಂದರು.
ಇನ್ನು ಬುಧವಾರ ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಶಿರಾ ಉಪಸಮರದಲ್ಲಿ ಮಾಧ್ಯಮಗಳೇ ಜಯಚಂದ್ರ ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಬಿಂಬಿಸುತ್ತಿವೆ, ಅದರ ಅರ್ಥ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಅಲ್ಲವೇ. ನಮ್ಮಲ್ಲಿಯೂ ಗುಪ್ತಚರ ವರದಿ ಇದೆ. ಅದರಂತೆ ಚಲಾವಣೆಗೊಳ್ಳುವ ಮತಗಳಲ್ಲಿ ಶೇ.44ಕ್ಕೂ ಹೆಚ್ಚು ಮತಗಳನ್ನು ಕಾಂಗ್ರೆಸ್​ ಗಳಿಸಲಿದೆ. ಉಳಿದೆರಡೂ ಪಕ್ಷಗಳು ಶೇ.22 ಮತ್ತು 21 ಮತಗಳಿಸಲಿವೆ ಎಂದಿದ್ದರು.
‘ಧಮ್ಕಿಗಿಮ್ಕಿ ಹಾಕಿದ್ರೆ ಪೊಲೀಸ್​ ಸ್ಟೇಷನ್​ ಮುಂದೆಯೇ ಚುನಾವಣೆ! ಮುನಿರತ್ನಗೆ ಇದು ಕೊನೇ ವಾರ್ನಿಂಗ್​’

ಯಜಮಾನರನ್ನು ಕಳೆದುಕೊಂಡು ತುಂಬಾ ಸಂಕಟದಲ್ಲಿದ್ದೇನೆ, ನನ್ನನ್ನು ನಿಮ್ಮ ಮನೆ ಮಗಳೆಂದು ಭಾವಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
