ಬೆಂಗಳೂರು:ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್​, ಪಕ್ಷದಲ್ಲಿನ ಆಂತರಿಕ ಕಲಹ ನಿವಾರಣೆಯಲ್ಲಿ ಮಗ್ನವಾಗಿದೆ.
ಟಿ.ಬಿ.ಜಯಚಂದ್ರ ವಿರುದ್ಧ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದ ಕೆ.ಎನ್​.ರಾಜಣ್ಣ, ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ಕೊಟ್ಟಿದ್ದರು. ಅಲ್ಲದೆ, ಕಾಂಗ್ರೆಸ್ ಟಿಕೆಟ್​ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬಳಿ ಬೇಡಿಕೆಯನ್ನೂ ಇಟ್ಟಿದ್ದರು. ತುಮಕೂರು ಜಿಲ್ಲೆಯಲ್ಲಿ ನನ್ನಿಂದ ನಿಮಗೆ ಸಹಾಯಬೇಕು. ಆದರೆ ಸರ್ಕಾರ ಬಂದಾಗ ನಮ್ಮನ್ನು ಗುರುತಿಸಲ್ಲ‌ ಎಂದು ಆಕ್ರೋಶ ಹೊರಹಾಕಿದ್ದರು. ಈ ಅಸಮಾಧಾನದ ಗಂಭೀರತೆ ಅರಿತ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ತುಮಕೂರು ಜಿಲ್ಲೆಯ ಮುಖಂಡರ ಸಭೆ ನಡೆಸಿದ್ದಾರೆ.ಇದನ್ನೂ ಓದಿರಿಶಿರಾ ಉಪಚುನಾವಣೆ- ರಾಜಣ್ಣ ಆಸೆಗೆ ತಣ್ಣೀರೆರಚಿದ ಡಿಕೆಶಿ
ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ರಾಜಣ್ಣ, ಶಿರಾ ನನಗೆ ಹೊಸದಲ್ಲ. ಕೊನೆಯ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮದೇ ಪಕ್ಷದ ನಾಯಕರ ಕೈವಾಡವಿತ್ತು ಎಂದು ಆಕ್ರೋಶ ಹೊರಹಾಕಿದರು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಒಂದಾಗಿ ಕೆಲಸ ಮಾಡಿ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ತುಮಕೂರು ಜಿಲ್ಲೆಯ ಕಾಂಗ್ರೆಸ್​ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಚಿವ ಜಯಚಂದ್ರ, ಮಾಜಿ ಸಂಸದರಾದ ಎಸ್​.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಮಾಜಿ ಶಾಸಕ ಷಡಕ್ಷರಿ ಹಾಗೂ ರಾಜಣ್ಣ ಪುತ್ರ ರಾಜೇಂದ್ರ ಉಪಸ್ಥಿತರಿದ್ದರು.
ಶಿರಾ ಉಪಚುನಾವಣೆಯನ್ನೇಕೆ ಇಷ್ಟೊಂದು ಸೀರಿಯಸ್ಸಾಗಿ ತಗೊಂಡಿದ್ದಾರೆ ಎಚ್​ಡಿಕೆ?

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಸಂಬಳ ಕೇಳಿದ್ದಕ್ಕೆ ಗ್ರಾಮ ಸಹಾಯಕಿಯನ್ನು ಮಂಚಕ್ಕೆ ಕರೆದ ತಹಸೀಲ್ದಾರ್!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 − 9 =
Remember me
