ತುಮಕೂರು:ಶಿರಾ ಉಪಸಮರ ಅಖಾಡಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬುಧವಾರ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
2 ದಿನ ಶಿರಾ ಪ್ರವಾಸ ಕೈಗೊಳ್ಳುವ ದೊಡ್ಡಗೌಡರು ಕ್ಷೇತ್ರದಲ್ಲಿ ಸಂಚಲನ ಮೂಡಿಸಲಿದ್ದಾರೆ. ಸ್ವಲ್ಪಮಟ್ಟಿಗೆ ಅಧೀರರಾಗಿರುವ ಕಾರ್ಯಕರ್ತರಲ್ಲಿ ಹುರುಪು ತುಂಬಲಿದ್ದಾರೆ.
ಗೌಡಗೆರೆ ಹೋಬಳಿ ಚಂಗಾವರದಲ್ಲಿ ಬೆಳಗ್ಗೆ 11.30ಕ್ಕೆ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4ಕ್ಕೆ ನಗರದ ಪಕ್ಷದ ಕಚೇರಿಗೆ ಭೇಟಿ ರಾಜಕೀಯ ಬೆಳವಣಿಗೆಗಳ ಕುರಿತು, ಚುನಾವಣಾ ತಂತ್ರಗಾರಿಕೆಗಳ ಬಗ್ಗೆ ಮುಖಂಡರ ಜತೆ ಚರ್ಚಿಸಲಿದ್ದಾರೆ. ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡುವ ದೇವೇಗೌಡರು ಗುರುವಾರ ಹುಲಿಕುಂಟೆ ಹೋಬಳಿ ಬರಗೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗುವರು.
ಸತ್ಯಣ್ಣನ ಪಾರ್ಥೀವ ಶರೀರದ ಮುಂದೆ 8 ಗಂಟೆ!:ಸತ್ಯಣ್ಣ ನಿಧನರಾದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಾರ್ಥೀವ ಶರೀರದ ಮುಂದೆ 8 ಗಂಟೆಗೂ ಹೆಚ್ಚು ಹೊತ್ತು ಇದ್ದರು. ಬೆಂಗಳೂರಿನಿಂದ ತುಮಕೂರಿಗೆ ಸತ್ಯಣ್ಣ ಪಾರ್ಥೀವ ಶರೀರ ತಂದಾಗಿನಿಂದ ಭೂವನಹಳ್ಳಿಯಲ್ಲಿ ಅಂತ್ಯಕ್ರಿಯೆ ಮುಗಿಯುವವರೆಗೆ ಇದ್ದ ದೇವೇಗೌಡರು 30 ವರ್ಷಗಳ ಒಡನಾಡಿ, ನಂಬಿಕಸ್ತನನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದರು. ಇದೀಗ ಸತ್ಯಣ್ಣರಿಂದ ತೆರವಾದ ಶಾಸಕ ಸ್ಥಾನಕ್ಕೆ ಅವರ ಪತ್ನಿ ಅಮ್ಮಾಜಮ್ಮರನ್ನು ಗೆಲ್ಲಿಸಿಕೊಂಡು ಬರಲು ರಣತಂತ್ರ ರೂಪಿಸಿರುವ ದೇವೇಗೌಡರು, ಎರಡು ದಿನ ಕ್ಷೇತ್ರದಲ್ಲಿ ಮತಯಾಚಿಸಲಿದ್ದಾರೆ.
ಸತ್ಯನಾರಾಯಣ ಸತ್ತಾಯಿತು, ಜಯಚಂದ್ರಾನು ಸಾಯ್ತಾನೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
