ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ 14 ಕೋಟಿ ರೂ. ಸಂಪತ್ತಿನ ಒಡೆಯ. ಇವರ ಪತ್ನಿ ಜಿ.ಎಚ್​.ನಿರ್ಮಲಾ 8 ಕೋಟಿ ರೂ. ಒಡತಿ.
ಜಯಚಂದ್ರರ ವಾರ್ಷಿಕ ಆದಾಯ 68,01,856 ರೂಪಾಯಿ. ವಿವಿಧ ಬ್ಯಾಂಕ್​ಗಳು, ಮ್ಯೂಚುಯಲ್​ ಫಂಡ್​ಗಳಲ್ಲಿನ ಠೇವಣಿ, ಷೇರುಗಳ ರೂಪದಲ್ಲಿ ಹಣ ತೊಡಗಿಸಿರುವ ಜಯಚಂದ್ರ ಅವರ ಒಟ್ಟು ಚರಾಸ್ಥಿ 1,33,81,409 ರೂಪಾಯಿ! ಪತ್ನಿ ನಿರ್ಮಲಾರ ವಾರ್ಷಿಕ ಆದಾಯ 11,69,227 ರೂಪಾಯಿ. ಇವರಿಗೆ 60,09,092 ರೂ. ಮೌಲ್ಯದ ಚರಾಸ್ಥಿ ಇದೆ. 610 ಗ್ರಾಂ ಚಿನ್ನಾ, 2.5 ಕೆಜಿ ಬೆಳ್ಳಿ ಹೊಂದಿದ್ದಾರೆ. ಜಯಚಂದ್ರ ಬಳಿ 100 ಗ್ರಾಂ ಚಿನ್ನಾಭರಣ ಇದೆ.
13.10 ಕೋಟಿ ಸ್ಥಿರಾಸ್ತಿ:ಬೆಂಗಳೂರಿನ ಆರ್​.ಟಿ. ನಗರದಲ್ಲಿ 8.5 ಕೋಟಿ ರೂ. ಮೌಲ್ಯದ ಕಟ್ಟಡ, ಆರ್​ಎಂವಿ 2ನೇ ಹಂತದ ಎಚ್​ಐಜಿ ಲೇಔಟ್​ನಲ್ಲಿ 4.60 ಕೋಟಿ ರೂ. ಮೌಲ್ಯದ ಕಟ್ಟಡವನ್ನು ಜಯಚಂದ್ರ ಹೊಂದಿದ್ದು, ಒಟ್ಟು ಸ್ಥಿರಾಸ್ತಿ ಮೌಲ್ಯ 13.10 ಕೋಟಿ ರೂಪಾಯಿ. ಪತ್ನಿ ನಿರ್ಮಲಾ ಹೆಸರಲ್ಲಿ ಕಳ್ಳಂಬೆಳ್ಳ ಬಳಿ 3.22 ಎಕರೆ ಜಮೀನು ಇದೆ. ಜತೆಗೆ ಫಾರ್ಮ್​ ಹೌಸ್​ ಕೂಡ ಇದೆ. ಪೀಣ್ಯ ಇಂಡಸ್ಟ್ರಿಯಲ್​ನಲ್ಲಿ 6.25 ಕೋಟಿ ರೂ. ಮೌಲದ್ಯ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಒಟ್ಟಾರೆ ನಿರ್ಮಲಾ ಹೆಸರಲ್ಲಿ 7.40 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
ಪತಿ-ಪತ್ನಿ ಇಬ್ಬರು ಕೂಡ ಸಾಲಗಾರರಾಗಿದ್ದಾರೆ. ಜಯಚಂದ್ರ 1.47 ಕೋಟಿ ರೂ. ಸಾಲ ಹೊಂದಿದ್ದರೆ, ನಿರ್ಮಲಾ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ.
ಫಾರ್ಚೂನರ್​ ಕಾರು: ಕೋಟಿ ಒಡೆಯ ಜಯಚಂದ್ರ ಬಳಿ ಓಡಾಡಲು 39.35 ಲಕ್ಷ ರೂ. ಮೌಲ್ಯದ ಫಾರ್ಚೂನರ್​ ಹಾಗೂ 5 ಲಕ್ಷ ರೂ. ಮೌಲದ್ಯ ಸೆಕೆಂಡ್​ ಹ್ಯಾಂಡ್​ ಟಾಟಾ ಸರ್ದಿನಿಯಾ ಕಾರು ಇದೆ. ಜಯಚಂದ್ರ ನಾಮಪತ್ರ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್​ನಲ್ಲಿ 2 ಕ್ರಿಮಿನಲ್​ ಕೇಸ್​, 2 ಕ್ರಿಮಿನಲ್​ ರಿವಿಷನ್​ ಪೆಟಿಷನ್​ಗಳಿವೆ. ಯಾವುದೇ ಚಾರ್ಜ್​ಶೀಟ್​ ಸಲ್ಲಿಕೆಯಾಗಿಲ್ಲ ಎಂದು ತೋರಿಸಿದ್ದಾರೆ.
ಸತ್ಯನಾರಾಯಣ ಸತ್ತಾಯಿತು, ಜಯಚಂದ್ರಾನು ಸಾಯ್ತಾನೆ !

12 ಕೋಟಿ ಸಂಪತ್ತಿನ ಒಡತಿ ಕುಸುಮಾ, ಅಫಿಡವಿಟ್​ನಲ್ಲಿ ಪತಿಯ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ!

ಅಭ್ಯರ್ಥಿ ಅನುಪಸ್ಥಿತಿಯಲ್ಲೇ ಜೆಡಿಎಸ್​ ನಾಯಕರಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
