ತುಮಕೂರು:ಕರೊನಾ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲೇ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಜನನಾಯಕರ ಶಕ್ತಿ ಪ್ರದರ್ಶನ ಕೋವಿಡ್​ ಹಾಟ್​ಸ್ಪಾಟ್​ ಆಗಿದೆ.
ಕರೊನಾ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರ, ಬಹಿರಂಗ ಪ್ರಚಾರಕ್ಕೆ ಹಲವು ನಿರ್ಬಂಧ ವಿಧಿಸಲಾಗಿದೆ. ಮನೆ-ಮನೆ ಪ್ರಚಾರ ನಡೆಸಲು ಕೇವಲ ಐದು ಮಂದಿಗೆ, ಸಾರ್ವಜನಿಕ ಸಭೆಗಳಲ್ಲಿ ಕೇವಲ 200 ಮಂದಿ ಭಾಗವಹಿಸಲಷ್ಟೇ ಅವಕಾಶ ಇದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕನಿಷ್ಠ ವಾಹನ ಬಳಸಬೇಕಿದೆ. ನಾಮಪತ್ರ ಸಲ್ಲಿಕೆ ಸೇರಿ ಇನ್ನಿತರ ಚುನಾವಣಾ ಪ್ರಕ್ರಿಯೆಗಳಿಗೆ ಆನ್​ಲೈನ್​ನಲ್ಲೇ ವ್ಯವಹರಿಸಲು ಸೂಚಿಸಲಾಗಿದೆ. ಆದರೂ ರಾಜಕೀಯ ಪಕ್ಷಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಲಕ್ಷಾಂತರ ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ.
ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಜಿದ್ದಾಜಿದ್ದಿಗೆ ಬಿದ್ದಂತೆ ಶಕ್ತಿಪ್ರದರ್ಶನ ನಡೆಸಿದ ಕಾಂಗ್ರೆಸ್​ ಮುಖಂಡರ ಸುತ್ತಲೂ ಜನಸ್ತೋಮ ಸೇರಿತ್ತು. ಎಲ್ಲಿಯೂ ಪರಸ್ಪರ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್​ ಧರಿಸದೆ ನೂಕುನುಗ್ಗಲಾಗಿ ಗುಂಪುಗೂಡಿದ್ದ ದೃಶ್ಯ ಶಿರಾ ಕ್ಷೇತ್ರ ಮಾತ್ರ ರಾಜ್ಯದ ಜನತೆಯನ್ನೂ ಬೆಚ್ಚಿಬೀಳಿಸಿದೆ. ಜೆಡಿಎಸ್​ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸಲು ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಬಂದ ವೇಳೆಯೂ ಇದೇ ಪರಿಸ್ಥಿತಿ ಇತ್ತು.

ತುಮಕೂರು ಜಿಲ್ಲೆಯಲ್ಲಿ ಮೊದಲ ಕರೊನಾ ಪ್ರಕರಣ ದಾಖಲಾಗಿದ್ದು ಶಿರಾದಲ್ಲೇ. ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆನಡೆಯುತ್ತಿದ್ದು, ನವೆಂಬರ್​ 3ರಂದು ಮತದಾನ ನಡೆಯಲಿದೆ. ಕರೊನಾ ಸಂದರ್ಭದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಜಿಲ್ಲಾಡಳಿತ ಕೋವಿಡ್​ ಮಾರ್ಗಸೂಚಿಯಂತೆ ಚುನಾವಣೆ ನಡೆಸಲು ಶ್ರಮಿಸುತ್ತಿದೆ. ಜನನಾಯಕರು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಕೋವಿಡ್​ ನಿಯಮವನ್ನು ಗಾಳಿಗೆ ತೂರಿದ್ದಾರೆ. ಪ್ರಮುಖ ಮೂರು ಪಕ್ಷಗಳ ನಾಯಕರು ಕ್ಷೇತ್ರದಕ್ಕೆ ಬರುತ್ತಿದ್ದಂತೆ ತಾ ಮುಂದು-ನಾ ಮುಂದು ಎಂದು ಸೇರುವ ಕಾರ್ಯಕರ್ತರು ತಮ್ಮ ಕುಟುಂಬಗಳ ಬಗ್ಗೆ ಮರೆತಂತಿದೆ.
ಒಟ್ಟಾರೆ ಶೇಂಗಾನಾಡು ಶಿರಾ “ಕರೊನಾ ಹಾಟ್​ ಸ್ಪಾಟ್​” ಆಗಿದೆ. ತುರ್ತಾಗಿ ರಾಜಕೀಯ ಪಕ್ಷಗಳು, ಕ್ಷೇತ್ರದ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಅಪಾರ ಪ್ರಮಾಣದ ಸಾವು-ನೋವನ್ನು ಎದುರಿಸಬೇಕಾದೀತು.
ಸತ್ಯನಾರಾಯಣ ಸತ್ತಾಯಿತು, ಜಯಚಂದ್ರಾನು ಸಾಯ್ತಾನೆ !

ನೊಂದ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ? ನಾವು ಬೇಲ್​ ಪಡೆಯಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
