ತುಮಕೂರು:ಜೆಡಿಎಸ್ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಸಚಿವ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶಾಸಕ ಬಿಎಂಎಲ್ ಕಾಂತರಾಜು ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಜತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮನವೊಲಿಕೆ ಕಸರತ್ತು ನಡೆಸಿದ್ದಾರೆ.
ಈ ಮೂವರು ಪ್ರಮುಖ‌ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹ ಜಿಲ್ಲೆಯಲ್ಲಿದೆ. ಈ ನಡುವೆ ದೇವೇಗೌಡರ ಇಂದಿನ ಭೇಟಿ ಮಹತ್ವ ಪಡೆದಿದೆ. ಮುನಿಸಿಕೊಂಡ ಮುಖಂಡರೊಂದಿಗೆ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ನಿವಾಸದಲ್ಲಿ ಶುಕ್ರವಾರ ದೇವೇಗೌಡರು ಸಂಧಾನ ಸಭೆ ನಡೆಸಿದ್ದಾರೆ.
ಎಸ್​.ಆರ್​.ಶ್ರೀನಿವಾಸ್​, ಬಿಎಂಎಲ್​ ಕಾಂತರಾಜು ಹಾಗೂಸಿ.ಬಿ.ಸುರೇಶ್​ಬಾಬು ಜತೆ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ದೇವೇಗೌಡರು, ಪಕ್ಷದ ಪರ ಕೆಲಸ ಮಾಡುವಂತೆ ಸೂಚಿಸಿದರು ಎನ್ನಲಾಗಿದೆ. ದೇವೇಗೌಡರ ಬಗ್ಗೆ ಗೌರವರಿಂದಲೇ ನಡೆದುಕೊಂಡಿರುವ ಮೂವರು ನಾಯಕರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಬಗ್ಗೆ ದೂರುಗಳ ಸುರಿಮಳೆಗೈದಿದ್ದು ವಿಧಾನ ಪರಿಷತ್​ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಶಿರಾ ಉಪಸಮರದಲ್ಲೂ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್​ ಕಡೆ ವಾಲಿರುವ ಮುಖಂಡರು?:ಎಸ್​.ಆರ್​.ಶ್ರೀನಿವಾಸ್​ ನೇತೃತ್ವದಲ್ಲಿ ಪ್ರಮುಖ ಮೂವರು ನಾಯಕರು ಡಿ.ಕೆ.ಶಿವಕುಮಾರ್​ ಸಂಪರ್ಕದಲ್ಲಿದ್ದರು, ಮುಂಬರುವ ವಿಭಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಅರಿತು ದೇವೇಗೌಡರು ನಡೆಸಿದ ಸಂಧಾನ ತಾತ್ಕಾಲಿಕ ಯಶಸ್ಸು ಕಂಡಿದೆ. ಶುಕ್ರವಾರ ಸಂಜೆ ಶಿರಾ ಉಪಸಮರದಲ್ಲಿ ದೇವೇಗೌಡರ ಜತೆಯಲ್ಲಿ ಮೂವರು ರೆಬೆಲ್​ ಮುಖಂಡರು ಕಾಣಿಸಿಕೊಂಡಿದ್ದು, ಮುನಿಸು ತಾತ್ಕಾಲಿಕ ಶಮನವಾಗಿದೆ.
ನನಗೆ ಕರೊನಾ ವೈರಸ್​ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ, ಶುಕ್ರವಾರ ದೇವೇಗೌಡರೊಂದಿಗೆ ಮಾತನಾಡಿದ್ದು, ಸಂಜೆಯಿಂದಲೇ ನಮ್ಮ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಎಸ್​.ಆರ್​.ಶ್ರೀನಿವಾಸ್​ ತಿಳಿಸಿದ್ದಾರೆ.
ಗ್ರಾಪಂ ಚುನಾವಣೆಗೆ ಇದ್ದ ಅಡ್ಡಿಯನ್ನು ದೂರ ಸರಿಸಿದ ಹೈಕೋರ್ಟ್​! ಸರ್ಕಾರಕ್ಕೂ ತರಾಟೆ

ಕುರಿಮರಿ ನೀಡಿ ಋಣ ತೀರಿಸಿದ ಅನ್ನದಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twenty =
Remember me
