ಶಿರಸಿ:ರಾಜ್ಯದ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಪೂರ್ವವಿಧಿವಿಧಾನಗಳೊಂದಿಗೆ ಮಂಗಳವಾರ ಆರಂಭವಾಗಿದೆ. ನಸುಕಿನಲ್ಲಿ ಕಲಶ ಪೂಜೆ, ದೇವಾಲಯದ ಎದುರಿನ ರಥದ ತುದಿಯಲ್ಲಿ ಕಲಶ ಆರೋಹಣದ ವಿಧಿವಿಧಾನವನ್ನು ಮಧ್ಯಾಹ್ನ 12.43ರ ಮುಹೂರ್ತದಲ್ಲಿ ನೆರವೇರಿಸಲಾಯಿತು.
ಭಾವಪರವಶಗೊಂಡ ಕೆಲ ಭಕ್ತರು ರಥದ ಎದುರು ಕುಣಿದರು. ಭಕ್ತರ ಜಯಘೊಷದ ನಡುವೆ ಮರಾಠಿ ಬಾಬುದಾರರು ಕಲಶವನ್ನು ರಥಕ್ಕೆ ಜೋಡಿಸಿದರು. ನಂತರ ರಥ ಅಲಂಕರಿಸುವ ಕಾರ್ಯದಲ್ಲಿ ನಿರತರಾದರು.
ಶೋಭಾಯಾತ್ರೆ ಇಂದು:ದೇವಾಲಯದಿಂದ ಅರ್ಧ ಕಿಮೀ ದೂರದ ಬಿಡ್ಕಿಬಯಲಿನ ಜಾತ್ರಾ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆ ಕಾರ್ಯ ಮಾ.4ರ ಬೆಳಗ್ಗೆ ನೆರವೇರಲಿದೆ. ಇದಕ್ಕೂ ಮುನ್ನ ಮಾರಿಕಾಂಬಾ ದೇವಿ ರಥಾರೋಹಣ, ಸಹಸ್ರಾರು ಭಕ್ತರ ಭಕ್ತಿ ಸಂಭ್ರಮದ ಮಧ್ಯ ರಥೋತ್ಸವ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
