ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಕರೊನಾ, ಲಾಕ್​ಡೌನ್​ನಿಂದಾಗಿ ಮುಂದೂಡಲ್ಪಡುತ್ತಿದೆ.
ಅನೇಕ ನಿರ್ಬಂಧಗಳಿಗೆ ಸರ್ಕಾರ ಸಡಿಲಿಕೆ ನೀಡಿದ್ದರೂ ಪ್ರತಿ ಭಾನುವಾರ ಸಂಪೂರ್ಣ ಲಾಕ್​ಡೌನ್ ವಿಧಿಸಿರುವ ಕಾರಣ ಡಿಕೆಶಿ ಅಧಿಕಾರ ಸ್ವೀಕಾರಕ್ಕೆ ಮತ್ತೊಮ್ಮೆ ಅಡ್ಡಿಯಾಗಿದೆ. ಡಿಕೆಶಿ ಮಂಗಳವಾರ ಖುದ್ದು ಈ ವಿಷಯ ಬಹಿರಂಗಪಡಿಸಿದ್ದು, ಪಕ್ಷದ ಅಧ್ಯಕ್ಷನಾಗಿ ಮೇ 31ಕ್ಕೆ ಅಧಿಕಾರ ಸ್ವೀಕರಿಸಬೇಕೆಂದಿದ್ದೆ. ಭಾನುವಾರ ರಜಾ ದಿನವಾದ ಕಾರಣ ಸಂಚಾರ ದಟ್ಟಣೆ ಇರುವುದಿಲ್ಲ ಎಂಬ ಕಾರಣಕ್ಕೆ ಆ ದಿನ ನಿಗದಿಪಡಿಸಿದ್ದೆ.
ಇದನ್ನೂ ಓದಿVIDEO ] ಅನಾಹುತಕಾರಿ ಅಂಫಾನ್!
ಪ್ರತಿ ಭಾನುವಾರಗಳಂದು ಕರ್ಫ್ಯೂ ಘೋಷಿಸಿ ಬಿಟ್ಟಿದ್ದಾರೆ. ಹೀಗಾಗಿ ಬೇರೊಂದು ದಿನ ಸಾಂಕೇತಿಕವಾಗಿ ಪದಗ್ರಹಣ ಮಾಡಬೇಕೆಂದಿರುವೆ ಎಂದರು. ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಿ, ಪಕ್ಷದ ಧ್ವಜ ಸ್ವೀಕರಿಸುವ ಕಾರ್ಯಕ್ರಮ ಸಾಂಕೇತಿಕ, ಸರಳವಾಗಿದ್ದರೂ ವಿನೂತನವಾಗಿರಲಿದೆ.
ಆ ದಿನ ರಾಜ್ಯದೆಲ್ಲೆಡೆ ಪ್ರತಿ ಗ್ರಾ.ಪಂ., ವಾರ್ಡ್ ಮಟ್ಟದಲ್ಲೂ ಜ್ಯೋತಿ ಬೆಳಗಿಸುವ ಮೂಲಕ ವಿಶಿಷ್ಟವಾಗಿ ನೆರವೇರಿಸಲಿದ್ದು, ಮೇ 31ರ ಬಳಿಕ ಪದಗ್ರಹಣ ದಿನಾಂಕ ತಿಳಿಸಲಾಗುವುದು ಎಂದರು.
ಜೂನ್​ 1ರಿಂದ ದೇಶದಲ್ಲಿ ರೈಲು ಸಂಚಾರವೂ ಸಾಮಾನ್ಯ ಸ್ಥಿತಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 11 =
Remember me
