ಪಾವಗಡ ಪ್ರಕಾಶರಾವ್ನಮ್ಮ ತಾತ್ವಿಕ ದರ್ಶನದಲ್ಲಿ ವಿಶೇಷವಾಗಿ ಅದ್ವೈತ ಸಿದ್ಧಾಂತದಲ್ಲಿ ಒಂದು ಸತ್ಯವನ್ನು ಒಪ್ಪಿಕೊಂಡಿದ್ದೇವೆ. ನಮ್ಮಲ್ಲಿ ‘ಹರಿ-ಹರ’ಗೆ ಭೇದವಿಲ್ಲ. ಕವಿ ಕುಮಾರವ್ಯಾಸ ತನ್ನ ಪದ್ಯಗಳಲ್ಲಿ ವಿಷ್ಣು ಸ್ಮರಣೆ ಮಾಡಿದ ಮರುಕ್ಷಣವೇ ಈಶ್ವರ ಧ್ಯಾನದೊಂದಿಗೆ ಆ ಪದ್ಯವನ್ನು ಪೂರ್ಣಗೊಳಿಸುತ್ತಾನೆ. ಆ ಭಾಗವತ ಕವಿಯ ಉದ್ದೇಶ ವಿಷ್ಣು ಧ್ಯಾನವಾದರೂ ಈಶ್ವರ ನಾಮಸ್ಮರಣೆಯೊಂದಿಗೆ ಮುಕ್ತಾಯವಾಗುತ್ತದೆ.
ಅದ್ವೈತ ಸಿದ್ಧಾಂತದ ದರ್ಶನದಂತೆ ‘ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣುವೇ’ ಎಂದಿದೆ. ಶಿವ ವಿಷ್ಣು ರೂಪದಲ್ಲಿದ್ದಾನೆ, ವಿಷ್ಣು ಶಿವ ರೂಪದಲ್ಲಿದ್ದಾನೆ. ಅಂದರೆ ನಮಗೆ ಶಂಕರ ನಾರಾಯಣರಲ್ಲಿ ಭೇದವಿಲ್ಲ. ಇಬ್ಬರಲ್ಲೂ ಪರಬ್ರಹ್ಮವೇ ನೆಲೆಸಿದೆ. ಈಶ್ವರ ಭಂಗಿ ಅಥವಾ ಚಿತ್ರ ನೋಡಿದಾಗ ಆತ ಧ್ಯಾನ್ಯಸ್ಥನಾಗಿ ಅರ್ಧನಿವೇದಿತ ನೇತ್ರನಾಗಿ ಜ್ಞಾನಮುದ್ರೆಯಲ್ಲಿ ಪದ್ಮಾಸನ ರೂಪದಲ್ಲಿ ಕುಳಿತಿರುತ್ತಾನೆ. ಪಾರ್ವತಿ ಒಮ್ಮೆ ಈ ವಿಚಾರವಾಗಿ ಕೇಳಿದಳು. ‘ನಿಮ್ಮ ಭಕ್ತರು ಶಿವಧ್ಯಾನ ಮಾಡುತ್ತಿರುವಾಗ ನೀವು ಯಾರ ಧ್ಯಾನ ಮಾಡುತ್ತಿರುವಿರಿ?’. ಆಗ ಪರಮೇಶ್ವರನು ಪಾರ್ವತಿಗೆ ಹೇಳಿದ, ‘ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ, ಸಹಸ್ರನಾಮ ತತ್ ತುಲ್ಯಂ ರಾಮನಾಮ ವರಾನನೇ’ ಎಂದು. ‘ನಾನು ಯಾವಾಗಲೂ ಜಪ ಮಾಡುವುದು ಶ್ರೀರಾಮನನ್ನು ಕುರಿತು’ ಎಂದು ವಿವರಿಸುತ್ತಾನೆ. ಇದರಲ್ಲೂ ಒಂದು ಗುಟ್ಟು ಅಡಗಿದೆ. ‘ರಾಮ ರಾಮ ರಾಮ’ ಎಂದು ಮೂರು ಬಾರಿ ಹೇಳಿದರೆ 6 ಅಕ್ಷರವಾಗುತ್ತದೆ. ಅದು ‘ಷಡಕ್ಷರ ಮಂತ್ರ’ ಎಂಬುದಾಗಿ ‘ನಾನು ರಾಮ ನಾಮವನ್ನು ಜಪ ಮಾಡುತ್ತಿರುವೆ’ ಎಂದು ಪುನರುಚ್ಚರಿಸುತ್ತಾನೆ.
ರಾಮೇಶ್ವರ ಶಿವ-ರಾಮ ಸಾನ್ನಿಧ್ಯ: ರಾಮೇಶ್ವರದಲ್ಲಿ ಶಿವ-ರಾಮ ಸಾನ್ನಿಧ್ಯ ಕಾಣಬಹುದು. ರಾವಣನೊಂದಿಗೆ ಶ್ರೀರಾಮ ಯುದ್ಧ ಮುಗಿಸಿ ವಾಪಸ್ ಬರುವಾಗ ಅಗಸ್ತ ್ಯ ಮಹರ್ಷಿಗಳು ಎದುರುಗೊಂಡರು. ಆಗ ಅವರು ರಾಮನನ್ನು ಉದ್ದೇಶಿಸಿ, ‘ಕ್ಷತ್ರಿಯರಿಗೆ ಒಂದು ಸಮಸ್ಯೆ ಕಾಡುತ್ತಿರುತ್ತದೆ. ಯುದ್ಧದಲ್ಲಿ ಹಲವರನ್ನು ಸಂಹಾರ ಮಾಡುವ ಕಾರಣದಿಂದ ಪಾಪ ಸುತ್ತಿಕೊಳ್ಳುತ್ತದೆ. ಅದರಲ್ಲೂ ನೀನು ದಶಕಂಠ ರಾವಣನನ್ನು ಕೊಂದಿರುವೆ. ಆದ್ದರಿಂದ ನಿನಗೆ ಬ್ರಹ್ಮಹತ್ಯೆ ದೋಷ ಬಂದಿದೆ’ ಎಂದು ಹೇಳಿ,
ಪರಿಹಾರವನ್ನೂ ಸೂಚಿಸಿದರು. ‘ಅದಕ್ಕಾಗಿ ನೀನು ಈಶ್ವರನ ಲಿಂಗವನ್ನು ಸ್ಥಾಪನೆ ಮಾಡಬೇಕು, ಆ ಲಿಂಗಕ್ಕೆ ನಿನ್ನ ಹೆಸರು ಸೇರಿಸಬೇಕು. ಅದು ‘ರಾಮೇಶ್ವರ’ ಎಂದಾಗಲಿ’ ಎಂದರು. ಆಗ ಶ್ರೀರಾಮನು ಕೈಲಾಸದಿಂದ ಶಿವಲಿಂಗ ತರಲು ಹನುಮಂತನಿಗೆ ಸೂಚಿಸಿದನು. ರಾಮನ ಆಜ್ಞೆಯಂತೆ ಹನುಮ ಕೈಲಾಸಕ್ಕೆ ತೆರಳಿ ಅಲ್ಲಿದ್ದ ಶಿವಲಿಂಗವನ್ನು ಗ್ರಹಿಸಿ ಅದನ್ನು ತೆಗೆದುಕೊಂಡು ವಾಪಸ್ ಬರುತ್ತಿದ್ದ. ಅದೇ ಸಮಯದಲ್ಲಿ ಶಿವಲಿಂಗ ಸ್ಥಾಪಿಸಲು ಮಹರ್ಷಿ ಅಗಸ್ಱರು ಶುಭಮುಹೂರ್ತಕ್ಕಾಗಿ ಕಾಯುತ್ತಿದ್ದರು. ನಿಗದಿಯಾದ ಮುಹೂರ್ತದಲ್ಲೇ ಪ್ರಾಣ ಪ್ರತಿಷ್ಠಾಪನೆ ಆಗಬೇಕೆಂದು ನಿಶ್ಚಿಯಿಸಲಾಗಿತ್ತು. ಗಡುವು ದಾಟಿದರೆ ಮುಹೂರ್ತ ಮೀರುತ್ತದೆ ಎಂಬುದನ್ನು ಅರಿತಿದ್ದರು. ಅಯೋಧ್ಯೆಯಲ್ಲೂ ಇಂತಹದ್ದೇ ಸಂದಿಗ್ಧತೆ ಎದುರಾಗಿದೆ. ಪ್ರಾಣಪ್ರತಿಷ್ಠೆಗೆ ಕೆಲವೇ ಕ್ಷಣಗಳು ಕೂಡಿಬಂದಿವೆ. ವರ್ಷ, ಆಯನ, ತಿಂಗಳು, ಪಕ್ಷ ಸರಿಹೊಂದಬೇಕು. ಲಗ್ನ ಸರಿಯಿರಬೇಕು. ಇಷ್ಟೆಲ್ಲವನ್ನೂ ನೋಡಿ ಸರಿಯಾದ ಸಮಯಕ್ಕೆ ಪ್ರಾಣಪ್ರತಿಷ್ಠೆ ಮಾಡಬೇಕು. ಆ ಮುಹೂರ್ತವನ್ನು ದಾಟುವಂತಿಲ್ಲ.
ಇದೇ ಸಮಸ್ಯೆ ಅಂದೂ ಬಂದಿತ್ತು. ಅಗಸ್ಱ ್ಯ ಮಹರ್ಷಿಗಳು ಕಾಲವನ್ನು ನೋಡಿ ಹೇಳಿದರು. ಇನ್ನು, ಕೆಲವೇ ಕ್ಷಣಗಳೊಳಗಾಗಿ ಪ್ರಾಣಪ್ರತಿಷ್ಠೆ ಮಾಡಬೇಕು ಎಂದು ಎಚ್ಚರಿಸಿದರು. ಆಗ ಪರಿಸ್ಥಿತಿಯನ್ನು ಅರಿತ ರಾಮನು ಸೀತೆಯನ್ನು ಉದ್ದೇಶಿಸಿ, ‘ನೀನು ಲಂಕೆಯಲ್ಲಿದ್ದಾಗ 10 ತಿಂಗಳ ಕಾಲ ತಪಸ್ಸು ಮಾಡಿರುವೆ. ಯಾವುದೇ ಸಂದಿಗ್ಧತೆಯಲ್ಲೂ ಧೃತಿಗೆಡದೆ ಆತ್ಮಬಲದೊಂದಿಗೆ ಇದ್ದೆ. ಹಾಗಾಗಿ ನೀನು ನಿನ್ನ ಕೈಯಾರೆ ‘ಸೈಕತ ಲಿಂಗ’ (ಮರಳಿನಿಂದ ನಿರ್ವಿುತ ಲಿಂಗ) ಸ್ಥಾಪನೆ ಮಾಡು’ ಎಂದು ಹೇಳಿ ಅದಕ್ಕೆ ಪ್ರಾಣಪ್ರತಿಷ್ಠೆ ಮಾಡುವುದಾಗಿ ತಿಳಿಸಿದನು. ಇದನ್ನಾಧರಿಸಿ ಸೀತೆಯು ಮರಳಿನ ಲಿಂಗವನ್ನು ಸೃಷ್ಟಿಸಿದಳು. ಅದೇ ಮುಹೂರ್ತದಲ್ಲೇ ಅಗಸ್ಱರ ಇಚ್ಛೆ ಈಡೇರಿತು. ಪ್ರಾಣಪ್ರತಿಷ್ಠೆ ಆಗುತ್ತಿದ್ದಂತೆ ‘ರಾಮೇಶ್ವರ’ ಸೃಷ್ಟಿಯಾಗಿಬಿಟ್ಟ. ಸಹಸ್ರ, ಸಹಸ್ರ ವರ್ಷಗಳ ಹಿಂದೆಯೇ ಶ್ರೀರಾಮ ಮರಳಿನ ಲಿಂಗಕ್ಕೆ ಪ್ರಾಣಪ್ರತಿಷ್ಠೆ ಮಾಡಿ ಆ ಕ್ಷೇತ್ರ ಲೋಕಪ್ರಸಿದ್ಧಿಯಾಗಲು ಕಾರಣಕರ್ತನಾದ. (ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಮೇಶ್ವರ ಐದನೇಯದು).
ಇತ್ತ, ಪ್ರಾಣಪ್ರತಿಷ್ಠೆಯ ಅಂತಿಮ ಚರಣದಲ್ಲಿ ‘ಓಂ ಸ್ವಸ್ತಿ’ ಎನ್ನುವಾಗ ಹನುಮಂತ ಕೈಲಾಸ ಲಿಂಗದೊಂದಿಗೆ ಆಗಮಿಸಿದ. ಆದರೆ, ಮುಹೂರ್ತ ಮೀರಿತ್ತು. ಕೈಯಲ್ಲಿ ಲಿಂಗ ಹಿಡಿದಿದ್ದ ಹನುಮಂತ ಅಲ್ಲಿನ ಸ್ಥಿತಿ ನೋಡಿ ಬೇಸರಗೊಂಡ. ಏನು ಮಾಡಬೇಕೆಂದು ಪೆಚ್ಚು ಮೋರೆ ಹಾಕಿಕೊಂಡಿದ್ದನ್ನು ನೋಡಿ ಹನುಮನಿಗೆ ಶ್ರೀರಾಮನು ಸಂತೈಸಿದ. ‘ಕೆಲ ಕ್ಷಣ ತಡವಾಗಿದ್ದಕ್ಕೆ ನಾನು ತಂದ ಲಿಂಗಕ್ಕೆ ಬೆಲೆಯೇ ಇಲ್ಲವೇ’ ಎಂದು ಕೇಳಿದ ಹನುಮಂತ. ಹನುಮಂತನಿಗೆ ಬೇಸರ ಮಾಡಬಾರದೆಂದು ‘ಪ್ರತಿಷ್ಠೆ ಮಾಡಿರುವ ಲಿಂಗವನ್ನು ಕಿತ್ತು ಹಾಕು’ ಎಂದು ರಾಮ ಹೇಳಿದ. ಪ್ರತಿಷ್ಠಾಪಿಸಿದ್ದ ಲಿಂಗವನ್ನು ಹನುಮಂತ ತನ್ನ ಬಾಲದಿಂದ ಎಳೆಯಲು ಯತ್ನಿಸಿದ. ಆದರೆ, ಅವನ ಯತ್ನ ಸಫಲವಾಗಲಿಲ್ಲ. ಬದಲಾಗಿ ಆಂಜನೇಯನ ಬಾಲವೇ ಕತ್ತರಿಸಿಹೋಯಿತು. ಇದು ರಾಮೇಶ್ವರ ಲಿಂಗದ ಪ್ರಭಾವ, ಶಕ್ತಿ, ಪವಾಡವೂ ಹೌದು.
ತನ್ನ ಭಂಟ ಕಷ್ಟಪಟ್ಟು ಕೈಲಾಸದಿಂದ ತಂದಿದ್ದ ಶಿವಲಿಂಗವನ್ನು ಪ್ರತಿಷ್ಠಾಪಿಸಲಿಲ್ಲ ಎಂಬ ವ್ಯಥೆ ಶ್ರೀರಾಮನಿಗೆ ಕಾಡಿತು. ಆಗ ಹನುಮಂತನನ್ನು ಉದ್ದೇಶಿಸಿ, ‘ನಾನು ನಿನಗೆ ವರವೊಂದನ್ನು ಕೊಡುತ್ತಿದ್ದೇನೆ. ನೀನು ತಂದಿರುವ ಲಿಂಗವನ್ನು ರಾಮೇಶ್ವರ ಲಿಂಗದ ಬದಿಯಲ್ಲೇ ಸ್ಥಾಪನೆ ಮಾಡು. ಮುಹೂರ್ತ ನೋಡಿ ಸ್ಥಾಪನೆಯಾಗಿದ್ದು ನನ್ನ ರಾಮೇಶ್ವರ. ಆದರೆ, ನೀನು ಕೈಲಾಸದಿಂದ ತಂದಂಥ ಲಿಂಗ ಈಶ್ವರ ಅಂಶವಿರುವ ಕಾರಣ ಅದಕ್ಕೆ ‘ಹನುಮೇಶ್ವರ’ ಎಂದು ಹೆಸರು’ ಎಂದು ತಿಳಿಸಿದ. ಬಳಿಕ ಹನುಮೇಶ್ವರ ಲಿಂಗ ಸ್ಥಾಪನೆ ಮಾಡಲಾಯಿತು. ಈಗಲೂ ರಾಮೇಶ್ವರಕ್ಕೆ ಭೇಟಿ ನೀಡಿದರೆ ಅಲ್ಲಿನ ಶಿವಲಿಂಗದ ಬಳಿ ಬಾಲವಿಲ್ಲದ ಹನುಮಂತನನ್ನು ಕಾಣಬಹುದು.
ಭೇಟಿ ವೇಳೆ ನಿಯಮ ಪಾಲಿಸಿ: ರಾಮೇಶ್ವರಕ್ಕೆ ಬರುವ ಭಕ್ತರು ಎರಡು ನಿಯಮವನ್ನು ಪಾಲನೆ ಮಾಡಬೇಕು. ಒಂದು, ಕಾಶಿಯಿಂದ ಗಂಗೆಯನ್ನು ತೆಗೆದುಕೊಂಡು ಬಂದು ರಾಮೇಶ್ವರ ಲಿಂಗಕ್ಕೆ ಅಭಿಷೇಕ ಮಾಡಬೇಕು. ಎರಡು-ರಾಮೇಶ್ವರ ದರ್ಶನಕ್ಕೆ ಮುನ್ನ ಹನುಮೇಶ್ವರ ಲಿಂಗವನ್ನು ನೋಡಬೇಕು. ಅಂದರೆ ಹನುಮೇಶ್ವರ ಲಿಂಗವನ್ನು ನೋಡಿದ ಬಳಿಕ ರಾಮೇಶ್ವರ ಲಿಂಗ ದರ್ಶಿಸಿದರೆ ಆ ಕ್ಷೇತ್ರದ ಪುಣ್ಯಫಲ ಸಿಗುತ್ತದೆ. ಈ ಎರಡೂ ಲಿಂಗಗಳನ್ನು ನೋಡಿ ಭಕ್ತರು ಧನ್ಯರಾಗಬಹುದು.
ಅಂದ ಹಾಗೆ, ಶ್ರೀರಾಮ ಮತ್ತು ಈಶ್ವರ ಪರಸ್ಪರ ಸ್ನೇಹಿತರು. ಇಬ್ಬರೂ ಪರಸ್ಪರ ಭಕ್ತರಾಗಿಯೂ ಗಮನ ಸೆಳೆಯುತ್ತಾರೆ. ಈಶ್ವರ ಜಪ ಮಾಡಿ ಭಕ್ತನಾಗುತ್ತಾನೆ. ಶ್ರೀರಾಮನು ಈಶ್ವರನ ಲಿಂಗವನ್ನು ಪೂಜೆ ಮಾಡಿ ಭಕ್ತನಾಗಿದ್ದಾನೆ. ಹೀಗಿರುವಾಗ ಶೈವರು, ಶಾಕ್ತೆಯರು ಅಯೋಧ್ಯೆ ಶ್ರೀರಾಮನ ಸನ್ನಿದ್ಧಿಗೆ ಹೋಗಬಾರದು ಎಂಬುದು ಅಸಂಬದ್ಧ.
(ಲೇಖಕರು ಹಿರಿಯ ವಿದ್ವಾಂಸರು, ಪ್ರವಚನಕಾರರು)
ರಾಮಮಂದಿರದ ಪ್ರತಿಷ್ಠಾಪನೆ ಹಾನಿಗೊಳಗಾದ ರಾಷ್ಟ್ರದ ಉತ್ಸಾಹದ ಪುನರುತ್ಥಾನವಾಗಿದೆ: ಸದ್ಗುರು

ಮಾತ್ರೆಯಿಂದ ಬಟ್ಟೆ ಕಲೆ ಮಾಯ; ನಿನ್​ ಟ್ಯಾಲೆಂಟ್​ ಮೆಚ್ಚಲೇಬೇಕಮ್ಮ ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
