ಶಿವಮೊಗ್ಗ:ವಿಧಾನಸಭೆ ಚುನಾವಣೆಗೆ ಇನ್ನು ಐದು ತಿಂಗಳು ಇರುವಾಗಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಎಸ್‌ವೈ ತವರು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಎಚ್.ಟಿ.ಬಳಿಗಾರ್ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಳಿಗಾರ್ 15 ಸಾವಿರ ಮತ ಪಡೆದಿದ್ದರು. 2018ರ ಚುನಾವಣೆಯಲ್ಲಿ 13,191 ಮತಗಳು ಲಭಿಸಿದ್ದವು. ಈ ಹಿಂದೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರೊಂದಿಗೆ ಜೆಡಿಎಸ್ ಸೇರ್ಪಡೆಯಾಗಿದ್ದ ಬಳಿಗಾರ್, ಶಿಕಾರಿಪುರ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಇವರಿಗೆ ಸಿಕ್ಕಿರಲಿಲ್ಲ.
ದಶಕಕ್ಕೂ ಹೆಚ್ಚು ಕಾಲ ಪಕ್ಷಕ್ಕಾಗಿ ದುಡಿದರೂ ನಾಯಕರ ಬೆಂಬಲ ಸಿಗಲಿಲ್ಲ. ಇದೀಗ ಬಿಜೆಪಿ ಬಾಗಿಲು ತೆರೆದಿದ್ದು, 2 ದಿನದ ಹಿಂದಷ್ಟೇ ತರೀಕೆರೆ ಪ್ರವಾಸಿ ಮಂದಿರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್‌ವೈ ಅವರೊಂದಿಗೆ ಬಳಿಗಾರ್ ಚರ್ಚೆ ನಡೆಸಿದ್ದಾರೆ. ಜೆಡಿಎಸ್‌ನಿಂದ ಮಾನಸಿಕವಾಗಿ ದೂರಾಗಿರುವ ಬಳಿಗಾರ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಒಂದೆರಡು ದಿನಗಳಲ್ಲೇ ಚರ್ಚಿಸಿ ಬಿಜೆಪಿ ಸೇರ್ಪಡೆಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಮಿಷನ್ 123 ಜೆಡಿಎಸ್ ಗುರಿ, 126 ಕ್ಷೇತ್ರ ಗಂಭೀರ ಪರಿಗಣನೆ: ಪಕ್ಷ ಸಂಘಟನೆಗೆ ಪ್ರತಿ ಬೂತ್​ನಲ್ಲಿ 22 ಕಾರ್ಯಕರ್ತರ ತಂಡ ರಚನೆ

ಹುತ್ರಿದುರ್ಗ ಬೆಟ್ಟದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಯುವಕ-ಯುವತಿಯ ಬಟ್ಟೆ ಬಿಚ್ಚಿ ಕಿರುಕುಳ, ಚಾರಣಿಗರಿಗೆ ಬೆದರಿಕೆ ಹಾಕಿ ದರೋಡೆ…

ಬೆಂಗ್ಳೂರಲ್ಲಿ ವಿಕೃತ ಮನಸ್ಥಿತಿಯ ವೈದ್ಯ ಅರೆಸ್ಟ್​! ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯರ ಖಾಸಗಿ ಅಂಗಗಳ ವಿಡಿಯೋ ಚಿತ್ರೀಕರಿಸುತ್ತಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
