ಶಿವಮೊಗ್ಗ:ನಿನ್ನೆ(ಗುರುವಾರ) ರಾತ್ರಿ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್​, ಡೈನಾಮಿಕ್​ ತುಂಬಿದ್ದ ಲಾರಿ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣ ಸಾವು-ನೋವು ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ಇದುವರೆಗೂ ಛಿದ್ರಛಿಧ್ರಗೊಂಡ 5 ಜನರ ಮೃತದೇಹಗಳು ಸಿಕ್ಕಿದ್ದು, ಸತ್ತಿರುವವರು ಕ್ರಷರ್​ ಕಾರ್ಮಿಕರಲ್ಲ!
ಸ್ಫೋಟದ ತೀವ್ರತೆಗೆ ಇಡೀ ಪ್ರದೇಶದಲ್ಲಿ ಭೂದಿ ಆವರಿಸಿತ್ತು. ಗಬ್ಬು ವಾಸನೆ ಬರುತ್ತಿತ್ತು. ಸುತ್ತಮುತ್ತಲ ನಾಲ್ಕು ಜಿಲ್ಲೆಗೂ ಹಾನಿಯಾಗಿದ್ದು, ನೂರಾರು ಮನೆಗಳು ಬಿರುಕುಬಿಟ್ಟಿವೆ. ಸ್ಫೋಟಗೊಂಡ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದರ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ. ಇನ್ನು ಈ ಸ್ಫೋಟಕ್ಕೆ ಮತ್ತೆಷ್ಟು ಜನ ಬಲಿಯಾಗಿದ್ದಾರೆ ಎಂದು ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೂ 5 ಮೃತದೇಹಗಳು ಸಿಕ್ಕಿದ್ದು, ಅದು ಕ್ರಷರ್​ ಕಾರ್ಮಿಕರದ್ದಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಲ್ಲಿ ಹೋದರು ಎಂಬ ಪ್ರಶ್ನೆ ಮೂಡಿದೆ.ಇದನ್ನೂ ಓದಿರಿಶಿವಮೊಗ್ಗದಲ್ಲಿ ಭೀಕರ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಸ್ಫೋಟಗೊಂಡ ಸ್ಥಳದಲ್ಲಿ ಸಿಕ್ಕಿರುವ ಮೃತದೇಹಗಳು ಲಾರಿಯಲ್ಲಿ ತಂದಿದ್ದ ಸ್ಫೋಟ ವಸ್ತುಗಳನ್ನು ಕೆಳಗಿಳಿಸಲೆಂದು ಬಂದಿದ್ದವರದ್ದು ಎನ್ನಲಾಗುತ್ತಿದೆ. ಒಂದು ಕಡೆ ಕಾಲು, ಮತ್ತೊಂದು ಕಡೆ ತಲೆ ಬಿದ್ದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಬೆಂಗಳೂರು ಮತ್ತು ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮುಂದುವರಿದಿದ್ದು, ಐದು ಮೃತ ದೇಹ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ರಾತ್ರಿಯೇ ಎರಡು ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಕ್ರಷರ್​ ನಡೆಯುತ್ತಿದ್ದ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಲಾರಿಗಳ ಗಾಜು ಪುಡಿ ಪುಡಿಯಾಗಿವೆ. ಸುತ್ತ ಮುತ್ತಲ ನಿವಾಸಿಗಳ ಮನೆಯ ಬಾಗಿಲುಗಳು ಕಿತ್ತುಬಂದಿದೆ.
ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

ಶಿವಮೊಗ್ಗದಲ್ಲಿ ಭೀಕರ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬಸ್​ನಲ್ಲಿ ಹಾಡಹಗಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ, ಸ್ಥಳದಲ್ಲೇ ಫೋಟೋ ಕ್ಲಿಕ್ಕಿಸಿದ ದಿಟ್ಟೆ ಮಾಡಿದ್ದೇನು?

ಶಿವಮೊಗ್ಗದಲ್ಲಿ ಭಾರಿ ಸ್ಫೋಟ, ಕಾರ್ಮಿಕರ ಮೃತದೇಹ ಛಿದ್ರಛಿದ್ರ: ತುಂಗಾ-ಭದ್ರಾ ಡ್ಯಾಂಗೂ ಆಪತ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
