ಶಿವಮೊಗ್ಗ:ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ವರದಕ್ಷಿಣೆ ಕಿರುಕುಳದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಸಿ ಠಾಣೆ ಪೊಲೀಸರು ಆಕೆಯ ಪತಿ ಮತ್ತು ಮಾವನನ್ನು ಬಂಧಿಸಿದ್ದಾರೆ.
ತಾಲೂಕಿನ ಕುಂಸಿಯ ಕನಕನಗರ ಕವನ (19) ಆತ್ಮಹತ್ಯೆ ಮಾಡಿಕೊಂಡವಳು. ಆಕೆಯ ಪತಿ ಭರತ್ ಮತ್ತು ಮಾವ ಚಂದ್ರಪ್ಪ ಎಂಬುವರನ್ನು ಬಂಧಿಸಲಾಗಿದೆ.
ಘಟನೆ ವಿವರ:ಅಶೋಕನಗರದ ಕವನ ಮತ್ತು ಕುಂಸಿ ಕನಕನಗರದ ಭರತ್ ಪರಸ್ಪರ ಪ್ರೀತಿಸಿದ್ದರು. ಭರತ್ ಶಿವಮೊಗ್ಗದಲ್ಲಿ ಫವರ್ ಡೆಕೋರೇಟರ್ ಆಗಿದ್ದರೆ, ಕವನ ದ್ವೀತಿಯ ಪಿಯುಸಿ ಪೂರೈಸಿದ್ದಳು. ಪ್ರೀತಿ ವಿಚಾರವನ್ನು ಕವನ ತನ್ನ ತಾಯಿಗೆ ತಿಳಿಸಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕುಂಸಿಯಲ್ಲಿದ್ದ ಭರತ್ ಮನೆಗೆ ತೆರಳಿದ್ದ ಕವನ, ಆ ಬಳಿಕ ಗುಡ್ಡೇಕಲ್‌ನಲ್ಲಿ ವಿವಾಹವಾಗಿ ಗಂಡನ ಮನೆ ಸೇರಿದ್ದಳು.
ಇದನ್ನೂ ಓದಿರಿ:ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!
ಈ ನಡುವೆ ತಾಯಿ ಬಳಿಯಲ್ಲಿದ್ದ ಹಣ ಹಾಗೂ ಒಡವೆ ತರುವಂತೆ ಒತ್ತಾಯಿಸಿ ಆಕೆಗೆ ಗಂಡನ ಮನೆಯವರು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಕವನ ಫೆ.23ರಂದು ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪತಿ ಭರತ್, ಅತ್ತೆ ನಾಗಮ್ಮ ಮತ್ತು ಮಾವ ಚಂದ್ರಪ್ಪ ಕಿರುಕುಳ ಕಾರಣವೆಂದು ಕವನ ತಾಯಿ ಭಾಗ್ಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.
ಕವನ ಟಿಕ್‌ಟಾಕ್ ಖ್ಯಾತಿ ಪಡೆದಿದ್ದಳು ಪಿಯುಸಿ ಮುಗಿಸಿ ಇತ್ತೀಚೆಗಷ್ಟೇ ಪ್ಯಾರಮೆಡಿಕಲ್‌ಗೆ ಪ್ರವೇಶ ಪಡೆದಿದ್ದಳು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಕುಂಸಿ ಪೊಲೀಸರು ತಿಳಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೆಂಡತಿ ಮುಖ ನೋಡಿ ಮುಜುಗರಕ್ಕೊಳಗಾಗಿ ಕಟ್ಟಡದಿಂದ ಜಿಗಿದಿದ್ದ ವಂಚನೆ ಆರೋಪಿ ಸಾವು

ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + five =
Remember me
