ಶಿವಮೊಗ್ಗ:ಸರ್ಕಾರಿ ಕಚೇರಿಗೆ ನುಗ್ಗಿ ಮಹಿಳಾಧಿಕಾರಿ ಮೇಲೆಯೇ ಅವರ ಪತಿ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಯಲ್ಲಿ ನಡೆದಿದೆ.
ಶಿಲ್ಪ ಎಂ. ದೊಡ್ಡಮನಿ ಅವರು ಶಿವಮೊಗ್ಗದ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯಾಗಿದ್ದಾರೆ.
ಇದನ್ನೂ ಓದಿ:ಬುಡಕಟ್ಟು ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಶಾಸಕನ ಪುತ್ರ: ಈಗಾಗಲೇ ಮತ್ತೊಂದು ಪ್ರಕರಣಲ್ಲಿ ಜಾಮೀನಿನ ಮೇಲೆ ಹೊರಗಿದ್ದ..
ಬಸವೇಶ್ವರ ನಗರದ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸಿಬ್ಬಂದಿ ವೆಂಕಟಾಚಲ ಮತ್ತು ನ್ಯೂ ಟೌನ್‌ ಭದ್ರಾವತಿಯ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿ ಶಂಕರ ನಾಯಕ ಅವರು ಸೇವಾ ಪುಸ್ತಕದ ಮೇಲು ಸಹಿಗಾಗಿ ಕಚೇರಿಗೆ ಆಗಮಿಸಿ ಮಾತನಾಡುತ್ತಾ ಕುಳಿತಿದ್ದಾಗ ಶಿಲ್ಪ ಅವರ ಪತಿ ಶ್ರೀನಿವಾಸ ಮೂರ್ತಿ ವಿ. ಬೊರಗಿ ಅವರು ಏಕಾಏಕಿ ಕಚೇರಿ ಒಳಗೆ ನುಗ್ಗಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ಶಿಲ್ಪ ಅವರು ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಕಚೇರಿಗೆ ನುಗ್ಗಿದ ಮೂರ್ತಿ, ಹೊರಗಡೆ ಬಾರೆ, ನಿನಗೆ ಕೆಲಸ ಬೇಡ, ಮನೆಯಲ್ಲಿಯೇ ಬಿದಿರು ಎಂದು ಕುಡಿದ ಮತ್ತಿನಲ್ಲಿ ಕೂಗಾಡುತ್ತಾ, ಶಿಲ್ಪ ಅವರಿಗೆ ಹೊಡೆದಿದ್ದಾರೆ. ಇಷ್ಟೇ ಅಲ್ಲದೆ, ಕಚೇರಿ ಸಿಬ್ಬಂದಿಯಾದ ಕಂಪ್ಯೂಟರ್ ಅಪರೇಟರ್ ಕವಿತಾ ಅವರು ಶಿಲ್ಪ ಅವರ ರಕ್ಷಣೆಗೆ ಅಡ್ಡ ನಿಂತಾಗ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಶಿಲ್ಪ ಅವರ ಸಹದ್ಯೋಗಿಯೊಬ್ಬರು ಮೂರ್ತಿ ಅವರ ಹೈಡ್ರಾಮವನ್ನು ಮೊಬೈಲ್​ನಲ್ಲಿ ಸೆರೆಹಿಡಿಯುವಾಗ ಮೊಬೈಲ್​ ಕಸಿದುಕೊಂಡು ನೆಲಕ್ಕೆ ಒಡೆದು. ಅವರ ಮೇಲೂ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಶಿಲ್ಪ ಅವರು ದೂರು ನೀಡಿದ್ದಾರೆ.
ಈ ಘಟನೆ ಜುಲೈ 19ರಂದು ಮಧ್ಯಾಹ್ನ 3.35ರ ಸುಮಾರಿಗೆ ನಡೆದಿದೆ. ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿ, ಎಲ್ಲ ಸಿಬ್ಬಂದಿ ಎದುರು ಗಲಾಟೆ ಮಾಡಿದ್ದು, ಕ್ರಮ ಜರುಗಿಸಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕಡತದಲ್ಲುಳಿದ ಮೆಗಾ ಟೆಕ್ಸ್ ಟೈಲ್ ಪಾರ್ಕ್ : ಗೊಂದಲದಲ್ಲಿ ಔಟರ್ ರಿಂಗ್ ರೋಡ್ ; ಕಲಬುರಗಿ ಜನರ ಸಮಸ್ಯೆಯತ್ತ ಹರಿಯಲಿ ಸಿಎಂ ಚಿತ್ತ
ಅಂದಹಾಗೆ 2006ರಲ್ಲಿ ಶ್ರೀನಿವಾಸ ಮೂರ್ತಿಯವರನ್ನು ಶಿಲ್ಪ ಅವರು ಮದುವೆ ಆದರು. 2011 ರಲ್ಲಿ ಅವರು ಸರ್ಕಾರಿ ನೌಕರಿಗೆ ಸೇರಿದರು. ಅವರ ಪತಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇದೆ ಎನ್ನಲಾಗಿದೆ. ಹೀಗಾಗಿ ಶಿಲ್ಪ ಅವರಿಗೆ ವಿಚ್ಛೇದನ ನೀಡಲು ಮೂರ್ತಿ ಮುಂದಾಗಿದ್ದ. ಆದರೆ ವಿಚ್ಛೇದನವನ್ನು ಶಿಲ್ಪ ಅವರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 19ರಂದು ಕಚೇರಿಯೊಳಗೆ ನುಗ್ಗಿ ಶಿಲ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಸಂಬಂಧ ಶಿವಮೊಗ್ಗದ್ದ ಮಹಿಳಾ ಠಾಣೆಯಲ್ಲಿ ಶಿಲ್ಪ ಅವರು ದೂರು ದಾಖಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಲಾಲ್​​​​ ಬಾಗ್​​​ನಲ್ಲಿ ಇಂದಿನಿಂದ ಸಾರ್ವಜನಿಕರಿಗೆ ಫ್ಲವರ್ ಶೋ ವೀಕ್ಷಣೆಗೆ ಅವಕಾಶ; ಹರಿದು ಬರುತ್ತಿರುವ ಜನಸಾಗರ

ಫೋನ್​ ಕಾಲ್​ ಹುಟ್ಟುಹಾಕಿದ ಅನುಮಾನ: ಪ್ರೇಯಸಿಯ ತಲೆಗೆ ರಾಡ್​ನಿಂದ ಹಲ್ಲೆ ಮಾಡಿದ ಪ್ರಿಯಕರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twelve =
Remember me
