ಶಿವಮೊಗ್ಗ:ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಧಾರಾಕಾರ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಇದೀಗ ಶಿವಮೊಗ್ಗ-ಮಂಗಳೂರು ಹೆದ್ದಾರಿ ಕೂಡ ಬಂದ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಶಿವರಾಜಪುರ ಬಳಿ ಹಳ್ಳಕ್ಕೆ ಹಿಮ್ಮುಖವಾಗಿ ನುಗ್ಗಿದ‌ ತುಂಗಾ ನದಿ ನೀರು, ಸೇತುವೆ ಮೇಲೆ ಕೂಡ ಹರಿಯಲಾರಂಭಿಸಿದೆ. ಸೇತುವೆ ಮೇಲೆ ಸುಮಾರು ನಾಲ್ಕು ಅಡಿಗೂ ಹೆಚ್ಚಿನ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಹೀಗೆ ನೀರು ಹರಿಯುತ್ತಿದ್ದ ಸೇತುವೆ ಮೇಲೆ ಗ್ಯಾಸ್​ ಸಿಲಿಂಡರ್ ತುಂಬಿಕೊಂಡಿದ್ದ ಲಾರಿಯೊಂದು ಚಲಾಯಿಸಿಕೊಂಡು ಹೋಗಲು ಯತ್ನಿಸಿ ಚಾಲಕ ಲಾರಿ ಸಮೇತ ಸಿಕ್ಕಿಹಾಕಿಕೊಂಡಿದ್ದಾನೆ. ತುಂಗೆಯ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿರುವ ಲಾರಿಯನ್ನು ಬಳಿಕ ಅಲ್ಲೇ ಬಿಟ್ಟು ಚಾಲಕ ಸುರಕ್ಷಿತ ಸ್ಥಳಕ್ಕೆ ಸೇರಿಕೊಂಡಿದ್ದಾನೆ.
ಇದನ್ನೂ ಓದಿ:‘ಸದನ ಬಿಟ್ಟು ಹೋಗಿ’! ಹೇಳಿಕೆ ಪತ್ರ ಹರಿದು ಚೆಲ್ಲಾಡಿದ ಸಂಸದ ಸಸ್ಪೆಂಡ್!
ಇದೇ ರೀತಿ ಮಳೆ‌ ಮುಂದುವರಿದಲ್ಲಿ ನೀರಿನಲ್ಲಿ ಲಾರಿ ಕೊಚ್ಚಿ ಹೋಗುವ ಸಾಧ್ಯತೆಯೂ ಇದೆ. ಅಲ್ಲದೆ ಯಾವುದಾದರೂ ಬೇರೆ ವಾಹನ ಸೇತುವೆ ಮೇಲೆ ಸಾಗಲು ಯತ್ನಿಸಿದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್​ ಆಗಿದೆ. ಪ್ರಯಾಣಿಕರಿಗೆ ಬೊಬ್ಬಿ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್
VIDEO | ಪ್ರವಾಹಪೀಡಿತ ಪಟ್ಟಣದಿಂದ ಭಯಾನಕ ವಿಡಿಯೋ ವೈರಲ್!

ಭಾರಿ ಮಳೆಗೆ ಹಳಿಗಳು ಜಲಾವೃತ: ತಾಳಗುಪ್ಪ-ಮೈಸೂರು ರೈಲು ಸಂಚಾರ ಸ್ಥಗಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + three =
Remember me
