ಶಿವಮೊಗ್ಗ:ಭಾನುವಾರ ಸಂಜೆ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟದ ಬಳಿಕ ಪ್ರಕ್ಷಬ್ಧ ಪರಿಸ್ಥಿತಿ ಉಂಟಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ.
ರಾಗಿಗುಡ್ಡದಲ್ಲಿನ ಈ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರಗತಿಯ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಒಟ್ಟು 24 ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಮಾತ್ರವಲ್ಲ, 60 ಜನರ ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರ ಪೈಕಿ ಕೆಲವು ಆರೋಪಿಗಳನ್ನು ಚಿತ್ರದುರ್ಗ ಜೈಲಿಗೆ, ಕೆಲವು ಆರೋಪಿಗಳನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಬಂಧಿತರಿಂದ ಒಂದು ಕಾರು, ಒಂದು ತ್ರಿಚಕ್ರ ವಾಹನ, ಎರಡು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಶಿವಮೊಗ್ಗ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್​ ತಿಳಿಸಿದ್ದಾರೆ.
ಈ ಗಲಭೆಯಲ್ಲಿ ಏಳು ಮನೆಗಳ ಗಾಜು ಪುಡಿಪುಡಿ ಆಗಿದೆ. ಆದರೆ ಬೆಳಗ್ಗೆಯಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. 144 ಸೆಕ್ಷನ್ ಇರುವ ಕಾರಣ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.
ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು

ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
