ಬಾಗಲಕೋಟೆ:ಲೋಕಸಭಾ ಚುನಾವಣೆ 2024ರ ಕದನ ರಂಗೇರುತ್ತಿದ್ದು, ಆಯಾ ಪಕ್ಷಗಳಲ್ಲಿ ತಯಾರಿ ಭರ್ಜರಿಯಿಂದ ಸಾಗುತ್ತಿದೆ. ಈ ಮಧ್ಯೆ ಈಗಾಗಲೇ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಘೋಷಿಸಿದ್ದು, ಉಳಿದ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ.
ಇದನ್ನೂ ಓದಿ:ಪ್ರೋತ್ಸಾಹಕ್ಕೆ ಕಾಯದೆ ಗುರಿ ತಲುಪಲು ಪ್ರಯತ್ನಿಸಿ: ಮಹಿಳೆಯರಗೆ ಪ್ರಾಧ್ಯಾಪಕಿ ಡಾ.ಆರ್. ಎಚ್. ಪವಿತ್ರ ಸಲಹೆ
ಇನ್ನು ಕಾಂಗ್ರೆಸ್​ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ದ್ವಿತೀಯ ಪಟ್ಟಿ ಪ್ರಕಟಿಸಬೇಕಿದೆ. ಇದರ ಬೆನ್ನಲ್ಲೇ ‘ಕೈ’ ಟಿಕೆಟ್​ ಆಕಾಂಕ್ಷಿಯಾಗಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಇದೀಗ ದೇವರ ಮೊರೆ ಹೋಗಿರುವುದು ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ಗಾಗಿ ದೇವರ ಮೊರೆ ಹೋಗಿರುವ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ , ಇಂದು ಬಾಗಲಕೋಟೆಯ ಬಾದಾಮಿಯ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿದರು. ಶಕ್ತಿಪೀಠ ಬನಶಂಕರಿ ದೇವಾಲಯಕ್ಕೆ ಆಗಮಿಸಿ,ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ:ಲಿಂಗದೇವರಕೊಪ್ಪಲಿನಲ್ಲಿ ಹೊನಲು ಬೆಳಕಿನ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ
ವಿಜಯಪುರ ಜಿಲ್ಲೆಯ ಸಂಯುಕ್ತಾ ಪಾಟೀಲ, ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸದ್ಯ ಆಕಾಂಕ್ಷಿಗಳ ರೇಸ್​ನಲ್ಲಿ ಪ್ರಬಲವಾಗ್ತಿದೆ ಸಂಯುಕ್ತಾ ಪಾಟೀಲ ಹೆಸರು. ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಆಗಿರುವ ಸಂಯುಕ್ತಾ, ಕುಟುಂಬ ಸಮೇತ ಬನಶಂಕರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಟಿಕೆಟ್ ಆಕಾಂಕ್ಷಿಗಳಾದ ಅಜಯಕುಮಾರ ಸರನಾಯಕ, ವೀಣಾ ಕಾಶಪ್ಪನವರ್​, ಆನಂದ ನ್ಯಾಮಗೌಡರ ಹೆಸರಿನ ಜತೆ ಸಂಯುಕ್ತಾ ಹೆಸರು ಕೂಡ ಈಗ ಮುಂಚೂಣಿಯಲ್ಲಿದೆ.
ಬಿಸಿಯೂಟ ತುಂಬ ಅಗತ್ಯ, ದಯವಿಟ್ಟು ಅರ್ಧದಿನ ರಜೆ ಕೊಡ್ಬೇಡಿ: ಮನಕಲಕುವಂತಿದೆ ಈ ವಿದ್ಯಾರ್ಥಿ ಬರೆದ ಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 13 =
Remember me
