ಮೈಸೂರು:ನಾಡಿನ ಜನರ ಬದುಕಿನಲ್ಲಿ ಮಠಗಳ ಪಾತ್ರ ಅಪಾರವಾದದ್ದು. ಬಡವರ್ಗದ ಮಕ್ಕಳ ಆಶಾಕಿರಣವಾಗಿರುವ ಮಠಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿವೆ. ಈ ಪೈಕಿ ಸುತ್ತೂರು ಮಠ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದರು.
ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯಡಿ ಜೆಎಸ್​ಎಸ್ ಮಹಾವಿದ್ಯಾಪೀಠ ಹೊರತಂದಿರುವ ‘ಶಿವಪದ ರತ್ನಕೋಶ’ ಕೃತಿಯನ್ನು ಮಂಗಳವಾರ ಬೆಂಗಳೂರಿನಿಂದ ಆನ್​ಲೈನ್ ಮೂಲಕ ಬಿಡುಗಡೆ ಮಾಡಿ ಮಾತನಾಡಿದರು. ‘ಶಿವಪದ ರತ್ನಕೋಶ’ ಶಿವಧರ್ಮ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಇಂಥ ಬೃಹತ್ ಗ್ರಂಥವನ್ನು ಸುತ್ತೂರು ಮಠ ಹೊರತಂದು ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.
ಅಧ್ಯಯನಯೋಗ್ಯ ಕೃತಿ: ಪಾರಿಭಾಷಿಕ ಪದಗಳಿಗೆ ವಿದ್ವಾಂಸರು ಅಧ್ಯಯನ, ಸಮಾಲೋಚನೆ ನಡೆಸಿ ಅರ್ಥ ಹುಡುಕಿದ್ದಾರೆ. ಇದು ಆಳವಾದ ಅಧ್ಯಯನಕ್ಕೆ ಸಹಕಾರಿಯಾದ ಕೃತಿ ಎಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.
ಆದಿಚುಂಚನಗಿರಿಯ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಜಯಪುರದ ಶ್ರೀ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಕನಕಪುರದ ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಎಸ್.ಟಿ. ಸೋಮಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ ಮತ್ತಿತರರಿದ್ದರು.
ಯಡಿಯೂರಪ್ಪ ಸಿಎಂ ಆದಾಗಿನಿಂದಲೂ ಹಲವಾರು ಸಂಕಷ್ಟ ಎದುರಿಸಿಕೊಂಡು ಬಂದಿದ್ದಾರೆ. ಅವರ ಆಡಳಿತಾವಧಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಬಳಿಕ ಇದೀಗ ಕರೊನಾ ಎದುರಾಗಿದೆ. ಭಗವಂತ ಕಷ್ಟಗಳನ್ನು ಎದುರಿಸುವ ಶಕ್ತಿ ಇರುವವರಿಗೆ ಮಾತ್ರ ಪರೀಕ್ಷಿಸುವ ಸಲುವಾಗಿ ಕಷ್ಟಗಳನ್ನು ಕೊಡುತ್ತಾನೆ. ಅವರು ಎಲ್ಲ ಸಂಕಷ್ಟ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ.
| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
