ಹುಬ್ಬಳ್ಳಿ:ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್​ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕನ್ನಡದ ಹ್ಯಾಟ್ರಿಕ್​ ಹೀರೋ ಶಿವರಾಜ್​​ಕುಮಾರ್​​​ ಇಂದು (ಮೇ 6) ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್​​ ಶೆಟ್ಟರ್​ ಪರ ಮತಯಾಚನೆ ಮಾಡಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಶಿವರಾಜ್​ಕುಮಾರ್​​​, ಟ್ರೋಲ್​ ಮಾಡುವವರ ವಿರುದ್ಧ ಕೆಂಡ ಕಾರಿದರು.
ಶಿವರಾಜ್​ಕುಮಾರ್​​​ ಹುಬ್ಬಳ್ಳಿಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಜಗದೀಶ್​​ ಶೆಟ್ಟರ್​ ಪರ ಮತ ಯಾಚನೆಗೆ ಆಗಮಿಸಿದ್ದರು. ಪ್ರಚಾರದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಟ್ರೋಲ್ ಮಾಡುವವರ ಬಗ್ಗೆ ಏನೂ ಮಾತನಾಡಲ್ಲ, ಟ್ರೋಲ್ ಏಕೆ ಮಾಡಬೇಕು, ಟ್ರೋಲ್ ಮಾಡುವವರು ನಿಮ್ಮ ಮನಸ್ಸಿಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ, ನೀವು ಮಾಡೋದು ಸರಿಯಾ ಎಂದು. ಇಂದು ರೋಡ್‌ ಶೋ‌‌ನಲ್ಲಿ ಇಷ್ಟೊಂದು ಜನ ಬಂದಿದ್ದಾರೆ. ಇವರೆಲ್ಲ ಟ್ರೋಲ್ ಮಾಡಲಿಕ್ಕೆ ಬಂದಿದ್ದಾರೇನು?” ಎಂದು ಟ್ರೋಲಿಗರ ವಿರುದ್ಧ ಗರಂ ಆದರು.
ಇದನ್ನೂ ಓದಿ:ಶಿವರಾಜ್​ಕುಮಾರ್​​ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ; ಅಭಿಮಾನಿಗಳು ಗರಂ
“ಇಲ್ಲಿ ಬಂದವರೆಲ್ಲ ಕೇವಲ ಕಾಂಗ್ರೆಸ್‌ನವರಲ್ಲ, ಬಿಜೆಪಿಯವರೂ, ಪಕ್ಷೇತರರೂ ಇದ್ದಾರೆ. ಇಂದು ನಮ್ಮ ಕರ್ತವ್ಯ ನಾವು ಮಾಡಲಿಕ್ಕೆ ಬಂದಿದ್ದೇವೆ, ಇದಕ್ಕೆ ಜನರು ಉತ್ತಮ ಪ್ರೀತಿ ತೋರಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವ್ಯಕ್ತಿತ್ವವಿದೆ. ಐಡಿಯಾಲಜಿ ಇರುತ್ತೆ. ನಾವು ಯಾರನ್ನೂ ದೂಷಿಸಲು ಇಲ್ಲಿ ಬಂದಿಲ್ಲ. ಟ್ರೋಲ್ ಮಾಡುವ ಅವಶ್ಯಕತೆ ಇಲ್ಲ. ಎಷ್ಟು ದಿನ ಟ್ರೋಲ್ ಮಾಡ್ತೀರಿ? ಮನುಷ್ಯ ಯಶಸ್ವಿ ಆಗಬೇಕಾದ್ರೆ ಮೊದಲು ಹೃದಯ ಮತ್ತು ಮೆದುಳು ಸರಿಯಾಗಿರಬೇಕು. ಮೊದಲು ನಿಮ್ಮ ಹೃದಯವನ್ನು ಕೇಳಿ. ಆನಂತರ ಟ್ರೋಲ್ ಮಾಡಿ” ಎಂದು ಶಿವರಾಜ್​ಕುಮಾರ್​​​ ಗುಡುಗಿದರು.
ಪ್ರಶಾಂತ ಸಂಬರಗಿ ಟ್ವೀಟ್​ ವಿಚಾರಕ್ಕೆ ಶಿವಣ್ಣ ತಿರುಗೇಟು:ಕಾಂಗ್ರೆಸ್​​ ಪರ ಮತಯಾಚನೆ ಮಾಡುತ್ತಿರುವ ಶಿವರಾಜ್​ಕುಮಾರ್​​​ ವಿರುದ್ಧ ಬಿಗ್​ಬಾಸ್​​ ಸ್ಪರ್ಧಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಟ್ವೀಟ್​ ಮಾಡಿದ್ದರು. ‘ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು, ಸೋತ್ರೆ ಏನು, ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ… ಇಲ್ಲ ಅಂದ್ರೆ…! ಬಂತಾ ಪ್ಯಾಕೆಟ್… ಸರಿ ಆಲ್ ರೈಟ್ ಮುಂದೆ ಹೋಗೋಣ’ ಎಂದಿದ್ದರು. ಈ ಹೇಳಿಕೆಗೆ ಶಿವಣ್ಣ ಖಡಕ್​ ಉತ್ತರ ನೀಡಿದ್ದಾರೆ. ಈ ಪ್ರಶ್ನೆ ಕೇಳಿದೊಡನೆ ಶಿವಣ್ಣ “ಹೌದಾ ನಮ್ಮಲ್ಲಿ ದುಡ್ಡು ಇಲ್ವಾ.? ಅಯ್ಯಯೋ ನಮ್ಮ ಹತ್ತಿರ ದುಡ್ಡು ಇಲ್ವಾ. ಆ ಮಾತನ್ನು ಹಿಂದೆ ತೆಗೆದುಕೊಳ್ಳಿ. ನಾನಿಲ್ಲಿ ದುಡ್ಡಿಗಾಗಿ ಬಂದಿಲ್ಲ. ನಾನು ಹೃದಯದಿಂದ ಒಬ್ಬ ಮನುಷ್ಯನಾಗಿ ಪ್ರಚಾರಕ್ಕೆ ಬಂದಿದ್ದೇನೆ. ಪ್ರಚಾರಕ್ಕೆ ಯಾವುದೇ ರೀತಿಯಲ್ಲೂ ಹಣ ಪಡೆದಿಲ್ಲ” ಎಂದರು. ಜಗದೀಶ್ ಶೆಟ್ಟರ್ ಅವರ ಬಗ್ಗೆ ಶಿವರಾಜ್​ಕುಮಾರ್​​​ ಮಾತನಾಡಿ “ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧವಿದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಬರುತ್ತಿದ್ದೆ. ಇಂದು ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇನೆ” ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 16 =
Remember me
