ಹಾಸನ:ಅರಸೀಕೆರೆ ತಾಲೂಕಿನ ಆಲದಹಳ್ಳಿಯಲ್ಲಿ ಶಿವರಾತ್ರಿ ‌ಪ್ರಯುಕ್ತ ವಿಶೇಷ ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಲಾಗಿದೆ. ಈ ಪಂದ್ಯಾವಳಿಯ ವಿಜೇತರಿಗೆ ಟ್ರೋಫಿ ಜತೆಗೆ ಕುರಿಮರಿ ಮತ್ತು ವಿಸ್ಕಿ ಬಾಟಲಿ ಸಿಗುತ್ತೆ! ಅಷ್ಟೇ ಅಲ್ಲ, ಸಮಾಧಾನಕರ ಬಹುಮಾನವಾಗಿ ಕೋಳಿಗಳನ್ನು ಕೊಡಲಾಗುತ್ತೆ.
ಅಂದಹಾಗೆ ಈ ಪಂದ್ಯದ ಹೆಸರೇ ‘ಜೋಡಿಮರಿ ಕ್ರಿಕೆಟ್ ಟೂರ್ನಿ’. ಶಿವರಾತ್ರಿ ಪ್ರಯುಕ್ತ ಮೂರು ದಿನ ಅಂದರೆ ಫೆ.10, 11, 12ರವರೆಗೆ ನಡೆಯಲಿರುವ ಈ ಪಂದ್ಯಾವಳಿಯನ್ನು ಗ್ರಾಮದ ಯುವಕರು ಆಯೋಜಿಸಿದ್ದಾರೆ. ಕಿಕೆಟ್​ ಟೂರ್ನಿಯ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ಜೋಡಿಕುರಿಗಾಗಿ ಕಾದಾಟ ಎಂದೆಲ್ಲ ಕಮೆಂಟ್​ ಬರುತ್ತಿದೆ.
‘ಜೋಡಿ ಮರಿ ಕ್ರಿಕೆಟ್ ಟೂರ್ನಿ’ಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಜತೆಗೆ ಜೋಡಿಕುರಿ ಮತ್ತು 2 ವಿಸ್ಕಿ ಬಾಟಲಿ, ರನ್ನರ್​ಅಫ್​ ತಂಡ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ಒಂದು ಕುರಿ ಜತೆಗೆ ಒಂದು ವಿಸ್ಕಿ ಬಾಟಲಿ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ನಾಲ್ಕು ಕೋಳಿ ಕೊಡಲಾಗುತ್ತೆ. ಆಯಾ ಬಹುಮಾನಗಳ ಕೆಳಗೆ ದಾನಿಗಳ ಹೆಸರನ್ನೂ ಪೋಸ್ಟರ್​ನಲ್ಲಿ ಹಾಕಿಸಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯ ಎದೆಭಾಗಕ್ಕೆ ಬ್ಲೇಡ್ ಹಾಕಿದ ಪತಿ! ಕಾರಣ ಕೇಳಿದ್ರೆ ಸಿಟ್ಟಿಗೇಳ್ತೀರಿ

ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 5 =
Remember me
