ಮಂಗಳೂರು/ಉಡುಪಿ/ಪುತ್ತೂರು:ಸಣ್ಣ ವಯಸ್ಸಿನಲ್ಲಿಯೇ ಸಂ ಪರಿವಾರದ ಒಡನಾಟ, ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹಲವು ಜನಪರ ಹೋರಾಟಗಳಿಗೆ ಭಾಗಿ, ಬಿಜೆಪಿ ಕಾರ್ಯಕರ್ತೆಯಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಹಂತಹಂತವಾಗಿ ವಿಧಾನಪರಿಷತ್​ ಸದಸ್ಯೆ, ಶಾಸಕಿ, ಸಂಸದೆ ಸ್ಥಾನಕ್ಕೇರಿ ಈಗ ಕೇಂದ್ರ ಸಚಿವೆಯಾಗಿದ್ದಾರೆ ಪ್ರಖರ ಹಿಂದುತ್ವವಾದಿ ಶೋಭಾ ಕರಂದ್ಲಾಜೆ.ಅಭಿಮಾನಿಗಳ ವಲಯದಲ್ಲಿ ಆತ್ಮೀಯವಾಗಿ ಶೋಭಕ್ಕ ಎಂದೇ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ, ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅಪರೂಪದ ಗಟ್ಟಿಗಿತ್ತಿ ಮಹಿಳಾ ರಾಜಕಾರಣಿ. ಎರಡೂವರೆ ದಶಕದ ಅವಧಿಯಲ್ಲಿ ಸಂಟನೆ&ಪಕ್ಷದಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದವರು ಎಂಬ ಹೆಗ್ಗಳಿಕೆ ಉಳ್ಳವರು. ಅದರಲ್ಲೂ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಇಂಧನ ಸಚಿವೆಯಾಗಿ ಅವರ ಕಾರ್ಯನಿರ್ವಹಣೆ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.1966ರ ಅ.23ರಂದು ಜನನ. ದ.ಕ. ಜಿಲ್ಲೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕರಂದ್ಲಾಜೆ ಮೂಲ. ದಿ.ಮೋನಪ್ಪ ಗೌಡ& ಪೂವಕ್ಕ ದಂಪತಿಯ ಮೂವರು ಹೆಣ್ಣು ಮತ್ತು ಓರ್ವ ಗಂಡು ಮಗುವಿನ ಪೈಕಿ ಶೋಭಾ ಹಿರಿಯವರು. ಚಾರ್ವಾಕ ಸರ್ಕಾರಿ ಶಾಲೆ, ಭಕ್ತಕೋಡಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭಿಕ ಶಿಕ್ಷಣ, ಪುತ್ತೂರಿನ ಸೇಂಟ್​ ಫಿಲೋಮಿನಾ ಕಾಲೇಜಿನಲ್ಲಿ ಪದವಿ, ಮಂಗಳೂರಿನ ರೋಶನಿ ನಿಲಯದಲ್ಲಿ ಎಂಎಸ್​ಡಬ್ಲು ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿ.ವಿ.ಯಲ್ಲಿ ಸಮಾಜಶಾಸ ಎಂ.ಎ. ಪದವಿ ಪಡೆದರು. ಶಿಕ್ಷಣ ಪೂರೈಸಿದ ಬಳಿಕ ಮಣಿಪಾಲದ ಕೆಎಂಸಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾದ ಅವರು, ಮೆಡಿಕೊ&ಸೋಶಿಯಲ್​ ವರ್ಕರ್​ ಆಗಿದ್ದರು.ಮಗಳು ತನ್ನ ಪರಿಶ್ರಮ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂದ ಪ್ರೇರಣೆಯಿಂದ ಉತ್ತಮ ರಾಜಕೀಯ ಕಾರ್ಯಗಳನ್ನು ಮಾಡಿ ಉನ್ನತ ಸ್ಥಾನಕ್ಕೆ ಏರಿರುವುದು ಸಂತಸ ತಂದಿದೆ. ಒಬ್ಬ ಸಾಮಾನ್ಯ ಕುಟುಂಬದ ಸದಸ್ಯನೂ ಛಲ ಹಾಗೂ ಕಠಿಣ ಪರಿಶ್ರಮದಿಂದ ಮೋದಿ ಸರ್ಕಾರದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂಬುದನ್ನು ಹೇಳಲು ಹೆಮ್ಮೆ ಇದೆ.| ಪೂವಕ್ಕ ಶೋಭಾ ಕರಂದ್ಲಾಜೆ ತಾಯಿ
ಪರಿಸರ ಹೋರಾಟದಿಂದ ರಾಜಕೀಯಕ್ಕೆಕಾಲೇಜು ದಿನಗಳಲ್ಲಿ ಎಬಿವಿಪಿ, ಬಳಿಕ ರಾಷ್ಟ್ರ ಸೇವಿಕಾ ಸಮಿತಿ, ಹಿಂದು ಸೇವಾ ಪ್ರತಿಷ್ಠಾನ ಮುಂತಾದ ಸಂ ಪರಿವಾರದ ಸಂಟನೆಗಳಲ್ಲಿ ಕಾರ್ಯಕರ್ತೆಯಾಗಿ ದುಡಿದರು. ಕುಮಾರಧಾರಾ ನದಿಗೆ ಬೃಹತ್​ ಅಣೆಕಟ್ಟು ಕಟ್ಟುವ ಯೋಜನೆ ವಿರುದ್ಧ ನಡೆಯತ್ತಿದ್ದ ಹೋರಾಟಕ್ಕೆ ಧುಮುಕುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಚುನಾವಣೆ ಸಂದರ್ಭ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. 1997ರಲ್ಲಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಉದ್ಯೋಗ ತೊರೆದು ಪಕ್ಷದ ಪೂರ್ಣಾವಧಿ ಕಾರ್ಯಕರ್ತೆಯಾದರು.
ಎರಡನೇ ಬಾರಿಗೆ ಸಂಸತ್​ ಪ್ರವೇಶ2013ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಕೆಜೆಪಿಯಿಂದ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಮತ್ತೆ ಬಿಜೆಪಿಗೆ ಮರಳಿದ ಅವರು 2014ರ ಚುನಾವಣೆಯಲ್ಲಿ ಉಡುಪಿ&ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ್​ ಹೆಗ್ಡೆ ಎದುರು 1.81 ಲಕ್ಷ ಮತಗಳ ಅಂತರದ ಜಯ ಸಾಧಿಸಿ ಸಂಸತ್​ ಪ್ರವೇಶಿಸಿದರು. 2014ರಲ್ಲಿ ಕೇಂದ್ರ ಮಹಿಳಾ ಸಬಲೀಕರಣ ಸಮಿತಿ, 2015ರಲ್ಲಿ ಕೇಂದ್ರ ರಣಾ ಸ್ಥಾಯಿ ಸಮಿತಿ ಹಾಗೂ 2016ರಲ್ಲಿ ಕೃಷಿ ಸಚಿವಾಲಯ ಸಲಹಾ ಸಮಿತಿಗಳಿಗೆ ಸದಸ್ಯೆಯಾಗಿ ಆಯ್ಕೆಯಾದರು. 2019ರ ಚುನಾವಣೆಯಲ್ಲಿ ಪ್ರಮೋದ್​ ಮಧ್ವರಾಜ್​ ಅವರನ್ನು 3.49 ಲಕ್ಷ ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿ ಜಯಭೇರಿ ಬಾರಿಸಿದರು.
ದೇಶದ ಗೌರವ ಪಕ್ಷದ ವರ್ಚಸ್ಸು ಹೆಚ್ಚಿಸುವೆ…
1 ಸಚಿವ ಸ್ಥಾನ ಸಿಕ್ಕಿರುವುದು ನಿರೀತವೋ, ಅನಿರೀತವೋ?ಎಲ್ಲವೂ ಅನಿರೀತ. ದೊಡ್ಡ ದೇಶದಲ್ಲಿ, ಅತಿ ಹೆಚ್ಚು ಸ್ಥಾನ ಪಡೆದಿರುವಾಗ ಅದರಲ್ಲೂ ಹಿರಿಯರು ಸಾಕಷ್ಟು ಸಂಖ್ಯೆಯಲ್ಲಿರುವಾಗ ನಿರೀೆ ಮಾಡಲಿಕ್ಕಾಗುವುದಿಲ್ಲ. ಎರಡನೇ ಬಾರಿಗೆ ಗೆದ್ದಿರುವ ನನಗೆ ಈಗ ಅವಕಾಶ ಕೊಟ್ಟಿದ್ದಾರೆ. ದಣ ಭಾರತದಲ್ಲಿ ಮಹಿಳೆಗೆ ಸ್ಥಾನ ಕಲ್ಪಿಸುವುದಕ್ಕಾಗೋ ಅಥವಾ ಬೇರೆ ಬೇರೆ ಕಾರಣಕ್ಕೆ ನೀಡಿದ್ದಾರೆ.2 ನೀವು ಸ್ಥಾನ ಪಡೆಯಲು ಯಾವ ಅಂಶ ಕಾರಣವಾಗಿರಬಹುದು?ಆರ್​ಎಸ್​ಎಸ್​ ಒಡನಾಟ, ಆಕ್ರಮಣಕಾರಿ ಶೈಲಿ ಇವೆಲ್ಲ ಕಾರಣ ಆಗಿರಲಿಕ್ಕಿಲ್ಲ. ನಾನೊಬ್ಬ ಪ್ರೌಡ್​ ಹಿಂದು.3 ಸದಾನಂದ ಗೌಡರಿಗೆ ಪರ್ಯಾಯವಾಗಿ ನಿಮಗೆ ಅವಕಾಶ ನೀಡಲಾಯಿತೆಂದು ಭಾವಿಸಬಹುದೇ?ಖಂಡಿತ ಇಲ್ಲ. ನಾನು ಸದಾನಂದ ಗೌಡರಿಗೆ ಪರ್ಯಾಯ ಅಲ್ಲ. ಅವರು ಹಿರಿಯ ನಾಯಕರು ಮತ್ತು ಏಳು ವರ್ಷಗಳಿಂದ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನನ್ನ ಕೆಲಸ, ಶ್ರಮ ನೋಡಿ ಜವಾಬ್ದಾರಿ ವಹಿಸಿದ್ದಾರೆ ಅಂದುಕೊಳ್ಳುತ್ತೇನೆ.4 ಸಂಸದರಾಗಿ ಏಳು ವರ್ಷದ ಬಳಿಕ ಅವಕಾಶ ಸಿಕ್ಕಿದೆ, ಯಾವ ಕಲ್ಪನೆ ಇದೆ?ಅಂದು ನಾನು ಸಂಸತ್ತಿಗೆ ಹೊಸಬಳಾಗಿದ್ದೆ, ದೆಹಲಿ ವಾತಾವರಣ ಕೂಡ ಹೊಸತಾಗಿತ್ತು. ಆಡಳಿತ ಹೇಗೆ ನಡೆಯುತ್ತದೆ ಎಂಬುದೂ ಹೊಸತು. ಏಳು ವರ್ಷಗಳಲ್ಲಿ ಸಾಕಷ್ಟು ಅನುಭವ ಆಗಿದೆ. ಅನೇಕರ ಪರಿಚಯ ಆಗಿದೆ. ಅದರ ಲಾಭ ಆಗಬಹುದು. ದೇಶದ ಗೌರವ, ಪದ ವರ್ಚಸ್ಸು ಹೆಚ್ಚಿಸುವಂತಹ ಕೆಲಸ ಮಾಡುತ್ತೇನೆ.5 ನಿಮಗೆ ಅವಕಾಶ ಸಿಗುವಲ್ಲಿ ಬಿ.ಎಲ್​.ಸಂತೋಷ್​ ಪಾತ್ರ ಇತ್ತೇ?ಬಿ.ಎಲ್​.ಸಂತೋಷ್​ ಕೂಡ ಪದ ಭಾಗವಾಗಿದ್ದಾರೆ. ಪ್ರಧಾನಿ ಮೋದಿ, ಅಮಿತ್​ ಷಾ, ಜೆಪಿ ನಡ್ಡಾ ಹಾಗೂ ಸಂತೋಷ್​ ಸೇರಿ ಈ ಅವಕಾಶವನ್ನು ಮಾಡಿ ಕೊಟ್ಟಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
