ಬೆಂಗಳೂರು:ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಸೇರಿದಂತೆ ಹಲವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್​, ಸ್ಮೃತಿ ಇರಾನಿ, ಮನೇಕಾ ಗಾಂಧಿ, ಶೆಫಾಲಿ ವೈದ್ಯ, ದೇಬಶ್ರೀ, ಮೀನಾಕ್ಷಿ ಲೆಖಿ, ವನತಿ, ಡಿಎಂಕೆ ಕನಿಮೋಳಿ ಸೇರಿದಂತೆ ಹಲವರಿಗೆ ಉಡುಪಿ ಸೀರೆಗಳನ್ನು ಕರಂದ್ಲಾಜೆ ಗಿಫ್ಟ್​ ಕೊಟ್ಟಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯವಾಗಿ ಉಡುಪಿ ಸೀರೆಗಳನ್ನು ಖರೀದಿಸಿದ ಸಂಸದೆ, ಮಹಿಳಾ ನಾಯಕಿಯರಿಗೆ ಉಡುಗೊರೆ ಕೊಟ್ಟು ಶುಭಕೋರಿದ್ದಾರೆ. ಆ ಮೂಲಕ ಉಡುಪಿ ಕೈಮಗ್ಗವನ್ನು ರಾಷ್ಟ್ರಮಟ್ಟದ ನಾಯಕಿಯರಿಗೂ ಮತ್ತೊಮ್ಮೆ ಪರಿಚಯಿಸುವ ಯತ್ನ ಮಾಡಿದ್ದಾರೆ. ಇನ್ನು ಸಂಸದೆ ಕೊಟ್ಟ ಸೀರೆಗೆ ಫಿದಾ ಆಗಿರುವ ಶೆಫಾಲಿ ವೈದ್ಯ ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ದೀಪಾವಳಿ ಹಬ್ಬಕ್ಕೆ ಸರ್ಪ್ರೈಸ್​ ಗಿಫ್ಟ್​ ಸಿಕ್ಕಿದೆ. ಉಡುಪಿ ಕೈಮಗ್ಗದಿಂದ ಸಿದ್ಧವಾದ ಈ ಸೀರೆ ಚೆನ್ನಾಗಿದೆ. ಸ್ಥಳೀಯ ನೇಯ್ಗೆ ಮತ್ತು ಕರಕುಶಲ ವಸ್ತುಗಳನ್ನು ಬೆಂಬಲಿಸುವ ಮೂಲಕ ದೀಪಾವಳಿ ಆಚರಿಸುತ್ತಿರುವುದು ಗಮನಿಸಬೇಕಾದ ಸಂಗತಿ. ಶೋಭಾ ಅವರಿಗೆ ಧನ್ಯವಾದಗಳು ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿರುವ ಶೆಫಾಲಿ ವೈದ್ಯ, ಸೀರೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಕರಂದ್ಲಾಜೆ, ನಾನು ಕೊಟ್ಟ ಉಡುಪಿ ಸೀರೆಯನ್ನು ನಿಮಗೆ ಇಷ್ಟವಾಗಿದ್ದಕ್ಕೆ ಸಂತೋಷವಾಗಿದೆ! ಉಡುಪಿ ಕೃಷ್ಣ ದೇವರಿಗೂ ಶುಕ್ರವಾರದಂದು ಉಡುಪಿ ಸೀರೆ ಧರಿಸಿ ಲಕ್ಷ್ಮೀ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೇವೆ. ಈ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಶ್ರೀ ಈಶಪ್ರಿಯ ತೀರ್ಥರು ಮಾತನಾಡಿದ್ದಾರೆ. ನಮ್ಮ ಕುಶಲಕರ್ಮಿಗಳಿಗೆ ಬೆಂಬಲ ನೀಡೋಣ ಎನ್ನುವ ಮೂಲಕ ಇದೆಲ್ಲವೂ ಸ್ಥಳೀಯ ಕೈಮಗ್ಗ ಉತ್ತೇಜನದ ಯತ್ನ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ದೀಪಾವಳಿ ಹಬ್ಬದ ಮುನ್ನಾದಿನ ಅಂದರೆ ನ.13ರಂದು ಸೀರೆ ಜತೆಗೆ ಪತ್ರವನ್ನು ಕಳಿಸಿರುವ ಶೋಭಾ, ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಆತ್ಮ ನಿರ್ಭರ ಭಾರತ’ವನ್ನು ಬೆಂಬಲಿಸುವ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವಾಗಿ ಮತ್ತು ಗ್ರಾಮೀಣರ ಆರ್ಥಿಕ ಉತ್ತೇಜನಕ್ಕೆ ಪ್ರೋತ್ಸಾಹ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
https://twitter.com/ShobhaBJP/status/1328664816282521606?s=20
ಇದೀಗ ಮತ್ತೆ ಉಡುಪಿ ಸೀರೆಗೆ ಡಿಮಾಂಡ್​ ಬಂದಿದ್ದು, ಸಾಂಪ್ರದಾಯಿಕ ಹಬ್ಬದಲ್ಲೂ ಈ ಸೀರೆಯನ್ನುಟ್ಟು ಸಂಭ್ರಮಿಸಲು ಎಲ್ಲ ವಯೋಮಾನದ ನಾರಿಯರೂ ಸೈ ಎನ್ನುತ್ತಿದ್ದಾರೆ. ಇನ್ನು ಗೆಳತಿ, ಕುಟುಂಬದ ಮಹಿಳೆಯರಿಗೆ ಗಿಫ್ಟ್​ ಕೊಡಬೇಕು ಎಂದಾದರೆ ಉಡುಪಿ ಸೀರೆಗೂ ಮನ್ನಣೆ ಸಿಗುತ್ತಿರುವುದು ಆಶಾದಾಯಕ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
