ಬೆಂಗಳೂರು:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಹೊರ ತಂದಿರುವ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಭರವಸೆ ನೀಡಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೆಂಡಾಮಂಡಲವಾಗಿದ್ದಾರೆ. ಈ ಭರವಸೆ ಓದಿ ನನ್ನ ರಕ್ತ ಕುದಿಯುತ್ತಿದೆ. ನಾನೂ ಬಜರಂಗದಳ ಕಾರ್ಯಕರ್ತೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಸೆಡ್ಡು ಹೊಡೆದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ದೇಶದ್ರೋಹಿ ಪಿಎಫ್ ಐ ಸಂಘಟನೆಯನ್ನು ದೇಶಭಕ್ತ ಬಜರಂಗದಳಕ್ಕೆ ಹೋಲಿಸಿರುವುದು ಸರಿಯಲ್ಲ. ಉಗ್ರ ಕೃತ್ಯ ಎಸಗುವವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಸೋದರರಾಗಿದ್ದು, ದೇಶದ ಹಿಂದು ಯುವಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುಚ ಬಜರಂಗದಳ ವಿರೋಧಿ ಎನಿಸಿದೆ ಎಂದು ಚಾಟಿ ಬೀಸಿದರು.
ಇದನ್ನೂ ಓದಿ:ಬಿಜೆಪಿ ಪ್ರಣಾಳಿಕೆ ಕರ್ನಾಟಕವನ್ನು ನಂ.1 ಮಾಡುವ ನೀಲನಕ್ಷೆಯಂತಿದೆ: ಪ್ರಧಾನಿ ಮೋದಿ ಮೆಚ್ಚುಗೆ
ಚುನಾವಣೆ ಪ್ರಚಾರ ಸಭೆಗಳಲ್ಲಿ ಬಜರಂಗದಳ ನಿಷೇಧದ‌ ಬಗ್ಗೆ ತಾಕತ್ತಿದ್ದರೆ ಮಾತನಾಡಿ. ಮುಸ್ಲಿಮರ ವೋಟುಗಳಿಂದ ಮಾತ್ರ ಗೆದ್ದು ಬನ್ನಿರಿ ಎಂದು ಶೋಭಾ ಕರಂದ್ಲಾಜೆ ಸವಾಲೆಸೆದರು.
ರಾಹುಲ್ ಗಾಂಧಿಯವರ ಮುತ್ತಜ್ಜ, ಅಜ್ಜನ ಕಾಲದಲ್ಲಿ ಆರ್ ಎಸ್ ಎಸ್ ನಿಷೇಧಿಸಲಾಯಿತು. ನಂತರ ಏನಾಯಿತು ಎಂಬುದು ದೇಶಕ್ಕೆ ಗೊತ್ತಿದೆ. ಆರ್ ಎಸ್‌ಎಸ್ ನ ಒಂದು ಭಾಗ ಬಿಜೆಪಿ, ಮತ್ತೊಂದು ಭಾಗದಲ್ಲಿ ಎಬಿವಿಪಿ, ಬಜರಂಗದಳ, ವನವಾಸಿ ಕಲ್ಯಾಣ ಇನ್ನಿತರ ಸಂಘಟನೆಗಳಿವೆ. ಬಿಜೆಪಿ ಹಿಂದಿನಂತೆ ಸಣ್ಣ ಸಂಘಟನೆಯಲ್ಲ. ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ಎಲ್ಲರೂ ಆಧರಿಸಿ ಗೌರವಿಸುವ ವಿಶ್ವ ನಾಯಕ ನರೇಂದ್ರ ಮೋದಿಯವರು ಇರುವ ಪಕ್ಷವಾಗಿದ್ದು, ಮುಸ್ಲಿಮರನ್ನು ವಿಪರೀತ ಓಲೈಸಿಯೇ ಕಾಂಗ್ರೆಸ್ ವಿನಾಶದ ಅಂಚಿಗೆ ಹೋಗಿದೆ ಎಂದು ಶೋಭಾ ಕರಂದ್ಲಾಜೆ ಕುಟುಕಿದರು.
ಇದನ್ನೂ ಓದಿ:ತನ್ನ ಜತೆ ಮಲಗಿಕೊಳ್ಳಲು ಒತ್ತಾಯ ಮಾಡಿದ ಮಾಜಿ ಡಿವೈಎಸ್ಪಿ ವಿರುದ್ಧ ದೂರು ದಾಖಲಿಸಿದ ನಟಿ!
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಚಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್​ ಇಂದು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಹೇಳಿದೆ.
ಮದ್ಯಪ್ರಿಯರ ಗಮನಕ್ಕೆ.. ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಈ ಮೂರು ದಿನ ಮದ್ಯ ಮಾರಾಟ ಬಂದ್​

ಮಲ್ಲಸಂದ್ರದಲ್ಲಿ ದಾಸರಹಳ್ಳಿ ಜಿ. ಧನಂಜಯಗೌಡ ಬಿರುಸಿನ ಪ್ರಚಾರ

ಹಾಟ್​ ಫೋಟೋಗಳನ್ನು ಹರಿಬಿಟ್ಟು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ಖುಷ್ಬೂ ಪುತ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
