ಬೆಂಗಳೂರು: ಗಿರಿಜನ ಸಮುದಾಯದ ಜಸ್ಕೌರ್ ಮೀನಾ ಜತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್​ನ ಸಂಸದರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಲೋಕಸಭಾ ಸ್ಪೀಕರ್​ಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಲಿಖಿತ ದೂರು ಸಲ್ಲಿಸಿದ್ದಾರೆ.
ಸಂಸತ್​ನ ಶಿಸ್ತು, ನಿಯಮಾವಳಿಗೆ ವಿರುದ್ಧವಾಗಿ ಕಾಂಗ್ರೆಸ್ ಸಂಸದರು ನಡೆದುಕೊಂಡಿದ್ದಾರೆ. ಈ ಹಿಂದೆಯೂ ಪ್ರತಿಪಕ್ಷದ ಮಹಿಳಾ ಸಂಸದರೊಬ್ಬರು ಪರಿಶಿಷ್ಟ ಜಾತಿಯ ಬಿಜೆಪಿ ಎಂಪಿಯನ್ನು ತಳ್ಳಾಡಿ ಪ್ರಚೋದಿಸಲು ಪ್ರಯತ್ನಿಸಿದ್ದರು ಎಂದು ಕರಂದ್ಲಾಜೆ ದೂರಿನಲ್ಲಿ ಸ್ಪೀಕರ್ ಗಮನ ಸೆಳೆದಿದ್ದಾರೆ.
ನ್ಯಾಯೋಚಿತವಲ್ಲದ ಈ ನಡೆಗಳನ್ನು ಖಂಡಿಸುತ್ತಲೇ ಬಂದಿರುವೆ. ಆದರೂ, ಕಲಾಪಗಳಲ್ಲಿ ಚರ್ಚೆ ಆಶಯಕ್ಕೆ ಪದೇಪದೆ ಭಂಗ ಉಂಟು ಮಾಡುವುದಲ್ಲದೆ, ಅನುಚಿತವಾಗಿ ವರ್ತಿಸುತ್ತಿರುವ ಇಂತಹ ಸದಸ್ಯರನ್ನು ಲೋಕಸಭೆಯಿಂದ ಕೂಡಲೇ ಉಚ್ಚಾಟಿಸಬೇಕು ಎಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
