ಉಡುಪಿ:ಗಾರ್ಮೆಂಟ್ಸ್ ಯುವತಿ ಮೇಲೆ ಆಸಿಡ್ ದಾಳಿಯನ್ನು ಖಂಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸಿಡ್ ನಾಗನಿಗೆ ಅತ್ಯಾಚಾರ ಆರೋಪಿಗೆ ಆಗುವ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಮಾನಸಿಕತೆ ಸಮಾಜದಲ್ಲಿ ನಿರ್ಮಾಣ ಆಗಬಾರದು. ಇದಕ್ಕಾಗಿ ಇಂತಹ ಕಟುಕರಿಗೆ ಘೋರ ಶಿಕ್ಷೆಯನ್ನೇ ವಿಧಿಸಬೇಕು ಎಂದು ಹೇಳಿದ್ದಾರೆ.
ಆಸಿಡ್ ದಾಳಿಗೊಳಗಾದ ಯುವತಿಯ ಜೀವನವೇ ಹಾಳಾಗಿದೆ. ಆಕೆ ಬದುಕಿದ್ದು ಸತ್ತಂತೆ ಇರುವಂತಹ ಸ್ಥಿತಿಗೆ ದೂಡಿದ ಅವನನ್ನು ಕೊಲೆಗೆ ವಿಧಿಸುವ ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ದುಷ್ಟರಿಗೆ ಸಮಾಜದಲ್ಲಿ ಭಯ ಬರಿಸಬೇಕು. ನಮ್ಮ ಸಮಾಜದಲ್ಲಿ ಇಂತವರು ಇದ್ದಾರಾ ಅಂತ ಆತಂಕ ಆಗುತ್ತಿದೆ.ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ, ಗೃಹ ಸಚಿವರಿಗೆ ಈಗಾಗಲೇ ಈ ಒತ್ತಾಯ ಮಾಡಿದ್ದೇನೆ. ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೆಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಯುವತಿಗೆ ಆ್ಯಸಿಡ್​ ಎರಚಿದ ಬಳಿಕ ಸಾಯಲು ಹೋದವ ಮನಸ್ಸು ಬದಲಿಸಿ ಆಶ್ರಮಕ್ಕೆ ಹೋಗಿದ್ದ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 12 =
Remember me
