ಬೆಂಗಳೂರು:ರಾಜ್ಯದಲ್ಲಿ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.10 ಹೆಚ್ಚಿಸಲಾಗುತ್ತಿದೆ. ಇದರಿಂದ 650 ಮಿ.ಲೀ ಬಿಯರ್ ಬಾಟಲ್ ಮೇಲೆ 8-10 ರೂ. ದರ ಹೆಚ್ಚಲಿದೆ. 2023ರ ಜುಲೈನಲ್ಲಿ ಇಂಡಿಯನ್ ಮೇಡ್ ಲಿಕ್ಕರ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಲಾಗಿತ್ತು.
2019-20ರಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹಾಲಿ ಇರುವ ಶೇ.150ರಿಂದ ಶೇ.175ಕ್ಕೆ ಹೆಚ್ಚಿಸಲಾಗಿತ್ತು. ಡ್ರಾಟ್ ಬಿಯರ್ ಮೇಲೆ ಶೇ.115ರಿಂದ ಶೇ.150ಕ್ಕೆ, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲೆ 5 ರೂ.ನಿಂದ 10 ರೂ. ಏರಿಸಲಾಯಿತು. ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀ.ಗೆ 12.50 ರೂ.ನಿಂದ 25 ರೂ.ಗೆ ಏರಿಸಲಾಗಿತ್ತು. ಐಎಂಎಲ್ ಮೇಲೆ ಅಬಕಾರಿ ಸುಂಕವನ್ನು ಶೇ.122ರಿಂದ ಶೇ.150ಕ್ಕೆ ಏರಿಸಲಾಗಿತ್ತು. 2020-21ರ ಬಜೆಟ್‌ನಲ್ಲಿ ಮದ್ಯದ ಮೇಲೆ ಶೇ.6 ಹೆಚ್ಚುವರಿ ಸುಂಕ ವಿಧಿಸಿತ್ತು. ಆದರೆ, ಕರೊನಾ ನಿಯಂತ್ರಿಸಲು ಲಾಕ್‌ಡೌನ್ ಹೇರಿದ್ದ ಪರಿಣಾಮ ಇದು ಜಾರಿಗೆ ಬಂದಿರಲಿಲ್ಲ. ಬಳಿಕ, 2021ರ ಮೇನಲ್ಲಿ ಬಿಯರ್ ಮತ್ತು ವೈನ್ ಹೊರತುಪಡಿಸಿ ಐಎಂಎಲ್ ಮೇಲೆ ಶೇ.17 ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಈ ಕ್ರಮದಿಂದ ಪ್ರತಿ ಬಲ್ಕ್ ಲೀಟರ್‌ಗೆ 153 ರೂ.ನಿಂದ 179 ರೂ.ವರೆಗೆ ಏರಿಕೆಯಾಯಿತು. ಹೀಗಾಗಿ, 2021ರ ಮಾ.8ರಂದು ಮಂಡನೆಯಾದ ಬಜೆಟ್‌ನಲ್ಲಿ ಮದ್ಯ ದರ ಹೇರಿಕೆ ಮಾಡಿರಲಿಲ್ಲ.
39 ಸಾವಿರ ಕೋಟಿ ರೂ.ಗುರಿ:ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಪ್ರತಿ ವರ್ಷ ಇಲಾಖೆಗೆ ಹೊಸ ಆದಾಯ ಸಂಗ್ರಹ ಗುರಿ ನೀಡುತ್ತಾ ಬರುತ್ತಿದೆ. ಈ ಬಾರಿ ಬಜೆಟ್‌ನಲ್ಲಿ 39 ಸಾವಿರ ಕೋಟಿ ರೂ.ರಾಜಸ್ವ ಸಂಗ್ರಹ ಗುರಿ ನೀಡುವ ಸಾಧ್ಯತೆ ಇದೆ. 2023-24ರಲ್ಲಿ 36 ಸಾವಿರ ಕೋಟಿ ರೂ.ಗುರಿ ನೀಡಲಾಗಿತ್ತು. ಆರ್ಥಿಕ ವರ್ಷ ಮುಗಿಯಲು 2 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ್ದ ಟಾರ್ಗೆಟ್ ಅನ್ನು ಇಲಾಖೆ ಮುಟ್ಟಲಿದೆ. ಪ್ರತಿ ವರ್ಷ ಹಳೆಯ ಗುರಿಗೆ ಹೆಚ್ಚುವರಿ 2,000-3,000 ಕೋಟಿ ರೂ. ಹೆಚ್ಚಿಸಿ ಹೊಸ ಟಾರ್ಗೆಟ್ ನೀಡಲಾಗುತ್ತಿದೆ. 2014-15ರಲ್ಲಿ 14,430 ಕೋಟಿ ರೂ., 2015-16ರಲ್ಲಿ 15,200 ಕೋಟಿ ರೂ., 2016-17ರಲ್ಲಿ 16,510 ಕೋಟಿ ರೂ., 2017-18ರಲ್ಲಿ 18,050 ಕೋಟಿ ರೂ., 2018-19ರಲ್ಲಿ 19,750 ಕೋಟಿ ರೂ., 2019-20ರಲ್ಲಿ 20,950 ಕೋಟಿ ರೂ., 2020-21ರಲ್ಲಿ 22,700 ಕೋಟಿ ರೂ. ಹಾಗೂ 2021-22ರಲ್ಲಿ 24,580 ಕೋಟಿ ರೂ., 2022-23 ಸಾಲಿನಲ್ಲಿ 32 ಸಾವಿರ ಕೋಟಿ ರೂ.ಆದಾಯ ಸಂಗ್ರಹ ಗುರಿ ನೀಡಲಾಗಿತ್ತು.
12,614 ಮದ್ಯದಂಗಡಿರಾಜ್ಯದಲ್ಲಿ ಸದ್ಯ 12,614 ಮದ್ಯದಂಗಡಿಗಳಿವೆ. ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್‌ಶಾಪ್ (ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ (ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿಗೃಹ, 68 ಮಿಲಿಟರಿ ಕ್ಯಾಂಟೀನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್‌ಐಎಲ್ (ಸಿಎಲ್11ಸಿ), 745 ಆರ್‌ವಿಬಿ ಸೇರಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − two =
Remember me
