ಕೊಡಗು: ಪ್ರವಾಸಕ್ಕೆಂದು ಬಂದು, ಕೊಡಗಿನ ರಸ್ತೆ ಬದಿಗಳಲ್ಲಿ ಕಸ ಎಸೆದು ಹೋಗಿದ್ದ ತರುಣರು, ಮೈಸೂರಿನಿಂದ ಮರಳಿ ಬಂದು ಕಸ ತೆಗೆದುಕೊಂಡು ಹೋದ ವಿಶೇಷ ಪ್ರಕರಣ ಶುಕ್ರವಾರ ನಡೆದಿದೆ.ಹಾಗೆ ತರುಣರು ಬಿಸಾಕಿ ಹೋಗಿ ಕಸವನ್ನು ಅವರೇ ಬಂದು ವಾಪಸ್​ ತೆಗೆದುಕೊಂಡು ಹೋಗುವಂತೆ ಮಾಡಿದ್ದು ಕಡಗದಾಳು ಗ್ರಾಪಂ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ.
ಅಜೀಜ್​ ಖಾನ್​ ಮತ್ತು ಸಂಗಡಿಗರು ಕೊಡಗು ಪ್ರವಾಸಕ್ಕೆಂದು ಮೈಸೂರಿನಿಂದ ಆಗಮಿಸಿದ್ದರು. ಮಡಿಕೇರಿಯಲ್ಲಿ ಡೊಮಿನ್ಸ್ ಪಿಜ್ಜಾ ಖರೀದಿಸಿದ್ದರು. ಕಡಗದಾಳಿನಲ್ಲಿ ರಸ್ತೆ ಬದಿ ಖಾಲಿ ಪೊಟ್ಟಣ ಮತ್ತು ಬ್ಯಾಗ್ ಎಸೆದು ಹೋಗಿದ್ದರು. ಈ ಮಾರ್ಗದಲ್ಲಿ ತೆರಳುತ್ತಿದ್ದ ತಿಮ್ಮಯ್ಯ, ಬ್ಯಾಗ್ ಪರಿಶೀಲಿಸಿದ್ದಾಗ ಬಿಲ್ ಪತ್ತೆಯಾಗಿದೆ. ಕೆ.ಕೆ.ಅಕ್ಷತಾ ಹೆಸರಿನಲ್ಲಿ ಬಿಲ್ ಮಾಡಿದ್ದು, ಚಿರಾಗ್ ಎಂಬುವವರ ಮೊಬೈಲ್ ಸಂಖ್ಯೆ ನೀಡಲಾಗಿತ್ತು. ರಸ್ತೆ ಬದಿ ಕಸ ಎಸೆದಿರುವುದನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಯಿತು. ಅಲ್ಲದೇ, ಬಿಲ್‌ನಲ್ಲಿದ್ದ ಮೊಬೈಲ್ ಸಂಖ್ಯೆ ನೀಡುವುದರೊಂದಿಗೆ ದೂರವಾಣಿ ಕರೆ ಮಾಡುವಂತೆ ಕೊಡಗಿನ ಜನರಿಗೆ ಕರೆ ನೀಡಿದರು.
ತಿಮ್ಮಯ್ಯ ಕರೆ ಮಾಡಿದ್ದ ಸಂದರ್ಭದಲ್ಲಿ ತಪ್ಪಾಯಿತೆಂದು ಕ್ಷಮೆಯಾಚಿಸಿದ ತರುಣರು, ಕೊಡಗಿನಿಂದ ತುಂಬಾ ದೂರದಲ್ಲಿದ್ದೇವೆ. ಇನ್ಮುಂದೆ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ತಿಮ್ಮಯ್ಯ, ಮರಳಿ ಬಂದು ಕಸ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದರು. ಇಲ್ಲದಿದ್ದಲ್ಲಿ ಮೈಸೂರು ಪೊಲೀಸ್ ವರಿಷ್ಠಾಧಿಕಾರಿಗೆ ನಿಮ್ಮ ವಿರುದ್ಧ ದೂರು ನೀಡುವುದರ ಮೂಲಕ ದೊಡ್ಡ ಮೊತ್ತದ ದಂಡ ವಿಧಿಸುವ ಎಚ್ಚರಿಕೆ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ತರುಣರಿಗೆ ದೂರವಾಣಿ ಕರೆ ಮಾಡಿದರು. ಸ್ವಲ್ಪ ಸಮಯ ತಮ್ಮ ಮೊಬೈಲ್ ಸ್ವಿಚ್ ಆಫ್ ಕೂಡ ಮಾಡಿದ್ದರು.
ಮೈಸೂರು ಎಸ್ಪಿಗೆ ದೂರು ನೀಡುವ ಎಚ್ಚರಿಕೆ ನೀಡಿದ್ದರಿಂದ ತರುಣರು ಮರಳಿ ಕೊಡಗಿಗೆ ಆಗಮಿಸಿದರು. ಖಾಲಿ ಪೊಟ್ಟಣ, ಚೀಲದ ಮೇಲೆ ಮೊಬೈಲ್ ಸಂಖ್ಯೆ ಬರೆಸಲಾಯಿತು. ನಿಮ್ಮ ಮನೆಗೆ ಕಸ ತೆಗೆದುಕೊಂಡು ಹೋಗಬೇಕು. ರಸ್ತೆಯಲ್ಲಿ ಎಸೆದರೆ ಜನ ಮತ್ತೆ ನಿಮಗೆ ಕರೆ ಮಾಡುತ್ತಾರೆ. ಅದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ ಬರೆಸಲಾಗುತ್ತಿದೆ ಎಂದು ಮಾದೇಟಿರ ತಿಮ್ಮಯ್ಯ ಹೇಳಿದರು. ತರುಣರ ಕೋರಿಕೆಯಂತೆ ಅವರ ಮುಖ ಕಾಣದಂತೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ನಾಯಕರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ ಕೈವಾಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + nine =
Remember me
