ಬೆಂಗಳೂರು:ಅಲ್ಪಾವಧಿ ಬೆಳೆ ಸಾಲ ಮನ್ನಾದಂತೆ ಟ್ರ್ಯಾಕ್ಟರ್​ ಸಾಲವೂ ಮನ್ನಾ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಉದ್ದೇಶಪೂರ್ವಕವಾಗಿ ಸಾಲ ಮರು ಪಾವತಿಸದ ದೊಡ್ಡ ರೈತರಿಗೆ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಕಾಸ್ಕಾರ್ಡ್) ಬ್ಯಾಂಕ್ ಶಾಕ್ ನೀಡಿದ್ದು, ಸುಸ್ತಿ ಬಾಕಿ ವಸೂಲಿಗಾಗಿ ಟ್ರ್ಯಾಕ್ಟರ್​ ಜಪ್ತಿಗೆ ಮುಂದಾಗಿದೆ.
ಬರ, ನೆರೆ ನೆಪವೊಡ್ಡಿ ಶ್ರೀಮಂತ ರೈತರೂ ಸಾಲ ಮರು ಪಾವತಿಸದಿದ್ದರೆ ಸಾರ್ವಜನಿಕರ ತೆರಿಗೆ ಹಣವನ್ನೆಲ್ಲ ತಿರುಗಿ ಬಾರದ (ಎನ್ಪಿಎ) ಸಾಲಕ್ಕೆ ಬಳಸಬೇಕಾಗುತ್ತದೆ. ಬೊಕ್ಕಸವೇನೂ ಧರ್ಮಛತ್ರವಲ್ಲ, ಕಟ್ಟುನಿಟ್ಟಾಗಿ ವಸೂಲಿ ಮಾಡಿ ಎಂದು ಹಣಕಾಸು ಇಲಾಖೆ ಸಂದೇಶ ರವಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಸಕ್ತ ಆರ್ಥಿಕ ವರ್ಷಕ್ಕೆ ಸುಸ್ತಿ ಬಾಕಿ ಸೇರಿ 980 ಕೋಟಿ ರೂ.ಗಳ ವಸೂಲಿ ಗುರಿಯಿತ್ತು. ಈ ಪೈಕಿ ಜನವರಿ 7ರವರೆಗೆ ಕೇವಲ 107 ಕೋಟಿ ರೂ. ವಸೂಲಿಯಾಗಿದೆ. ಸುಸ್ತಿ ಬಾಕಿದಾರರಲ್ಲಿ ಮೊದಲು ದೊಡ್ಡ ರೈತರ ಟ್ರಾ್ಯಕ್ಟರ್​ಗಳ ಜಪ್ತಿಗೆ ಇಳಿದಿದ್ದು, ಒಂದು ವಾರದ ಅಂತರದಲ್ಲಿ ಒಂದು ಕೋಟಿ ರೂ. ಸುಸ್ತಿ ಬಾಕಿ ಪಾವತಿಯಾಗಿದೆ ಎಂದು ಕಾಸ್ಕಾರ್ಡ್ ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.
ಪ್ರಯೋಜನ ಪಡೆಯಲಿಲ್ಲ: ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸುಸ್ತಿ ಸಾಲ ಹಾಗೂ ಬಡ್ಡಿಯಲ್ಲಿ ಅಸಲು ಹಣವನ್ನು ಒಂದೇ ಬಾರಿ ಚುಕ್ತಾ ಮಾಡಿದವರಿಗೆ ಬಡ್ಡಿ ಮನ್ನಾ ಅವಕಾಶ ನೀಡಲಾಗಿತ್ತು. 2015 ರಿಂದ 2017ರ ಜೂನ್​ವರೆಗೆ ಇದರ ಪ್ರಯೋಜನ ಪಡೆದ ರೈತರು 86 ಕೋಟಿ ರೂ. ಮರು ಪಾವತಿಸಿದರು. ನಂತರ ಬಂದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬರಗಾಲವೆಂದು ದೀರ್ಘಾವಧಿ ಸಾಲ ವಸೂಲಿಗೆ ನಿರ್ಬಂಧ ವಿಧಿಸಿತು. ಹೀಗಾಗಿ ಸಾಲ ಮರುಪಾವತಿಗೆ ಶ್ರೀಮಂತ ರೈತರು ಉದ್ದೇಶ ಪೂರ್ವಕವಾಗಿ ಹಿಂದೇಟು ಹೊಡೆದಿದ್ದರು. ಈ ರೀತಿ ನುಣುಚಿಕೊಂಡ ರೈತರ ಸಾಲಕ್ಕೆ ಬಡ್ಡಿ, ಸುಸ್ತಿ ಬಡ್ಡಿ ಸೇರಿ 625 ಕೋಟಿ ರೂ.ಗೆ ಬೆಳೆದಿದೆ.
ವಸೂಲಿ ಗುರಿ ಮುಟ್ಟಿಲ್ಲವೆಂದು ನಬಾರ್ಡ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ನೆರವು ನೀಡಲು ಮುಂದಾಗಿಲ್ಲ. ಪರಿಣಾಮ, ಪ್ರಾಮಾಣಿಕವಾಗಿ ಸಾಲ ಮರು ಪಾವತಿಸಿದ ರೈತರಿಗೆ ಹೊಸ ಸಾಲ ಕೊಡಲು ಸಾಧ್ಯವಾಗಿಲ್ಲ. ದೊಡ್ಡ ರೈತರಿಂದ ಸುಸ್ತಿ ಸಾಲ ವಸೂಲಿಗೆ ಟ್ರಾ್ಯಕ್ಟರ್ ಜಪ್ತಿ ಮಾಡಿಕೊಳ್ಳುತ್ತಿದ್ದು, 305 ಕೋಟಿ ರೂ. ಸುಸ್ತಿ ಬಡ್ಡಿ ಮನ್ನಾ ಮಾಡಲು ಸರ್ಕಾರಕ್ಕೆ ಕಾಸ್ಕಾರ್ಡ್ ಬ್ಯಾಂಕ್ ಮೊರೆಯಿಟ್ಟಿದೆ.
ರೈತರ ಸಂಕಷ್ಟ ಪರಿಗಣಿಸಿ ಬಲವಂತದ ಸಾಲ ವಸೂಲಿ ತಡೆದಿದ್ದೆವು. ಶೇ.75 ಭಾಗ ನೆರೆ, 25 ಭಾಗ ಬರವಿರುವಾಗ ದೀರ್ಘಾವಧಿ ಯಾವುದೇ ಸಾಲ ವಸೂಲಿ ಸಮಂಜಸವಲ್ಲ.
| ಬಂಡೆಪ್ಪ ಖಾಶೆಂಪುರ ಮಾಜಿ ಸಚಿವ
ಕಾಸ್ಕಾರ್ಡ್, ಪಿಕಾರ್ಡ್ ಬ್ಯಾಂಕ್​ಗಳು ಗಟ್ಟಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಸಾಲ ಮರು ಪಾವತಿಸದ ದೊಡ್ಡ ರೈತರ ಟ್ರಾ್ಯಕ್ಟರ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದೆ.
| ದಿವಾಕರ್ ವ್ಯವಸ್ಥಾಪಕ ನಿರ್ದೇಶಕ, ಕಾಸ್ಕಾರ್ಡ್ ಬ್ಯಾಂಕ್

ಮೃತ್ಯುಂಜಯ ಕಪಗಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + thirteen =
Remember me
