ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಆಗಸ್ಟ್ 8ರಂದು ವಕ್ಛ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಮೂಲಕ ಮುಸ್ಲಿಮರ ದೊಡ್ಡ ಮತ್ತು ಪ್ರಭಾವಶಾಲಿ ಸಂಸ್ಥೆ ವಕ್ಛ್ ಮಂಡಳಿ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ರಾಜಧಾನಿ ದೆಹಲಿ ಒಟ್ಟು 3.6 ಲಕ್ಷ ಎಕರೆ ಪ್ರದೇಶವನ್ನು ಒಳಗೊಂಡಿದೆ. ಆದರೆ, ವಕ್ಛ್ ಮಂಡಳಿ ಬಳಿ ಮೂರು ದೆಹಲಿಗಳಷ್ಟು ವಿಶಾಲವಾದ ಅಂದರೆ 9.4 ಲಕ್ಷ ಎಕರೆ ಜಮೀನಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 1.2 ಲಕ್ಷ ಕೋಟಿ ರೂಪಾಯಿಗೂ ಅಧಿಕ. ದೇಶದಲ್ಲಿ ರೈಲ್ವೆ ಇಲಾಖೆ ಮತ್ತು ರಕ್ಷಣಾ ಸಚಿವಾಲಯದ ಬಳಿಕ ಅತಿ ಹೆಚ್ಚು ಭೂಮಿಯನ್ನು ಹೊಂದಿರುವುದು ವಕ್ಛ್ ಮಂಡಳಿಯೇ. ಇದನ್ನು ಏತಕ್ಕಾಗಿ ರಚಿಸಲಾಯಿತು, ಕಾರ್ಯಗಳೇನು, ಆಸ್ತಿ ನಿರ್ವಹಣೆ ಹೇಗೆ? ಇದೆಲ್ಲದರ ವಿವರ ಇಲ್ಲಿದೆ.
‘ವಕ್ಛ್’ ಎಂಬುದು ಅರಬ್ ಭಾಷೆಯ ‘ವಕುಫಾ’ ಶಬ್ದದಿಂದ ಬಂದಿರುವಂಥದ್ದು. ಇದರ ಅರ್ಥ ನಿಲ್ಲುವುದು/ತಂಗುವುದು (ವಿಶಾಲರ್ಥದಲ್ಲಿ ಆಸರೆ ). ಇಸ್ಲಾಮ್ಲ್ಲಿ ದಾನ ನೀಡುವ ಹಲವು ವಿಧಾನಗಳ ಪೈಕಿ ವಕ್ಛ್ ಪ್ರಮುಖವಾದುದು. ಹೀಗೆ ದಾನ ಮಾಡಲಾದ ಸಂಪತ್ತು ಸಮಾಜಕ್ಕೆ ಸಮರ್ಪಿತವಾಗುತ್ತದೆ ಅಂದರೆ ಸಮಾಜದಲ್ಲಿನ ಬಡವರು, ಹಿಂದುಳಿದವರ ಕಲ್ಯಾಣಕ್ಕೆ ವಿನಿಯೋಗವಾಗುತ್ತದೆ ಎಂಬ ನಂಬಿಕೆ ಇದೆ. ತನ್ನ ಸಂಪತ್ತನ್ನು ವಕ್ಛ್​ಗೆ ದಾನ ನೀಡುವ ವ್ಯಕ್ತಿಯನ್ನು ‘ವಕೀಫಾ’ ಎಂದು ಕರೆಯಲಾಗುತ್ತದೆ. ದಾನ ನೀಡುವ ವ್ಯಕ್ತಿ ಸಮರ್ಪಣಾ ಭಾವದಿಂದ ಸಂಪತ್ತನ್ನು ಅರ್ಪಿಸಬೇಕು. ಆದರೆ, ದಾನ ಮಾಡುವ ಸಂದರ್ಭದಲ್ಲಿ ತನ್ನ ಸಂಪತ್ತಿನ ಮೇಲೆ ಬರುವ ಆದಾಯವನ್ನು ಶಿಕ್ಷಣ ಅಥವಾ ಆಸ್ಪತ್ರೆ/ಆರೋಗ್ಯ ಸೇವೆಗಳಿಗಾಗಿಯೇ ಖರ್ಚು ಮಾಡಬೇಕು ಎಂಬ ಷರತ್ತನ್ನು ವಿಧಿಸಿ, ದಾನಪತ್ರಕ್ಕೆ ಸಹಿ ಹಾಕಬಹುದಾಗಿದೆ.
ಯಾವುದಕ್ಕೆಲ್ಲ ವಿನಿಯೋಗಿಸಬಹುದು?:‘ವಕ್ಛ್ ಪ್ರಾಪರ್ಟಿಜ್ ಇನ್​ವೆಸ್ಟ್​ಮೆಂಟ್ ಫಂಡ್’ (ಎಐಪಿಎಫ್) 27 ದೇಶಗಳಲ್ಲಿ ವಕ್ಛ್ ಆಸ್ತಿಗಳ ಸಮೀಕ್ಷೆ, ನಿರ್ವಹಣೆ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದೆ. ಎಐಪಿಎಫ್ ಹೇಳುವ ಪ್ರಕಾರ, ಇಸ್ಲಾಮಿನಲ್ಲಿ ಯಾವುದೇ ವ್ಯಕ್ತಿ ಧಾರ್ವಿುಕ ಕಾರಣಗಳಿಗಾಗಿ ಅಥವಾ ದೇವರ ಹೆಸರಿನಲ್ಲಿ ದಾನ ಮಾಡುವ ಸಂಪತ್ತು ‘ವಕ್ಛ್’ ಎಂದು ಕರೆಸಿಕೊಳ್ಳುತ್ತದೆ. ಇದು ಸ್ಥಿರಾಸ್ತಿ ಮತ್ತು ಚರಾಸ್ತಿ ಎರಡನ್ನೂ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ವಕ್ಛ್ ಆಸ್ತಿ ಅಥವಾ ಆ ಆಸ್ತಿಯಿಂದ ಬರುವ ಆದಾಯವನ್ನು ಶೈಕ್ಷಣಿಕ ಸಂಸ್ಥೆಗಳು, ಅನಾಥಾಲಯಗಳು, ಮಸೀದಿಗಳು, ಸ್ಮಶಾನಗಳ (ಕಬ್ರಸ್ತಾನ್) ನಿರ್ವಣ, ಜೀಣೋದ್ಧಾರ, ಅಭಿವೃದ್ಧಿಗಾಗಿ ಬಳಸಲಾಗುತ್ತದೆ.
ಮುಸ್ಲಿಮೇತರರೂ ದಾನ ನೀಡಬಹುದು:ಸ್ವಾರಸ್ಯಕರ ಸಂಗತಿ ಎಂದರೆ, ವಕ್ಛ್​ಗೆ ಮುಸ್ಲಿಮೇತರರೂ ದಾನ ನೀಡಬಹುದಾಗಿದೆ. ಆದರೆ, ದಾನ ನೀಡಿದ ಸಂಪತ್ತು ಇಸ್ಲಾಮ್​ಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ವಿನಿಯೋಗ ವಾಗಬೇಕು ಮತ್ತು ದಾನ ನೀಡಿದ ಮುಸ್ಲಿಮೇತರ ವ್ಯಕ್ತಿ ಇಸ್ಲಾಮ್ಲ್ಲಿ ನಂಬಿಕೆ ಹೊಂದಿರಬೇಕು ಎಂಬ ನಿಯಮವಿದೆ.
ಇತರ ದೇಶಗಳಿಗಿಂತ ಹೆಚ್ಚು ಅಧಿಕಾರ:ಕಾನೂನು ತಜ್ಞರ ಅಭಿಪ್ರಾಯದ ಪ್ರಕಾರ, ಭಾರತದಲ್ಲಿರುವ ವಕ್ಛ್ ಮಂಡಳಿಗಳು ಹೆಚ್ಚು ಶಕ್ತಿಶಾಲಿಯಾಗಿವೆ ಮತ್ತು ಸೌದಿ ಅರೇಬಿಯಾ, ಪಾಕಿಸ್ತಾನದ ವಕ್ಛ್ ಮಂಡಳಿಗಳಿಗಿಂತ ಹೆಚ್ಚಿನ ಅಧಿಕಾರವ್ಯಾಪ್ತಿಯನ್ನು ಹೊಂದಿವೆ. ಉದಾಹರಣೆಗೆ, ಭಾರತದಲ್ಲಿ ಒಮ್ಮೆ ವಕ್ಛ್ ಆಸ್ತಿಯೆಂದು ಪರಿಗಣಿಸಲ್ಪಟ್ಟರೆ, ಅದು ಯಾವಾಗಲೂ ವಕ್ಛ್ ಮಂಡಳಿಯ ಅಧಿಕಾರವ್ಯಾಪ್ತಿಯಲ್ಲೇ ಇರುತ್ತದೆ. ಆದರೆ, ವಿದೇಶಗಳಲ್ಲಿ ಇದರ ನ್ಯಾಯಾಂಗ ಸಮೀಕ್ಷೆಗೆ ಅವಕಾಶವಿದೆ. ಭಾರತದಲ್ಲಿ ಈ ಪ್ರಕ್ರಿಯೆ ತುಂಬ ಜಟೀಲ ಮತ್ತು ಸಂಕೀರ್ಣವಾಗಿದೆ.
ಭಾರತದಲ್ಲಿ ಹಿಂದುಗಳ ಟ್ರಸ್ಟ್, ಮಠಗಳು, ಅಖಾರಾ ಮತ್ತು ಸೊಸೈಟಿಗಳ ಮೇಲೆ ಅನೇಕ ಕಾನೂನುಗಳ ಸಹಿತ ಜಿಲ್ಲಾಡಳಿತದ ನಿಯಂತ್ರಣವಿರುತ್ತದೆ. ಆದರೆ, ವಕ್ಛ್ ಮಂಡಳಿ ಈ ನಿಯಂತ್ರಣಕ್ಕೆ ಒಳಪಟ್ಟಿಲ್ಲ.
ಕರ್ನಾಟಕದಲ್ಲಿ ಅವ್ಯವಹಾರದ ಆರೋಪ:ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಆಗಿನ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ, ವಕ್ಪ್ ಆಸ್ತಿ ನಿರ್ವಹಣೆಯಲ್ಲಿ ಅಗಾಧ ಅವ್ಯವಹಾರ ನಡೆದಿದೆ. ಸುಮಾರು 2.8 ಲಕ್ಷ ಕೋಟಿ ರೂ. ಮೊತ್ತದ ವಕ್ಪ್ ಆಸ್ತಿ ಕಬಳಿಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್​ನ ಮೊರೆ ಹೋಗಿದ್ದರು. ಪರಿಣಾಮ, ‘ಅನೇಕರು ಕಬಳಿಸಿರುವ ವಕ್ಪ್ ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆಯಲೇಬೇಕು’ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ರಾಜ್ಯದಲ್ಲಿ 46,000ಕ್ಕೂ ಅಧಿಕ ವಕ್ಪ್ ಆಸ್ತಿಗಳು ವಕ್ಪ್ ಮಂಡಳಿಗಳ ಬಳಿ ಇವೆ.
ಆಸ್ತಿ ಪ್ರಮಾಣ:2009ರ ಬಳಿಕ ದೇಶದ ವಕ್ಛ್ ಆಸ್ತಿಗಳ ಪ್ರಮಾಣ ದುಪ್ಪಟ್ಟಾಗಿದೆ. ದೇಶದಲ್ಲಿ ಉತ್ತರಪ್ರದೇಶದ ವಕ್ಛ್ ಮಂಡಳಿ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಅದರ ಬಳಿ 2 ಲಕ್ಷಕ್ಕಿಂತಲೂ ಅಧಿಕ ಸ್ಥಿರಾಸ್ತಿಗಳಿವೆ.
ವಕ್ಛ್ (ಧಾರ್ವಿುಕ ಕಾರಣಗಳಿಗೆ ನೀಡಲಾಗುವ ದಾನ)ನಲ್ಲಿ ಸಿಕ್ಕ ಜಮೀನು ಅಥವಾ ಸಂಪತ್ತಿನ ನಿರ್ವಹಣೆಗಾಗಿ ಕಾನೂನಾತ್ಮಕವಾಗಿ ಸ್ಥಾಪಿಸಲಾದ ಸಂಸ್ಥೆಯೇ ವಕ್ಛ್ ಮಂಡಳಿ. 1947ರಲ್ಲಿ ದೇಶ ವಿಭಜನೆಗೊಂಡಾಗ ಬಹಳಷ್ಟು ಮುಸ್ಲಿಮರು ಭಾರತದಿಂದ ಪಾಕಿಸ್ತಾನಕ್ಕೆ ಹೋದರು. ಅದೇ ರೀತಿ ಪಾಕಿಸ್ತಾನದಿಂದ ದೊಡ್ಡ ಸಂಖ್ಯೆಯಲ್ಲಿ ಹಿಂದುಗಳು ಭಾರತಕ್ಕೆ ಬಂದರು. 1954ರಲ್ಲಿ ಸಂಸತ್ತು ‘ವಕ್ಛ್ ಆಕ್ಟ್ 1954’ ಎಂಬ ಕಾನೂನು ರೂಪಿಸಿತು. ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಮುಸಲ್ಮಾನರ ಜಮೀನು ಅಥವಾ ಸಂಪತ್ತಿನ ಮಾಲೀಕತ್ವ ಹಕ್ಕನ್ನು ಈ ಮೂಲಕ ಕಾನೂನಾತ್ಮಕವಾಗಿ ವಕ್ಛ್ ಮಂಡಳಿಗೆ ನೀಡಲಾಯಿತು. 1955ರಲ್ಲಿ ಅಂದರೆ ‘ವಕ್ಛ್ ಆಕ್ಟ್’ ಜಾರಿಗೆ ಬಂದ ಒಂದು ವರ್ಷದ ಬಳಿಕ ಈ ಕಾನೂನಿನಲ್ಲಿ ಬದಲಾವಣೆ ತಂದು, ಪ್ರತಿ ರಾಜ್ಯದಲ್ಲೂ ವಕ್ಛ್ ಮಂಡಳಿ ಸ್ಥಾಪಿಸುವ ಪ್ರಕ್ರಿಯೆ ಆರಂಭವಾಯಿತು. 1964ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸೆಂಟ್ರಲ್ ವಕ್ಛ್ ಕೌನ್ಸಿಲ್ ಆರಂಭಿಸಲಾಯಿತು.
ಪ್ರಸ್ತುತ, ದೇಶದ ವಿವಿಧ ಭಾಗಗಳಲ್ಲಿ 32 ವಕ್ಛ್ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಇವು ವಕ್ಛ್ ಜಮೀನು/ಸಂಪತ್ತುಗಳ ರೆಜಿಸ್ಟ್ರೇಶನ್ ಮಾಡಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿವೆ. ಬಿಹಾರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಶಿಯಾ ಮತ್ತು ಸುನ್ನಿ ಮುಸ್ಲಿಮರಿಗಾಗಿಪ್ರತ್ಯೇಕ ವಕ್ಛ್ ಮಂಡಳಿಗಳನ್ನು ಸ್ಥಾಪಿಸಲಾಗಿದೆ.
ವಕ್ಛ್​ನ (ದಾನ ಬಂದ ಸಂಪತ್ತು) ಒಟ್ಟು ಆದಾಯವೆಷ್ಟು, ಅದರಿಂದ ಯಾವೆಲ್ಲ ಜನೋಪಯೋಗಿ ಕೆಲಸಗಳನ್ನು ಮಾಡಲಾಗಿದೆ, ಎಷ್ಟು ಜನರಿಗೆ ಇದು ತಲುಪಿದೆ ಎಂಬುದರ ಲೆಕ್ಕಾಚಾರವನ್ನೆಲ್ಲ ವಕ್ಛ್ ಮಂಡಳಿ ನಿರ್ವಹಿಸುತ್ತದೆ. ದಾನವಾಗಿ ನೀಡಲಾಗುವ ಜಮೀನನ್ನು/ಸಂಪತ್ತನ್ನು ಸ್ವೀಕರಿಸುವ, ಇತರರ ಹೆಸರಿನ ಮೇಲೆ ವರ್ಗಾಯಿಸುವ ಕಾನೂನಾತ್ಮಕ ಹಕ್ಕನ್ನು ವಕ್ಛ್ ಮಂಡಳಿ ಹೊಂದಿದೆ. ಯಾವುದೇ ಟ್ರಸ್ಟ್​ಗಿಂತ ಅಧಿಕ ಕಾನೂನಾತ್ಮಕ ಹಕ್ಕುಗಳು ವಕ್ಛ್ ಮಂಡಳಿ ಬಳಿ ಇದ್ದು, ಆಸ್ತಿ ವಿವಾದಕ್ಕೆ ಸಂಬಂಧಿಸಿ ಲೀಗಲ್ ನೋಟಿಸ್​ನ್ನೂ ಇದು ಜಾರಿಗೊಳಿಸಬಹುದಾಗಿದೆ.
ಕಾನೂನಿನ ಬಲ:1955ರ ಬಳಿಕ 1995ರಲ್ಲಿ (ಪಿ.ವಿ.ನರಸಿಂಹ ರಾವ್ ಪ್ರಧಾನಿ ಮತ್ತು ಡಾ.ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ) ಎರಡನೇ ಬಾರಿಗೆ ‘ವಕ್ಛ್ ಆಕ್ಟ್ 1954’ಕ್ಕೆ ತಿದ್ದುಪಡಿ ತರಲಾಯಿತು. ಈ ಮೂಲಕ ವಕ್ಛ್ ಮಂಡಳಿಗಳಿಗೆ ಹೆಚ್ಚಿನ ಅಧಿಕಾರವನ್ನು ಪ್ರದಾನಿಸಲಾಯಿತು. ಮಂಡಳಿ ವ್ಯಾಪ್ತಿಗೆ ಬರುವ ಜಮೀನು ಅಥವಾ ಸಂಪತ್ತಿನ ಬಗ್ಗೆ ವಿವಾದ ಇಲ್ಲವೆ ಆಕ್ಷೇಪಗಳಿದ್ದರೆ ವಕ್ಛ್ ಟ್ರಿಬ್ಯೂನಲ್​ನ ಮೊರೆ ಹೋಗಬಹುದು. ಜಮೀನು/ಸಂಪತ್ತಿನ ವಿವಾದದ ಬಗ್ಗೆ ಅಂತಿಮ ನಿರ್ಣಯ ನೀಡುವ ಅಧಿಕಾರ ವಕ್ಛ್ ಟ್ರಿಬ್ಯೂನಲ್​ಗೆ ಇದೆ. ಈ ಟ್ರಿಬ್ಯೂನಲ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಇತರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಯಾವುದೇ ಅವಕಾಶ ಇಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಲಾಗಿದ್ದು, ನೂರಾರು ಪ್ರಕರಣಗಳು ಬಾಕಿ ಇವೆ. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ (ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ) ವಕ್ಛ್ ಮಂಡಳಿಯ ಕಾನೂನಿಗೆ ಮತ್ತೆ ತಿದ್ದುಪಡಿ ತಂದು, ಮಂಡಳಿಗೆ ಮತ್ತಷ್ಟು ಅಧಿಕಾರ, ಶಕ್ತಿಯನ್ನು ನೀಡಿತು. ಅಲ್ಲದೆ, ದೇಶಾದ್ಯಂತ ಇರುವ ವಕ್ಛ್ ಸಂಪತ್ತುಗಳ ಮೇಲೆ ನಿಗಾ ಇರಿಸಲು ಇದೇ ಅವಧಿಯಲ್ಲಿ ಜಿಯಾಗ್ರಾಫಿಕ್ ಇನ್​ಫಾರ್ವೆಶನ್ ಸಿಸ್ಟಮ್ (ಜಿಇಎಸ್) ಮ್ಯಾಪಿಂಗ್​ನ ವ್ಯವಸ್ಥೆ ಜಾರಿಗೆ ಬಂತು.
ದೇಶದ ಬಹುತೇಕ ವಕ್ಛ್ ಮಂಡಳಿಗಳ ಉನ್ನತ ಹುದ್ದೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರನ್ನು/ಮುಖಂಡರನ್ನು ನೇಮಿಸಲಾಗುತ್ತಿದೆ. ಇದರಿಂದಾಗಿ, ವಕ್ಛ್ ಮಂಡಳಿಗಳಲ್ಲಿ ರಾಜಕೀಯ ನುಸುಳಿದ್ದು, ಅವುಗಳ ವರ್ಚಸ್ಸಿಗೆ ಗಂಭಿರ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಡಳಿಗಳ ಅಧಿಕಾರವು ಕಡಿಮೆಯಾಗಿದೆ.
| ಸೈಯ್ಯದ್ ಅಫ್ಜಲ್ ಅಬ್ಬಾಸ್ ಬಿಹಾರ ಶಿಯಾ ವಕ್ಛ್ ಬೋರ್ಡ್ ಅಧ್ಯಕ್ಷ
ಆಸ್ತಿ ಪ್ರಮಾಣ:2009ರ ಬಳಿಕ ದೇಶದ ವಕ್ಛ್ ಆಸ್ತಿಗಳ ಪ್ರಮಾಣ ದುಪ್ಪಟ್ಟಾಗಿದೆ. ದೇಶದಲ್ಲಿ ಉತ್ತರಪ್ರದೇಶದ ವಕ್ಛ್ ಮಂಡಳಿ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಅದರ ಬಳಿ 2 ಲಕ್ಷಕ್ಕಿಂತಲೂ ಅಧಿಕ ಸ್ಥಿರಾಸ್ತಿಗಳಿವೆ.
ಸಿದ್ದರಾಮಯ್ಯ ಭಾವುಕ ವ್ಯಕ್ತಿ, ಸುಳ್ಳು ಆರೋಪ ಮಾನಸಿಕ ಹಿಂಸೆಯಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − eleven =
Remember me
