ಬೆಂಗಳೂರು:ಸಂಚಾರ ನಿರ್ಬಂಧದ ನಡುವೆಯೂ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವುದನ್ನು ತಡೆದು ಪ್ರಶ್ನಿಸಿದ್ದಕ್ಕೆ ಪೇದೆ ಮೇಲೆಯೇ ಹಲ್ಲೆ ಮಾಡಿದ್ದ ವ್ಯಕ್ತಿ ಕಾಲಿಗೆ ಸಂಜಯನಗರ ಪೊಲೀಸರು ಗುಂಡು ಹಾರಿಸಿದ್ದಾರೆ.
ಭೂಪಸಂದ್ರದ ನಿವಾಸಿ ತಾಜುದ್ದೀನ್ (25) ಗುಂಡೇಟು ತಿಂದ ಆರೋಪಿ. ಬುಧವಾರ (ಮಾ.25) ಮಧ್ಯಾಹ್ನ 12.30ರಲ್ಲಿ ಕರ್ತವ್ಯ ನಿರತ ಇಬ್ಬರು ಪೇದೆಗಳ ಮೇಲೆ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾಜುದ್ದೀನ್ (25) ಮತ್ತು ಕುತ್ಬುದ್ದೀನ್ (25) ಎಂಬುವನನ್ನು ಬಂಧಿಸಲಾಗಿತ್ತು.
ತಡರಾತ್ರಿ ಸ್ಥಳ ಮಹಜರು ಮಾಡಲು ಭೂಪಸಂದ್ರದ ಚೆಕ್ ಪೋಸ್ಟ್​ಗೆ ಕರೆದೊಯ್ದಾಗ, ಮಹಿಳಾ ಪಿಎಸ್​ಐ ರೂಪಾ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಸಂಜಯ್ನಗರ ಇನ್​ಸ್ಪೆಕ್ಟರ್ ಬಾಲಾಜಿ ಅವರು ಸಿಬ್ಬಂದಿಯ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಒಂದು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ.
ಕರೊನಾ ನಿಯಂತ್ರಣಾ ಕ್ರಮದ ಚರ್ಚೆ ನಡೆಯುತ್ತಿದ್ದ ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್​ ಆರೋಪಕ್ಕೆ ನೊಂದು ಕಣ್ಣೀರಿಟ್ಟ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
