ಬೆಂಗಳೂರು:ಕರೊನಾದಿಂದ ಹದಗೆಟ್ಟುಹೋಗಿರುವ ಆರ್ಥಿಕತೆಗೆ ಸ್ವಲ್ಪಮಟ್ಟಿಗೆ ಬಲ ತಂದುಕೊಡುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಲೇ ಇವೆ. ಆ ಪಟ್ಟಿಗೆ ಇದೀಗ ಇನ್ನೊಂದು ಕ್ರಮ ಸೇರ್ಪಡೆಯಾಗಿದೆ.
ಇದನ್ನೂ ಓದಿ:ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!
ಇನ್ನು ಮುಂದೆ ರಾಜ್ಯದಲ್ಲಿ ನೋಂದಾಯಿತ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬಹುದು ಎಂದು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಅದಕ್ಕೆ ಪೂರಕವಾಗಿ ಕೆಲವು ಷರತ್ತುಗಳನ್ನೂ ವಿಧಿಸಿದೆ.
ಹೆಚ್ಚುವರಿ ಅವಧಿ ಕಾರ್ಯ ನಿರ್ವಹಿಸುವ ಅಂಗಡಿ ಮುಂಗಟುಗಳ ಮಾಲೀಕರು ಹೆಚ್ಚುವರಿ ನೌಕರರನ್ನು ನೇಮಕ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ನೌಕರನನ್ನು ದಿನಕ್ಕೆ 8 ಗಂಟೆಗಿಂತ ಹೆಚ್ಚು ದುಡಿಸಿಕೊಳ್ಳಬಾರದು. ಒಂದು ವೇಳೆ ಓವರ್ ಟೈಮ್ ಡ್ಯೂಟಿ ನಿಗದಿಪಡಿಸಿದರೂ ಅದು 2 ಗಂಟೆಗಿಂತ ಹೆಚ್ಚಿರಬಾರದು. ವಾರಕ್ಕೆ ಒಂದು ದಿನ ಕಡ್ಡಾಯವಾಗಿ ರಜೆ ನೀಡಬೇಕು ಎಂದು ಷರತ್ತು ಹಾಕಿದೆ.
ಇದನ್ನೂ ಓದಿ:ಮುಂದಿನ ಅಧಿವೇಶನದಲ್ಲಿ ಬರಲಿದೆ ಲವ್ ಜಿಹಾದ್ ವಿರುದ್ಧದ ವಿಧೇಯಕ
ಯಾವುದೇ ಮಹಿಳಾ ಸಿಬ್ಬಂದಿಯನ್ನು ರಾತ್ರಿ 8 ಗಂಟೆಯ ನಂತರ ದುಡಿಸಿಕೊಳ್ಳಬಾರದು. ಒಂದು ವೇಳೆ ಮಹಿಳಾ ಸಿಬ್ಬಂದಿಯೇ ಸ್ವಇಚ್ಛೆಯಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಮುಂದೆಬಂದರೆ, ಅಂಥವರಿಂದ ಲಿಖಿತ ರೂಪದಲ್ಲಿ ಒಪ್ಪಿಗೆ ಪತ್ರ ಬರೆಸಿಕೊಳ್ಳಬೇಕು . ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ, ಸುರಕ್ಷತಾ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.
54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
