
ಬೆಂಗಳೂರು:ಕೆಂಪು ವಲಯದಲ್ಲೂ (ರೆಡ್​ ಜೋನ್​) ಆರ್ಥಿಕ ಚಟುವಟಿಕೆ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆಯಾ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕಾರ್ಖಾನೆಗಳು, ಎಲೆಕ್ಟ್ರಿಕ್​ ಅಂಗಡಿಗಳು, ಟೈಲ್ಸ್​ ಅಂಗಡಿಗಳನ್ನು ತೆರಯಬಹುದು ಎಂದು ಸಚಿವ ಆರ್​. ಅಶೋಕ್​ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು 4 ವಲಯಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ವಿಂಗಡಣೆ ಮಾಡಲಾಗುವುದು ಎಂದರು.
ಇದನ್ನೂ ಓದಿ:ಸಿಎಂ ಬಿಎಸ್​ವೈ ಈ ಕೆಲಸ ಮಾಡಲಿಲ್ಲ ಅಂದ್ರೆ ಬದುಕಿದ್ದೂ ಸತ್ತಂತೆ: ಡಿ.ಕೆ.ಶಿವಕುಮಾರ್​
2 ಗಂಟೆಯಲ್ಲಿ ಸಿಗುತ್ತೆ ಅನುಮತಿ:ಅಂಗಡಿ ಮುಂಗಟ್ಟೆಗಳು, ಕಾರ್ಖಾನೆಗಳನ್ನು ತೆರೆಯಲು ಅರ್ಜಿ ಸಲ್ಲಿಸಿದ ಎರಡು ಗಂಟೆಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ದೊರೆಯುತ್ತದೆ ಎಂದು ಆರ್​. ಅಶೋಕ್​ ಹೇಳಿದರು.
ಈ ರೀತಿಯಾಗಿ ಅನುಮತಿ ಪಡೆದುಕೊಂಡು ವೋಲ್ವೋ ಕಂಪನಿ ಈಗಾಗಲೆ ಕಾರ್ಯಾರಂಭಿಸಿದೆ. ಕಾರ್ಖಾನೆಗಳು ಶೇ.33 ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಬಹುದು. ಉಳಿದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದು ಕಡ್ಡಾಯ ಎಂದು ಹೇಳಿದರು.
ಇದನ್ನೂ ಓದಿ:ಜಾಸ್ತಿ ಸಡಿಲ, ಸ್ವಲ್ಪ ಜಟಿಲ: 2 ವಾರ ಲಾಕ್​ಡೌನ್ ವಿಸ್ತರಣೆ, ಎಲ್ಲ ವಲಯಕ್ಕೂ ನಿರ್ಬಂಧಿತ ವಿನಾಯಿತಿ
ಮಾರ್ಕೆಟ್​ನಲ್ಲಿ ತರಕಾರಿ, ಹಣ್ಣು, ಔಷಧ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇನ್ನುಳಿದಂತೆ ಬೇರಾವುದೇ ಚಟುವಟಿಕೆಯನ್ನು ಅಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಮದ್ಯದ ಬಗ್ಗೆ ಸಿಎಂ ತೀರ್ಮಾನ:ಎಲ್ಲೆಲ್ಲಿ ಮದ್ಯದಂಗಡಿಗಳನ್ನು ತೆರೆಯಬೇಕು. ಒಬ್ಬರಿಗೆ ಎಷ್ಟು ಪ್ರಮಾಣದ ಮದ್ಯ ಕೊಡಬೇಕು ಎಂಬ ಬಗ್ಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ತೀರ್ಮಾನಿಸಲಿದ್ದಾರೆ. ಮದ್ಯಂಗಡಿಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೂಡ ಅವರೇ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.
ದುಬೈ ಮಾಲ್​ ಮತ್ತೆ ಆರಂಭ, ವಿಶ್ವದ ಅತ್ಯಂತ ದೊಡ್ಡ ಮಾಲ್​ ಸ್ಥಗಿತಗೊಂಡಿದ್ದಾದರೂ ಏಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − three =
Remember me
