|ಕೀರ್ತಿನಾರಾಯಣ ಸಿ.ಬೆಂಗಳೂರು
ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ಕರ್ತವ್ಯ ನಿರ್ವಹಿಸಲು ಮೋಟಾರು ವಾಹನ ಇನ್​ಸ್ಪೆಕ್ಟರ್​ಗಳ ಕೊರತೆ ಎದುರಾಗಿದೆ. ಮಂಜೂರಾಗಿರುವ 644 ಹುದ್ದೆಗಳ ಪೈಕಿ 437 ಹುದ್ದೆಗಳು ಖಾಲಿ ಉಳಿದಿವೆ. ಹೊಸದಾಗಿ ಆಯ್ಕೆಯಾಗಿರುವ 141 ಮಂದಿಗೆ ನೇಮಕಾತಿ ಪತ್ರ ಕೊಡುವ ಪ್ರಕ್ರಿಯೆ ವಿಳಂಬವಾಗಿದೆ. ಇನ್ನೊಂದೆಡೆ, ಕ್ಯಾಬಿನೆಟ್ ಅನುಮೋದನೆ ಸಿಕ್ಕಿದ್ದರೂ ಕ್ಲರಿಕಲ್ ಸಿಬ್ಬಂದಿಗೆ ಬ್ರೇಕ್ ಇನ್​ಸ್ಪೆಕ್ಟರ್ ಹುದ್ದೆಗೆ ಬಡ್ತಿ ಕೊಡಲು ಸಾರಿಗೆ ಇಲಾಖೆ ಮೀನ-ಮೇಷ ಎಣಿಸುತ್ತಿರುವುದರಿಂದ ಇರುವವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ ಎರಡ್ಮೂರು ಕಚೇರಿಗಳಲ್ಲಿ ಡ್ಯೂಟಿ ಮಾಡುವ ಪರಿಸ್ಥಿತಿ ಉದ್ಬವಿಸಿದೆ.
2008ರ ನಂತರ ಆರ್​ಟಿಒ ಕಚೇರಿಗಳಿಗೆ ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯೇ ಆಗಿಲ್ಲ. ಹಲವು ಅಡೆತಡೆಗಳ ಮಧ್ಯೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 20 ವರ್ಷಗಳ ನಂತರ 141 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಮಾನತುಗೊಂಡಿರುವುದರಿಂದ 40 ಅಭ್ಯರ್ಥಿಗಳ ಗ್ಯಾರೇಜ್ ಸೇವಾನುಭವ ಪ್ರಮಾಣಪತ್ರದ ನೈಜತೆ ಪರಿಶೀಲಿಸಿ ವರದಿ ಕೊಡುವ ಪ್ರಕ್ರಿಯೆ ವಿಳಂಬವಾಗಿದೆ. ಬೇರೆಲ್ಲ ಜಿಲ್ಲೆಗಳಿಂದ ವರದಿ ಬಂದಿದ್ದು, ಬೆಂಗಳೂರು ವ್ಯಾಪ್ತಿಯ ಅಭ್ಯರ್ಥಿಗಳ ವರದಿ ಬಾರದೆ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ಬ್ರೇಕ್ ಇನ್​ಸ್ಪೆಕ್ಟರ್​ಗಳ ಕೊರತೆ ನಿವಾರಣೆಗಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ಮೋಟಾರು ವಾಹನ ಶಾಖೆ) ನೇಮಕಾತಿ ನಿಯಮ -2022ಕ್ಕೆ ತಿದ್ದುಪಡಿ ತಂದಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆಯೂ ದೊರೆತಿದೆ. ಇದರನ್ವಯ ಸಿ ಗ್ರೂಪ್​ನ ಎಫ್​ಡಿಎ, ಶೀಘ್ರಲಿಪಿಗಾರ, ಹಿರಿಯ ಬೆರಳಚ್ಚುಗಾರ ಹಾಗೂ ಹಿರಿಯ ಚಾಲಕರಿಗೆ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಮುಂಬಡ್ತಿ ಕೊಡಲು ಅವಕಾಶ ಸಿಕ್ಕಿದೆ. ಆದರೆ, ಕ್ಲರಿಕಲ್ ಸಿಬ್ಬಂದಿಗೆ ಬಡ್ತಿ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿಯೇ ಇಲ್ಲ. ತಿದ್ದುಪಡಿ ನಿಯಮದ ಪ್ರಕಾರ 3 ವರ್ಷಗಳ ಅವಧಿಯ ಅಟೋಮೊಬೈಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಆಗಿರುವ ಎಫ್​ಡಿಎ, ಶೀಘ್ರಲಿಪಿಗಾರ, ಬೆರಳಚ್ಚುಗಾರ, ಹಿರಿಯ ಚಾಲಕರಿಗೆ ಬಡ್ತಿ ಕೊಡಲು ಅವಕಾಶವಿದೆ. ಆದ್ದರಿಂದ ಅರ್ಹತೆ ಹೊಂದಿರುವ ಕ್ಲರಿಕಲ್ ಸಿಬ್ಬಂದಿಗೆ ಆದಷ್ಟು ಬೇಗ ಮುಂಬಡ್ತಿ ಕೊಟ್ಟರೆ ಇನ್​ಸ್ಪೆಕ್ಟರ್​ಗಳ ಅಭಾವ ಸ್ವಲ್ಪವಾದರೂ ನೀಗುತ್ತದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾರೇಜ್ ಸೇವಾನುಭವ ಪ್ರಮಾಣಪತ್ರದ ನೈಜತೆ ಪರಿಶೀಲನೆ ವರದಿಯನ್ನು ಶೀಘ್ರದಲ್ಲೇ ಕಳುಹಿಸುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹೇಳಿದ್ದಾರೆ. ಇವುಗಳ ಪರಿಶೀಲನೆ ನಂತರ ನೇಮಕಾತಿ ಪತ್ರ ವಿತರಿಸಲಾಗುತ್ತದೆ. ಎಸ್ಸಿ-ಎಸ್ಟಿ ಮೀಸಲಾತಿ ರೋಸ್ಟರ್ ಬಿಂದುಗಳ ಗುರುತಿಸುವವರೆಗೆ ಹೊಸ ನೇಮಕಾತಿ ಹಾಗೂ ಮುಂಬಡ್ತಿ ಸಭೆ ನಡೆಸದಂತೆ ಸರ್ಕಾರ ಸೂಚಿಸಿರುವುದರಿಂದ ಕ್ಲರಿಕಲ್ ಸಿಬ್ಬಂದಿಗೆ ಬಡ್ತಿ ಕೊಡಲಾಗಿಲ್ಲ. ನಿಯಮದಂತೆ ಅವರಿಗೂ ಬಡ್ತಿ ಕೊಡಲಾಗುತ್ತದೆ.
|ಎಸ್.ಎನ್. ಸಿದ್ದರಾಮಪ್ಪಸಾರಿಗೆ ಮತ್ತು ಸುರಕ್ಷತೆ ಆಯುಕ್ತ
ಸುಪ್ರೀಂಗೆ 33 ಅಭ್ಯರ್ಥಿಗಳ ವರದಿ:2008ರಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹರಾಗಿದ್ದ 39 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿದೆ. 39 ಅಭ್ಯರ್ಥಿಗಳಲ್ಲಿ ಕೆಲವರು ಮೃತಪಟ್ಟಿದ್ದು, ಮತ್ತೆ ಕೆಲವರು ವಯೋಮಿತಿ ಮೀರಿದ್ದಾರೆ. 33 ಅಭ್ಯರ್ಥಿಗಳು ಮಾತ್ರ ನೇಮಕಾತಿ ಆಗಲಿದ್ದಾರೆ. ನೇಮಕಾತಿ ಪ್ರಕ್ರಿಯೆ ಕುರಿತ ವರದಿಯನ್ನು ಸುಪ್ರೀಂಕೋರ್ಟ್ ಸಲ್ಲಿಸಲಾಗಿದೆ.
– ತಿದ್ದುಪಡಿ ನಿಯಮಕ್ಕೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿರುವುದರಿಂದ ಈಗಾಗಲೇ ಪಟ್ಟಿ ಮಾಡಿರುವ ಸಿ ಗ್ರೂಪ್ ಸಿಬ್ಬಂದಿಗೆ ಮುಂಬಡ್ತಿ ಕೊಡಬೇಕು.
– 141 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಶೀಘ್ರ ಮುಗಿಸಲು ಬೆಂಗಳೂರು ನಗರ ಡಿಸಿ ಹುದ್ದೆಗೆ ಪ್ರಭಾರಿಯಾಗಿರುವವರು ಪ್ರಮಾಣಪತ್ರದ ನೈಜತೆ ಪರಿಶೀಲಿಸಿ ವರದಿ ಕೊಡಬೇಕು.
– ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ 2008ರ ಬ್ಯಾಚ್​ನ 33 ಅಭ್ಯರ್ಥಿಗಳಿಗೆ ಆದಷ್ಟು ಬೇಗ ನೇಮಕಾತಿ ಪತ್ರ ಕೊಡಬೇಕು.
– ಹೊಸದಾಗಿ 174 ಅಭ್ಯರ್ಥಿಗಳು ಹಾಗೂ ಸಿ ಗ್ರೂಪ್​ನ 6 ಮಂದಿಗೆ ಬಡ್ತಿ ಸಿಕ್ಕರೆ ಒಟ್ಟು 180 ಬ್ರೇಕ್ ಇನ್​ಸ್ಪೆಕ್ಟರ್ ಹುದ್ದೆಗಳು ಭರ್ತಿ ಆಗಲಿವೆ.
ಬೆಳಗಾವಿ ಅಧಿವೇಶನದಲ್ಲಿ ಮಂಡನೆ:ಎಸ್​ಸಿ ಮೀಸಲು ಪ್ರಮಾಣ ಶೇ.15ರಿಂದ 17ಕ್ಕೆ ಹಾಗೂ ಎಸ್​ಟಿ ಮೀಸಲು ಪ್ರಮಾಣ ಶೇ.3ರಿಂದ 7ಕ್ಕೆ ಸರ್ಕಾರ ಹೆಚ್ಚಿಸಿದೆ. ಇದರನ್ವಯ ರೋಸ್ಟರ್ ಬಿಂದುಗಳನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಕೆಯಾಗಿದೆ. ಮುಂದಿನ ವಾರ ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡನೆಯಾಗಲಿದೆ. ಅನುಮೋದನೆ ಸಿಕ್ಕ ನಂತರ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆಗಳು ನಡೆಯಲಿವೆ.
ಬ್ರೇಕ್ ಇನ್​ಸ್ಪೆಕ್ಟರ್:430107323
ಸೀನಿಯರ್ ಬ್ರೇಕ್ ಇನ್​ಸ್ಪೆಕ್ಟರ್:214100114

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 11 =
Remember me
