ಬೆಂಗಳೂರು:ಮೈ ಬಗ್ಗಿಸಿ ಕಾನೂನು ಪುಸ್ತಕ ಓದಿ. ಸಮಸ್ಯೆಗೆ ಪರಿಹಾರ ಸಿಗುತ್ತದೆ, ಜನರ ಕಷ್ಟಕ್ಕೂ ಸ್ಪಂದಿಸಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಜನರ ದೂರಿಗೆ ಒಳಗಾಗುವುದು ತಪ್ಪುತ್ತದೆ ಎಂದು ಇಲಾಖೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಟಿ ಬೀಸಿದರು.
ವಿಕಾಸಸೌಧದಲ್ಲಿ ಇಲಾಖೆಯ ಬೆಂಗಳೂರು ವಿಭಾಗದ ಸಭೆ ಅಧ್ಯಕ್ಷತೆವಹಿಸಿದ್ದ ಪ್ರಗತಿ ಪರಿಶೀಲಿಸಿ ಸೋಮವಾರ ಮಾತನಾಡಿದರು. ಬಗರ್ ಹುಕುಂ, ದರಕಾಸ್ತ್ ಮಂಜೂರಾತಿಗೆ ಸಂಬಂಧಿಸಿದಂತೆ ದಾಖಲೆಗಳು ಪಕ್ಕಾ, ಮಂಜೂರು ಜಮೀನಿಗೆ ಸರಿ ಹೊಂದುವಂತಿದ್ದರೆ ಹಕ್ಕುಪತ್ರ ನೀಡುವುದಕ್ಕೆ ನಿಮಗೆ ಸಮಸ್ಯೆ ಏನು ?ಅಧಿಕಾರಿಗಳು ಮಾಡುವ ತಪ್ಪಿಗೆ ಜನರ ಎದುರು ಜನಪ್ರತಿನಿಧಿಗಳು ತಲೆ ತಗ್ಗಿಸಬೇಕೆ ?. ಮನಸ್ಸು, ಬುದ್ದಿ ಕೊಟ್ಟು ಕೆಲಸ ಮಾಡಿದರೆ ಯಾವುದೂ ಕಷ್ಟವಲ್ಲ, ಕಾನೂನು ಮೀರಿ ಹೋಗುವಂತೆಯೂ ನಾನು ಹೇಳುತ್ತಿಲ್ಲವೆಂದು ಖಡಕ್ ಆಗಿ ಹೇಳಿದರು.
ಇಲಾಖೆ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹೀಗೆಯೇ ಎಂದು ಹೇಳುವುದಿಲ್ಲ. ಆದರೆ ಕೆಲವರು ಮಾಡುವ ತಪ್ಪಿಗೆ ಇಲಾಖೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಒಳ್ಳೆಯ ರೀತಿಯಿಂದ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಮನಸ್ಸಿಗೂ ನೋವಾಗುತ್ತದೆ ಎಂದು ತಿಳಿ ಹೇಳಿದರು.
ಕೆಲಸಕ್ಕೆ ಸೇರಿದ ಮೇಲೆ ಒಮ್ಮೆಯಾದರೂ ಕಾನೂನು ಪುಸ್ತಕ ಓದಿದ್ದೀರಾ ?. ಗೋಮಾಳ ಜಮೀನ ಮಂಜೂರಾತಿ ಬಗ್ಗೆ ಕಾನೂನು ಪುಸ್ತಕದಲ್ಲಿ ಸ್ಪಷ್ಟವಾಗಿದೆ. ಅದನ್ನು ಓದಿ ಪಾಲಿಸುವುದಕ್ಕೆ ನಿಮಗೇನು ಸಮಸ್ಯೆ ?. ಕಾನೂನು ಪುಸ್ತಕ ಓದುವ ಜತೆಗೆ ಜನರ ಕುಂದು-ಕೊರತೆಗೆ ತಕ್ಷಣ ಸ್ಪಂದಿಸಿದರೆ ಕಷ್ಟ ಹೇಳಿಕೊಂಡ ಬಂದವರಲ್ಲೂ ಸರ್ಕಾರದ ಬಗ್ಗೆ ವಿಶ್ವಾಸ ಮೂಡುತ್ತದೆ ಎಂದು ಕೃಷ್ಣಬೈರೇಗೌಡ ತಿಳಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಕಂದಾಯ ಇಲಾಖೆ ಬೆಂಗಳೂರು ವಿಭಾಗದ ಸಭೆ ಸೋಮವಾರ ನಡೆಯಿತು. ಸಚಿವ ಕೃಷ್ಣಬೈರೇಗೌಡ, ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತ ಸುನಿಲ್ ಕುಮಾರ್, ಪ್ರಾದೇಶಿಕ ಆಯುಕ್ತ ಎ.ಎ.ಬಿಸ್ವಾಸ್, ಸರ್ವೇ ಇಲಾಖೆ ಆಯುಕ್ತ ಮಂಜುನಾಥ್, ವಿಪತ್ತು ನಿರ್ವಹಣಾ ಆಯುಕ್ತ ಶಿವಕುಮಾರ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
