ನವದೆಹಲಿ:ಕರ್ನಾಟಕದ ರಾಜ್ಯದ ಇಬ್ಬರಿಗೆ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಪ್ರಕಟಿಸಿರುವ ಪಟ್ಟಿಯಲ್ಲಿ ರಾಜ್ಯದ ಇಬ್ಬರು ಸ್ಥಾನ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರು.
ಕೋಪೋದ್ರಿಕ್ತ ಹಸುವಿನ ದಾಳಿಯಿಂದ ತನ್ನ ಸಹೋದರನ ಪ್ರಾಣವನ್ನು ಆರತಿ ಕಾಪಾಡಿದ್ದಳು. ಆರತಿ ಸಮಯೋಚಿತ ನಡೆಯಿಂದಾಗಿ ಆಕೆಯ ತಮ್ಮನಿಗೆ ಪುನರ್ಜನ್ಮ ಸಿಕ್ಕಿತ್ತು.
ಪ್ರವಾಹದ ನೀರಿನಲ್ಲಿ ಈಜಿ ಆಂಬುಲೆನ್ಸ್​ಗೆ ದಾರಿ
2019ರಲ್ಲಿ ಕೃಷ್ಣಾ ನದಿಯ ಭೀಕರ ಪ್ರವಾಹ ಬಂದಾಗ ಶೌರ್ಯ ತೋರಿದ್ದ ವೆಂಕಟೇಶ್​. ಆಗಸ್ಟ್ 10ರಂದು ನೀರಿನಿಂದ ಮುಳುಗಿದ್ದ ರಸ್ತೆಯಲ್ಲಿ ಈಜಿ ಆಂಬುಲೆನ್ಸ್​ಗೆ ದಾರಿ ತೋರಿಸಿದ್ದ ವೆಂಕಟೇಶ್. ಆ ಮೂಲಕ ಆಂಬುಲೆನ್ಸ್ ನಲ್ಲಿದ್ದ ಐವರ ಪ್ರಾಣ ಕಾಪಾಡಿದ್ದ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿ ದೊರೆತಿದೆ.
ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ವೆಂಕಟೇಶ್​ ಮತ್ತು ಆರತಿ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಜನವರಿ 26ರಂದು ರಾಜ​ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​ನಲ್ಲಿ ಭಾಗಿಯಾಗಲಿರುವ ಈ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
