ಬೆಂಗಳೂರು:ದೇಶವನ್ನು ಒಗ್ಗೂಡಿಸುವ ‘ಭಾರತ್ ಜೋಡೋ ನ್ಯಾಯ್​ ಯಾತ್ರೆ’ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧರಿಸಿದ್ದ ಬಾಬೆರಿ ಟಿ- ಶರ್ಟ್ ಸುಮಾರು 41,000 ರೂ ವೆಚ್ಚದ್ದು ಎಂದು ಎನ್ನಲಾಗಿರುವ ವಿಚಾರವಾಗಿ ಬಿಜೆಪಿ ವಾಗ್ದಾಳಿ ನಡೆಸಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿದೆ.
ಇದನ್ನೂ ಓದಿ:ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ದಿನ ಹೇಗೆ ಪ್ರಾರಂಭಿಸುತ್ತಾರೆ ಗೊತ್ತಾ?
ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣದಲ್ಲಿ SHOWCIALIST ಸಿಎಂ@siddaramaiahಅವರ ಜಾತ್ರೆ.
ಬಾಯಿ ಬಿಟ್ಟರೆ ಸಮಾಜವಾದಿ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯನವರ ಪ್ರತಿದಿನ ಆಸೀನರಾಗುವುದು, ₹10 ಲಕ್ಷ ಮೌಲ್ಯದ ಮಸಾಜ್‌ ಕುರ್ಚಿ ಮೇಲೆ.
ಪ್ರತಿ ದಿನ ಮಜಾ ಉಡಾಯಿಸಲು ಹಾಗೂ ಐಷಾರಾಮಿಯಾಗಿ ಬದುಕಲು ಕನ್ನಡಿಗರ ತೆರಿಗೆ ಹಣವನ್ನು ಬಳಸುವಲ್ಲಿ…pic.twitter.com/ad2yodwjgi
— BJP Karnataka (@BJP4Karnataka)February 13, 2024

ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣದಲ್ಲಿ SHOWCIALIST ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತ್ರೆ ಬಾಯಿ ಬಿಟ್ಟರೆ ಸಮಾಜವಾದಿ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯನವರ ಪ್ರತಿದಿನ ಆಸೀನರಾಗುವುದು, ಬರೋಬ್ಬರಿ 10 ಲಕ್ಷ ಮೌಲ್ಯದ ಮಸಾಜ್‌ ಕುರ್ಚಿ ಕುರಿತು ಮೇಲೆ ಮಜಾ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಿ ದಿನ ಮಜಾ ಉಡಾಯಿಸಲು ಹಾಗೂ ಐಷಾರಾಮಿಯಾಗಿ ಬದುಕಲು ಕನ್ನಡಿಗರ ತೆರಿಗೆ ಹಣವನ್ನು ಬಳಸುವಲ್ಲಿ ಮಜಾವಾದಿ ಮುಖ್ಯಮಂತ್ರಿ ಸದಾ ಸಿದ್ದ・ಹಸ್ತ・ರು ಎಂದು ಬಿಜೆಪಿ ಕರ್ನಾಟಕ ಟ್ಟೀಟ್ ಮಾಡಿದೆ.
ಮಸಾಜ್‌ ಕುರ್ಚಿ ಬೆಲೆಯ ಫೋಟೋವನ್ನು ಬಿಜೆಪಿ ಹಂಚಿಕೊಂಡಿದೆ. SHOWCIALIST ಸಿಎಂ, ಕನ್ನಡಿಗರ ತೆರಿಗೆ ಹಣದಲ್ಲಿ ಸಮಾಜವಾದಿಯ ಮಜವಾದಿ ಎಂದು ಟಾಂಗ್ ನೀಡಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1 ಲಕ್ಷ 87 ಸಾವಿರ ಕೋಟಿ ರು. ನಷ್ಟ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾಲು, ಅನುದಾನ ಹಂಚಿಕೆ, ಬರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ರಾಜ್ಯ ಸರ್ಕಾರದಿಂದ ಪ್ರತಿಭಟನೆ ನಡೆಸಿದ್ದರು.
Bharat, dekho!pic.twitter.com/UzBy6LL1pH
— BJP (@BJP4India)September 9, 2022

ಬರಗಾಲ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯ ತೀವ್ರ ಬರ ಎದುರಿಸುತ್ತಿದ್ದೇವೆ ಎಂದಿದ್ದ ಸಿದ್ದರಾಮಯ್ಯ ಅವರು ಇಂತಹ ಸಂದರ್ಭದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ದಿನ ಹೇಗೆ ಪ್ರಾರಂಭಿಸುತ್ತಾರೆ ಗೊತ್ತಾ?

ಪ್ರಧಾನಿ ಮೋದಿ ವಿರುದ್ಧ ಸರಣಿ ಪ್ರಶ್ನೆಗಳ ಟ್ಟೀಟ್​: ಉತ್ತರ ಕೊಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
